ಸಂಪ್ರದಾಯ ಉಳಿಸಲು ಎತ್ತಿನ ಗಾಡಿ ಏರಿ ಬಂದ ವಧು, ನವಜೋಡಿಯ ಕಾರ್ಯಕ್ಕೆ ಭೇಷ್ ಎಂದ ನೆಟ್ಟಿಗರು

By Vinutha Perla  |  First Published Mar 16, 2023, 9:15 AM IST

ಭಾರತೀಯ ಸಂಪ್ರದಾಯದಲ್ಲಿ ಮದುವೆ ಅಂದ್ರೆ ಅಲ್ಲಿ ಹಲವಾರು ಅರ್ಥಪೂರ್ಣ ಸಂಪ್ರದಾಯಗಳಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಲೇಟೆಸ್ಟ್‌ ಟ್ರೆಂಡ್, ಫ್ಯಾಷನ್‌ ಎಂಬ ಹೆಸರಿನಲ್ಲಿ ಹೊಸ ಹೊಸ ಆಚರಣೆಗಳು ಶುರುವಾಗಿವೆ. ಹಳೆ ಸಂಪ್ರದಾಯಗಳು ಮರೆತು ಹೋಗಿವೆ. ಈ ಮಧ್ಯೆ ಒಡಿಶಾದಲ್ಲೊಂದು ನವ ಜೋಡಿ ಹಳೆಯ ಸಂಪ್ರದಾಯಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.
 


ಮದುವೆ ಅಂದ್ರೆ ಪ್ರತಿಯೊಬ್ಬರ ಜೀವನದಲ್ಲಿಯೂ ತುಂಬಾ ವಿಶೇಷವಾದ ದಿನ. ಅದರಲ್ಲೂ ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಅನ್ನೋದು ಹಲವಾರು ಸಂಪ್ರದಾಯಗಳೊಂದಿಗೆ ಕೂಡಿರುತ್ತದೆ. ಪ್ರತಿಯೊಂದು ಕಾರ್ಯಕ್ರಮಗಳು ಕ್ರಮಬದ್ಧವಾಗಿ, ಅರ್ಥಪೂರ್ಣವಾಗಿ ನಡೆಯುತ್ತವೆ. ಒಂದೊಂದು ಶಾಸ್ತ್ರಕ್ಕೂ ಒಂದೊಂದು ಅರ್ಥವಿರುತ್ತದೆ. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಇಂಥಾ ಹಲವು ಸಂಪ್ರದಾಯಗಳು ಮರೆಯಾಗುತ್ತಿವೆ. ಲೇಟೆಸ್ಟ್‌ ಟ್ರೆಂಡ್, ಫ್ಯಾಷನ್‌ ಎಂಬ ಹೆಸರಿನಲ್ಲಿ ಹೊಸ ಹೊಸ ಆಚರಣೆಗಳು ಶುರುವಾಗಿವೆ. ಹಳೆ ಸಂಪ್ರದಾಯಗಳು ಮರೆತು ಹೋಗಿವೆ. ಡ್ಯಾನ್ಸ್‌, ಡಿಜೆ, ಮೋಜು-ಮಸ್ತಿಯ ಮಧ್ಯೆ ಜನರು ಹಳೆಯ ಸಂಪ್ರದಾಯವನ್ನು ಮರೆತುಬಿಡುತ್ತಿದ್ದಾಎ. ಈ ಮಧ್ಯೆ ಒಡಿಶಾದಲ್ಲೊಂದು ನವ ಜೋಡಿ ಹಳೆಯ ಸಂಪ್ರದಾಯಗಳಿಗೆ ಜೀವ ತುಂಬುವ ಕೆಲಸ ಮಾಡಿದ್ದಾರೆ.

ಮದುವೆ ಕಾರ್ಯಕ್ರಮದಲ್ಲಿ ಎತ್ತಿನಬಂಡಿ ಬಳಕೆ ಮಾಡಿದ ಜೋಡಿ
ಮದುವೆಯ (Marriage) ಶಾಸ್ತ್ರ ಸಂಪ್ರದಾಯಗಳೆಲ್ಲವೂ ಹೊಸ ಹೊಸ ಟ್ರೆಂಡ್​ಗಳ ಜತೆಯಲ್ಲೇ ಸಾಗುವಾಗ ಇಲ್ಲೊಂದು ನವಜೋಡಿ ಇಂದಿನ ದಿನಗಳಲ್ಲಿ ಬಹಳ ವಿರಳವಾಗಿರುವ ಸಂಪ್ರದಾಯ (Tradition)ವನ್ನು ಮುಂದುವರೆಸಿಕೊಂಡು ಹೋಗಿದ್ದಾರೆ. ಯುವ ದಂಪತಿ ತಮ್ಮ ಮದುವೆ ಕಾರ್ಯಕ್ರಮದಲ್ಲಿ ಹಿಂದಿನ ಕಾಲದಂತೆ ಎತ್ತಿನ ಬಂಡಿಯ (Bullock cart) ಬಳಕೆ ಮಾಡಿದ್ದಾರೆ. ಒಡಿಶಾದ ಗಂಜಾಂ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.

Tap to resize

Latest Videos

ವಧುವಿಗೆ ಪಿಯುಸಿಯಲ್ಲಿ ಕಡಿಮೆ ಮಾರ್ಕ್ಸ್‌, ಮದುವೆ ಕ್ಯಾನ್ಸಲ್ ಮಾಡಿದ ವರ!

ಎತ್ತಿನಬಂಡಿಗೆ ಬಿದಿರು, ಹೂವಿನ ಅಲಂಕಾರ
ಭುವನೇಶ್ವರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ವಧು ಸರಿತಾ ಬೆಹೆರಾ ಮತ್ತು ವರ ಮಹೇಂದ್ರ ನಾಯಕ್ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ತಮ್ಮ ಮದುವೆಯಲ್ಲಿ, ಇಂದಿನ ದಿನಗಳಲ್ಲಿ ಅಪರೂಪವಾಗಿ ಅನುಸರಿಸುತ್ತಿರುವ ಕೆಲವು ಹಳೆಯ ಸಂಪ್ರದಾಯಗಳನ್ನು ಅನುಸರಿಸಲು ಬಯಸಿದ್ದರು. ಮಹೇಂದ್ರನು ವಧುವಿನ ಸ್ಥಳಕ್ಕೆ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಬಂದನು, ಸರಿತಾ ಮದುವೆಯ ನಂತರ ತನ್ನ ಅತ್ತೆಯ ಮನೆಗೆ ಅಲಂಕೃತವಾದ ಎತ್ತಿನ ಬಂಡಿಯಲ್ಲಿ ಹೋದಳು.

ಮದುವೆಯನ್ನು ಸ್ಮರಣೀಯ ಘಟನೆಯನ್ನಾಗಿ ಮಾಡಲು, ಸರಿತಾಳನ್ನು ಮದುವೆ ಸ್ಥಳಕ್ಕೆ ಕರೆತರಲು ಹತ್ತಿರದ ಹಳ್ಳಿಯಿಂದ ಎತ್ತಿನ ಬಂಡಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ಮಹೇಂದ್ರ ನಿರ್ಧರಿಸಿ, ಮಹೇಂದ್ರ ಮತ್ತು ಅವರ ಸ್ನೇಹಿತರು ಎತ್ತಿನ ಗಾಡಿಗೆ ಬಿದಿರು ಮತ್ತು ಹೂವುಗಳಿಂದ ಅಲಂಕರಿಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.  ವಧುವಿಗೆ ಮಾತ್ರ ಎತ್ತಿನಗಾಡಿಯ ಪ್ರಯಾಣ ಕೊಂಚ ಕಷ್ಟಕರವಾಗಿ ಕಂಡುಬಂತು. ತಮ್ಮ ಮದುವೆಯಲ್ಲಿ ತಮ್ಮಿಷ್ಟದಂತೆ ಈ ಆಚರಣೆಯನ್ನು ನಡೆಸುವ ಮೂಲಕ ಜನತೆಗೆ ಹಳೆಯ ಸಾಂಪ್ರದಾಯಿಕ ಆಚರಣೆಗಳ ಬಗ್ಗೆ ಮತ್ತೆ ನೆನಪಾಗುವಂತೆ ಮಾಡಿದ್ದಾರೆ ಈ ಜೋಡಿ.

Relationship Tips: ಮದುವೆಯಾಗೋಕೆ ಯಾವ ವಯಸ್ಸು ಬೆಸ್ಟ್? ಇಪ್ಪತ್ತು ವರ್ಷನಾ ಮೂವತ್ತಾ?

ನಮ್ಮ ಮದುವೆಗೆ ಕಾರು ಇತ್ಯಾದಿ ದೊಡ್ಡ ವಾಹನಗಳ ಅಗತ್ಯವಿಲ್ಲ. ನಾವು ಸಾಂಪ್ರಾದಾಯಿಕ ಆಚರಣೆಯನ್ನೇ ಮುಂದುವರೆಸುತ್ತೇವೆ ಎಂದು ಮೊದಲೇ ಈ ಬಗ್ಗೆ ವಧು-ವರರು ತಮ್ಮ ಎರಡೂ ಕುಟುಂಬಗಳಿಗೆ ಮಾಹಿತಿ ನೀಡಿದ್ದರು. ನಂತರ ಸ್ನೇಹಿತರು, ಕುಟುಂಬದವರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಟ್ಟರು. ಈ ಮದುವೆಗೆ ಸಾಮಾಜಿಕ ಜಾಲತಾಣದಲ್ಲಿ (Social media) ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ರೀತಿಯ ಆಚರಣೆ ಹಿಂದಿನ ದಿನಗಳಲ್ಲಿ ಬಹಳ ಸಾಮಾನ್ಯವಾಗಿತ್ತು. ನವ ವಿವಾಹಿತ ವರನನ್ನು ಕುದುರೆಯ ಮೇಲೆ ಕೂರಿಸಿ ಮದುವೆಯ ಮನೆಗೆ ಕರೆ ತಂದರೆ, ವಧುವನ್ನು (Bride) ಅತ್ತೆಯ ಮನೆಗೆ ಎತ್ತಿನ ಬಂಡಿಯಲ್ಲಿ ಕೂರಿಸಿ ಕಳುಹಿಸುವ ಸಾಂಪ್ರಾದಾಯಿಕ ಆಚರಣೆಯಿತ್ತು. ಆ ನಂತರ ಐಷಾರಾಮಿ ಜೀವನಕ್ಕೆ ಜನರು ಒಗ್ಗಿಕೊಂಡ ಬಳಿಕ ಮದುವೆ ದಿಬ್ಬಣಗಳಲ್ಲಿ ಕಾರುಗಳನ್ನೇ ಹೆಚ್ಚಾಗಿ ಬಳಸಲಾಗುತ್ತಿದೆ. ಎಷ್ಟೋ ಜನರ ಮದುವೆಗಳಲ್ಲಿ ತಮಗೆ ಕಾರಿಲ್ಲದಿದ್ದರೂ ಬಾಡಿಗೆಯ ಕಾರನ್ನಾದರೂ ಪಡೆದು ಹೆಣ್ಣನ್ನು ಗಂಡನ ಮನೆಗೆ ಗಂಡನ್ನು ಹೆಣ್ಣಿನ ಮನೆಗೆ ಕಳುಹಿಸುವ ಶಾಸ್ತ್ರ ಮಾಡುತ್ತಾರೆ. ಹೀಗಿರುವಾಗ ಇದ್ಯಾವುದು ಕೂಡ ಅಗತ್ಯವಿಲ್ಲ. ಇದಕ್ಕಿಂತ ನಮ್ಮ ಹಳೆಯ ಸಂಪ್ರದಾಯಗಳೇ ಮೇಲು ಎಂಬುದನ್ನು ಈ ನವಜೋಡಿ ಸಮಾಜಕ್ಕೆ ತೋರಿಸಿಕೊಟ್ಟಿದೆ.

click me!