(VIDEO) ಹೆಂಡತಿ 10 ವರ್ಷ ಲೈಂಗಿಕ ಕ್ರಿಯೆ ನಿರಾಕರಿಸಿದ್ದಕ್ಕೆ ಗಂಡ ಕೈಗೊಂಡ ಬೆಚ್ಚಿಬೀಳಿಸುವ ನಿರ್ಧಾರ

Published : Dec 08, 2016, 04:11 AM ISTUpdated : Apr 11, 2018, 01:08 PM IST
(VIDEO) ಹೆಂಡತಿ 10 ವರ್ಷ ಲೈಂಗಿಕ ಕ್ರಿಯೆ ನಿರಾಕರಿಸಿದ್ದಕ್ಕೆ ಗಂಡ ಕೈಗೊಂಡ ಬೆಚ್ಚಿಬೀಳಿಸುವ ನಿರ್ಧಾರ

ಸಾರಾಂಶ

`ನಾನು ಜಿಗುಪ್ಸೆಗೊಳಗಾಗಿದ್ದೇನೆ. ಕಳೆದ ಹತ್ತನ್ನೆರಡು ವರ್ಷಗಳಿಂದ ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಲ್ಲ. ಆಕೆ ನನ್ನನ್ನ ಪ್ರೀತಿಸುತ್ತಿಲ್ಲ. ನನ್ನ ಸನಿಹವೂ ಕೂರುವುದಿಲ್ಲ ಮತ್ತು ನನ್ನ ಬಯಕೆಗಳನ್ನ ತಿರಸ್ಕರಿಸುತ್ತಾಳೆ' ಎಂದು ನೊಂದ ಘಾಜಿ ಹೇಳಿಕೊಂಡಿದ್ದಾನೆ.

ಲಖನೌ(ಡಿ.08): ಪ್ರತಿಯೊಬ್ಬರ ದಾಂಪತ್ಯ ಜೀವನದಲ್ಲಿ ಲೈಂಗಿಕ ಸಂಬಂಧ ಅತ್ಯಂತ ಪ್ರಮುಖವಾದದ್ದು, ಮಾನಸಿಕವಾಗಿ ಬೆರೆಯುವ ಜೋಡಿ ದೈಹಿಕವಾಗಿ ಒಂದಾದರೆ ದಾಂಪತ್ಯಕ್ಕೊಂದು ಅರ್ಥ ಬರುತ್ತದೆ. ಆದರೆ, ಇಲ್ಲಿ ಹೊಂದಾಣಿಕೆ ಮೂಡದಿದ್ದಾಗ ಎಂತಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಉತ್ತರಪ್ರದೇಶದ ಈ ಪ್ರಕರಣ ಸಾಕ್ಷಿಯಾಗಿದೆ.

37 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ 10 ವರ್ಷಗಳ ಕಾಲ ದೈಹಿಕ ಸಂಪರ್ಕಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಜಿಗುಪ್ಸೆಗೊಂಡ ವ್ಯಕ್ತಿ ಬೆಚ್ಚಿ ಬೀಳಿಸುವ ನಿರ್ಧಾರ ಕೈಗೊಂಡಿದ್ದಾನೆ. ಈ ವಾರ ಮತ್ತೆ ಪತ್ನಿಯನ್ನ ಹಾಸಿಗೆಗೆ ಕರೆದೊಯ್ಯುವ ಪ್ರಯತ್ನ ನಡೆಸಿ ಫಲ ನೀಡದಿದ್ದಾಗ ತೀವ್ರ ಬೇಸರಗೊಂಡ ಘಾಜಿ ಎಂಬಾತ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಮರ್ಮಾಂಗ ಕತ್ತರಿಸಿಕೊಂಡು ನರಳುತ್ತಿದ್ದ ಘಾಜಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

`ನಾನು ಜಿಗುಪ್ಸೆಗೊಳಗಾಗಿದ್ದೇನೆ. ಕಳೆದ ಹತ್ತನ್ನೆರಡು ವರ್ಷಗಳಿಂದ ನಾವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಲ್ಲ. ಆಕೆ ನನ್ನನ್ನ ಪ್ರೀತಿಸುತ್ತಿಲ್ಲ. ನನ್ನ ಸನಿಹವೂ ಕೂರುವುದಿಲ್ಲ ಮತ್ತು ನನ್ನ ಬಯಕೆಗಳನ್ನ ತಿರಸ್ಕರಿಸುತ್ತಾಳೆ' ಎಂದು ನೊಂದ ಘಾಜಿ ಹೇಳಿಕೊಂಡಿದ್ದಾನೆ.

ಈ ಬಗ್ಗೆ ಪ್ರತಿಕ್ರಿಸಿರುವ ಪತ್ನಿ,`ನನ್ನ ಪತಿ ದಿನ ರಾತ್ರಿ ಕುಡಿದು ಬರುತ್ತಿದ್ದ, ಹೀಗಾಗಿ, ತಮಾಷೆಯಾಗಿ ಸೆಕ್ಸ್ ನಿರಾಕರಿಸಿದ್ದೆ ಎಂದಿದ್ದಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವ್ಯಕ್ತಿಯ ಸ್ವಭಾವ ಅರ್ಥ ಮಾಡಿಕೊಳ್ಳಲು ಸುಲಭ ಮಾರ್ಗ ಹೇಳಿಕೊಟ್ಟ ಚಾಣಕ್ಯರು
ಅತ್ತೆ ಮನೆಯವರು ಒರಟಾಗಿ ವರ್ತಿಸಿದರು ಎಂದು ಗಂಡನ ಮನೆಗೆ ಬಂದ 20 ನಿಮಿಷದಲ್ಲಿ ಮದುವೆ ಮುರಿದ ಯುವತಿ