ತಮ್ಮ ಮುದ್ದಿನ ತಂಗಿಯ ಮದುವೆಗೆ 7 ಅಣ್ಣಂದಿರು ಕೊಟ್ಟ ಮರೆಯಲಾಗದ ಗಿಫ್ಟ್ ಇದು!

Published : Dec 09, 2016, 12:06 AM ISTUpdated : Apr 11, 2018, 12:56 PM IST
ತಮ್ಮ ಮುದ್ದಿನ ತಂಗಿಯ ಮದುವೆಗೆ 7 ಅಣ್ಣಂದಿರು ಕೊಟ್ಟ ಮರೆಯಲಾಗದ ಗಿಫ್ಟ್ ಇದು!

ಸಾರಾಂಶ

15 ರಿಂದ 46 ವಯಸ್ಸಿನ ಏಳು ಮಂದಿ ಅಣ್ಣಂದಿರು ತಮ್ಮ ತಂಗಿಯ ಮದುವೆ ದಿನಕ್ಕಾಗೆಂದೇ ಪ್ರಖ್ಯಾತ ನೃತ್ಯ ನಿರ್ದೇಶಕ ನಿಕ್ಕಿ ಫಾರ್ಮರ್ ಎಂಬಾತನಿಂದ ಡ್ಯಾನ್ಸ್'ನ್ನು ಕಲಿತು, ಅದನ್ನು ಆಕೆ ಮದುವೆಯಂದು ಮಾಡಿದ್ದಾರೆ. ಸಿಂಹದ ಮುಖವಾಡವನ್ನು ತೊಟ್ಟು ಪ್ರಾರಂಭವಾದ ಈ ನೃತ್ಯ 'ಮುದ್ದಿನ ತಂಗಿಯನ್ನು ಕಾಪಾಡುವ ಆಕೆಯ ಅಣ್ಣಂದಿರು' ಎಂಬುವುದನ್ನು ಸೂಚಿಸುತ್ತಿತ್ತು.

ಮದುವೆಯ ಸಂದರ್ಭದಲ್ಲಿ ನಿಮ್ಮ ಕುಟುಂಬಸ್ಥರು ಅದರಲ್ಲೂ ಅಪ್ಪ, ಅಮ್ಮ, ಅಕ್ಕ, ಅಣ್ಣ, ತಮ್ಮ, ತಂಗಿ ಹೀಗೆ ನಿಮಗೆ ತೀರಾ ಹತ್ತಿರದ ಸಂಬಂಧಿಗಳಿದ್ದರೆ ಖುಷಿಯಾಗುತ್ತದೆ. ಇನ್ನು ಈ ನಿಮ್ಮ ಪ್ರೀತಿ ಪಾತ್ರರು ಅಂದು ನಿಮಗಾಗಿ ಏನಾದರೂ ಸರ್ಪ್ರೈಜ್ ನೀಡಿದರೆ ಈ ಖುಷಿ ಇಮ್ಮಡಿಯಾಗುತ್ತದೆ.

ಅಣ್ಣಂದಿರಿಗೆ ತಮ್ಮ ತಂಗಿಯ ಮೇಲೆ ವಿಶೇಷ ಕಾಳಜಿ ಇರುತ್ತದೆ. ಆಕೆಯೊಡನೆ ದಿನವಿಡೀ ಜಗಳವಾಡಿ, ಗೋಳಾಡಿಸಿದರೂ ಆಕೆಗೆ ಸಮಸ್ಯೆ ಎದುರಾದಾಗ ಅದನ್ನು ಪರಿಹರಿಸಲು ಎಲ್ಲರಿಗಿಂತಲೂ ಮುಂಚೂಣಿಯಲ್ಲಿರುವವರು ಅಣ್ಣ. ಹೀಗೆ ಇಲ್ಲಿ 7 ಮಂದಿ ಅಣ್ಣಂದಿರು ತಮ್ಮ ಮುದ್ದಿನ ತಂಗಿಯ ಮದುವೆಯಂದು ಆಕೆಗಾಗಿ 'ಮರೆಯಲಾಗದ ಗಿಫ್ಟ್' ಒಂದನ್ನು ನೀಡಿದ್ದಾರೆ. ಬಹುಶಃ ಈ ಗಿಫ್ಟ್'ನ್ನು ಆ ಅದೃಷ್ಟವಂತ ತಂಗಿ ತನ್ನ ಜೀವಮಾನವಿಡೀ ಮರೆಯಲಾರಳೇನೋ...

ಅವರು ಕೊಟ್ಟ ಗಿಫ್ಟ್ ಏನು?

15 ರಿಂದ 46 ವಯಸ್ಸಿನ ಏಳು ಮಂದಿ ಅಣ್ಣಂದಿರು ತಮ್ಮ ತಂಗಿಯ ಮದುವೆ ದಿನಕ್ಕಾಗೆಂದೇ ಪ್ರಖ್ಯಾತ ನೃತ್ಯ ನಿರ್ದೇಶಕ ನಿಕ್ಕಿ ಫಾರ್ಮರ್ ಎಂಬಾತನಿಂದ ಡ್ಯಾನ್ಸ್'ನ್ನು ಕಲಿತು, ಅದನ್ನು ಆಕೆ ಮದುವೆಯಂದು ಮಾಡಿದ್ದಾರೆ. ಸಿಂಹದ ಮುಖವಾಡವನ್ನು ತೊಟ್ಟು ಪ್ರಾರಂಭವಾದ ಈ ನೃತ್ಯ 'ಮುದ್ದಿನ ತಂಗಿಯನ್ನು ಕಾಪಾಡುವ ಆಕೆಯ ಅಣ್ಣಂದಿರು' ಎಂಬುವುದನ್ನು ಸೂಚಿಸುತ್ತಿತ್ತು.

'ಆಕೆ ಮರೆಯಲಾಗದ ಮದುವೆಯ ಉಡುಗೊರೆ' ಎಂಬ ಶೀರ್ಷಿಕೆಯೊಂದಿಗೆ ಯೂ ಟ್ಯೂಬ್'ನಲ್ಲಿ ಅಪ್'ಲೋಡ್ ಮಾಡಿರುವ ಈ ವಿಡಿಯೋದಲ್ಲಿ, 'ನಾವು ಈ ನೃತ್ಯಕ್ಕಾಗಿ ಕೇವಲ ಕೇವಲ 6 ಗಂಟೆಯ ತರಬೇತಿ ಪಡೆದಿರುವುದಕ್ಕೆ ಬೇಜಾರಿದೆ. ಅದೇನಿದ್ದರೂ ನಮ್ಮ ತಂಗಿ ಈ ನಮ್ಮ ಉಡುಗೊರೆಯನ್ನು ತುಂಬಾ ಇಷ್ಟಪಟ್ಟಿದ್ದಾಳೆ. ಡ್ಯಾನ್ಸ್ ಮುಗಿಯುತ್ತಿದ್ದಂತೆಯೇ ಅವಳ ಕಣ್ಗಳಲ್ಲಿ ಆನಂದಭಾಷ್ಪವಿತ್ತು ಎಂದು ಹೆಮ್ಮೆಯಿಂದ ಬರೆದುಕೊಂಡಿದ್ದಾರೆ' ಆಕೆಯ ಅಣ್ಣಂದಿರು.    

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ 5 ಲಕ್ಷಣ ಕಂಡುಬಂದರೆ ಕರುಳಿನ ಕ್ಯಾನ್ಸರ್ ಬಂದಿರಬಹುದು ಎಂದರ್ಥ.. ಎಚ್ಚರಿಸಿದ ಗ್ಯಾಸ್ಟ್ರೋಎಂಟರಾಲಜಿಸ್ಟ್
ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..