ಮನುಷ್ಯ ಒಗೆದ ಬಟ್ಟೆ ಧರಿಸದೇ ಹೋದರೆ ಅನೇಕ ಕಾಯಿಲೆಗಳು ಕಟ್ಟಿಟ್ಟ ಬುತ್ತಿ. ಅದರಲ್ಲಿಯೂ ಒಳ ಉಡುಪುಗಳನ್ನು ಸ್ವಚ್ಛವಾಗಿ ಒಗೆದು ಹಾಕಿಕೊಳ್ಳದೇ ಹೋದರೆ ಮಾರಾಣಾಂತಿಕ ಕಾಯಿಲೆಗಳೂ ಕಾಡಬಹುದು. ಹುಷಾರ್!
ಹೆಚ್ಚಿನವರು ತಮ್ಮ ಹೊರಗಿನ ಡ್ರೆಸ್‌ನೆಡೆ ಗಮನಿಸುತ್ತಾರೆ. ಆದರೆ ಅಂಡರ್ ವೇರ್ ಅಥವಾ ಅಂಡರ್ ಗಾರ್ಮೆಂಟ್ಸ್ ಹೈಜಿನ್ ಬಗ್ಗೆ ಗೊತ್ತೇ ಇರುವುದಿಲ್ಲ. ಇದರಿಂದ ದೇಹದಿಂದ ವಿಚಿತ್ರ ವಾಸನೆ ಬಂದು, ಹಲವು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಯೂರಿನರಿ ಟ್ರ್ಯಾಕ್ಟ್ ಇನ್ಫೆಕ್ಷನ್‌ನಿಂದ ಹಿಡಿದು, ಮತ್ತಿತರ ರೋಗಗಳಿಗೂ ಕಾರಣವಾಗಬಲ್ಲದು.
ಯುಟಿಐ ಅರ್ಥಾತ್ ಮೂತ್ರ ಮಾರ್ಗ ಸೋಂಕು ಒಂದು ಬ್ಯಾಕ್ಟಿರಿಯಾದಿಂದ ಬರುವ ರೋಗ. ಇದು ಮೂತ್ರನಾಳದ ಭಾಗದಲ್ಲಿ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ.
ಅಂಡರ್ ಗಾರ್ಮೆಂಟ್ ಅನ್ನು ನೀವು ವಾಶ್ ಮಾಡಿದ ನಂತರ ಬಿಸಿಲಿನಲ್ಲಿ ಒಣಗಿಸಬೇಕು. ಬೆಳಕು ಮತ್ತು ಗಾಳಿಯಿಂದ ದೂರವಿಟ್ಟರೆ ಹಾಗೂ ಜನನಾಂಗಕ್ಕೆ ನಿರಂತರ ಸಂಪರ್ಕದಲ್ಲಿರುವುದರಿಂದ ಕೀಟಾಣುಗಳು ಉತ್ಪತ್ತಿಯಾಗುತ್ತದೆ.
ಶುದ್ಧ ಒಳವಸ್ತ್ರ ಧರಿಸದೇ ಇದ್ದರೆ ಕಿಡ್ನಿ ಸ್ಟೋನ್ ಉಂಟಾಗಬಹುದು. ಇದು ಅಸುರಕ್ಷಿತ ಲೈಂಗಿಕ ಸಂಬಂಧದಿಂದಲೂ ಬರಬಹುದು.
ಸ್ವಚ್ಛವಾಗಿರದ ಒಳವಸ್ತ್ರ ಧರಿಸದೇ ಇದ್ದರೆ, ಕ್ಲೀನ್ ಆಗಿರದ ಟಾಯ್ಲೆಟ್ ಬಳಸಿದರೆ ವೈರಸ್ ಹರಡಲೂಬಹುದು. ಇದರಿಂದ ಹಾನಿಕಾರಕ ಕೀಟಾಣು ದೇಹದೊಳಗೆ ಪ್ರವೇಶಿಸುತ್ತದೆ. ಇದರಿಂದ ಇನ್ಫೆಕ್ಷನ್ ಗ್ಯಾರಂಟಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.