(ವಿಡಿಯೋ)ತನ್ನ ನಾಯಿಯನ್ನು ಕಾಪಾಡಲು ಕಾಂಗರೂನೊಂದಿಗೆ ಸೆಣಸಾಡಿದನೀತ!

Published : Dec 08, 2016, 03:11 AM ISTUpdated : Apr 11, 2018, 12:41 PM IST
(ವಿಡಿಯೋ)ತನ್ನ ನಾಯಿಯನ್ನು ಕಾಪಾಡಲು ಕಾಂಗರೂನೊಂದಿಗೆ ಸೆಣಸಾಡಿದನೀತ!

ಸಾರಾಂಶ

ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾಂಗರೂ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನ ಮುದ್ದಿನ ನಾಯಿಯನ್ನು ರಕ್ಷಿಸಲು ತನ್ನ ಜೀವದ ಹಂಗು ತೊರೆದು ಕಾಂಗರೂ ಜೊತೆ ಸೆಣಸಾಡುತ್ತಾನೆ. ಧೈರ್ಯದಿಂದ ಮುನ್ನುಗ್ಗಿದ ಈತ ಕಾಂಗರೂ ಮುಖಕ್ಕೆ ಹೊಡೆದು ತನ್ನ ನಾಯಿಯನ್ನು ಅದರ ಕೈಯಿಂದ ಬಿಡಿಸಿಕೊಳ್ಳಲು ಯಶಸ್ವಿಯಾಗು

ನಾಯಿಗಳು ಮನುಷ್ಯನ ಉತ್ತಮ ಸ್ನೇಹಿತರು ಎಂಬ ಮಾತಿದೆ ಆದರೆ ಎಲ್ಲಿರುವ ವಿಡಿಯೋವೊಂದು ತನ್ನ ಮುದ್ದಿನ ನಾಯಿಯನ್ನು ರಕ್ಷಿಸಲು ಮನುಷ್ಯ ತನ್ನ ಜೀವವನ್ನೇ ಪಣಕ್ಕಿಡಬಲ್ಲ ಎಂಬುವುದು ಸಾಬೀತಾಗಿದೆ. ಅಂತಹುದೇನಿದೆ ಈ ವಿಡಿಯೋದಲ್ಲಿ ಅಂತೀರಾ? ಹಾಗಾಧ್ರೆ ಈ ಸ್ಟೋರಿ ಓದಿ.

ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಾಂಗರೂ ಕೈಯಲ್ಲಿ ಸಿಕ್ಕಿಹಾಕಿಕೊಂಡಿರುವ ತನ್ನ ಮುದ್ದಿನ ನಾಯಿಯನ್ನು ರಕ್ಷಿಸಲು ತನ್ನ ಜೀವದ ಹಂಗು ತೊರೆದು ಕಾಂಗರೂ ಜೊತೆ ಸೆಣಸಾಡುತ್ತಾನೆ. ಧೈರ್ಯದಿಂದ ಮುನ್ನುಗ್ಗಿದ ಈತ ಕಾಂಗರೂ ಮುಖಕ್ಕೆ ಹೊಡೆದು ತನ್ನ ನಾಯಿಯನ್ನು ಅದರ ಕೈಯಿಂದ ಬಿಡಿಸಿಕೊಳ್ಳಲು ಯಶಸ್ವಿಯಾಗುತ್ತಾನೆ.

ಸಾಮಾಜಿಕ ಜಾಲಾತಾಣಗಳಲ್ಲಿ ನೀಡಿರುವ ವಿವರಣೆ ಪ್ರಕಾರ ಈ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದು, ಬೇಟೆಗಾರರ ತಂಡವೊಂದು ಕ್ಯಾನ್ಸರ್'ನಿಂದ ಬಳಲುತ್ತಿರುವ ವ್ಯಕ್ತಿಯ ಚಿಕಿತ್ಸೆಗಾಗಿ ಕಾಡು ಹಂದಿಯನ್ನು ಹಿಡಿಯಲು ಅರಣ್ಯಕ್ಕೆ ತೆರಳಿತ್ತು. ಹಂದಿಗಳನ್ನು ಹಿಡಿಯಲೆಂದೇ ತರಬೇತಿ ನೀಡಿದ್ದ ನಾಯಿಗಳೂ ಇವರೊಂದಿಗೆ ಕಾಡಿಗೆ ತೆರಳಿತ್ತು. ದುರಾದೃಷ್ಟವಶಾತ್ ನಾಯಿಯೊಂದು ಕಾಂಗರೂ ಕೈಯಲ್ಲಿ ಸಿಲುಕಿಕೊಂಡು ಬಿಡಿಸಿಕೊಳ್ಳಲು ಒದ್ದಾಡುತ್ತದೆ. ಇದನ್ನು ಕಂಡ ಬೇಟೆಗಾರ ತನ್ನ ಪ್ರಾಣವನ್ನು ಪಣಕ್ಕಿಟ್ಟು ಕಾಂಗರೂನೊಂದಿಗೆ ಕಾದಾಡಿ ತನ್ನ ನಾಯಿಯನ್ನು ಬಿಡಿಸಿಕೊಳ್ಳುತ್ತದೆ.

ಈ ವಿಡಿಯೋಗೆ ಹಲವಾರು ಕಮೆಂಟ್'ಗಳು ಬಂದಿವೆ. ಇವುಗಳಲ್ಲಿ ಕೆಲವರು ಈ ವಿಡಿಯೋ ಹಾಸ್ಯಾಸ್ಪದವಾಗಿದೆ ಎಂದಿದ್ದರೆ, ಮತ್ತೆ ಕೆಲವರು ಕಾಂಗರೂ ಕುರಿತಾಗಿ ಕನಿಕರ ವ್ಯಕ್ತಪಡಿಸಿದ್ದಾರೆ.  

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇಡ್ಲಿ-ದೋಸೆಗಾಗಿ ಹಿಟ್ಟು ಎಷ್ಟು ಸಮಯದವರೆಗೆ ಹುದುಗಬೇಕು?, ತಜ್ಞರ ಈ ರಹಸ್ಯ ತಿಳಿಯಿರಿ
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು