
ಹುಡುಗಿ ಹುಡುಕಿ ಹುಡುಕಿ ಸಾಕಾಗಿದೆಯಾ...! ಯಾವ ಮ್ಯಾಟ್ರಿಮೋನಿಯಲ್ಲೂ ಸೆಟ್ ಆಗುತ್ತಿಲ್ಲವೇ ... ಅದಕ್ಕೆಲ್ಲ ಉತ್ತರ ಇಲ್ಲಿದೆ... ಇಲ್ಲಿ ನಿಮ್ಮ ಹುಡುಕಾಟಕ್ಕೆ ತೆರೆ ಬೀಳುವುದು ಗ್ಯಾರಂಟಿ.. ನೂರಾರು ಮ್ಯಾಟ್ರಿಮೋನಿ ತಾಣಗಳು ಇಂದು ಮದುವೆಯ ಸಂಬಂಧ ಬೆಸೆಯುವ ಕೆಲಸ ಮಾಡುತ್ತಿದೆ. ಒಂದೊಂದರದ್ದು ಒಂದೊಂದು ವಿಧಾನ. ನಿಮ್ಮ ಪ್ರೊಫೈಲ್ ಮತ್ತು ಜಾತಿ ಆಧರಿಸಿ ಮ್ಯಾಚಿಂಗ್ ಕಳುಹಿಸಿಕೊಡುವುದು ಸಾಮಾನ್ಯ
ಆದರೆ ಇಲ್ಲೊಂದು ಮ್ಯಾಟ್ರಿಮೋನಿಯಿದೆ. ಇದು ಸಂಪೂರ್ಣ ಭಿನ್ನ. ಇದು ನಿಮ್ಮ ಮೆದುಳಿನ ಶಕ್ತಿ, ನಿಮ್ಮ ಇಂಟಜಲಿಜನ್ಸ್, ಪ್ರಶ್ನೆಗಳಿಗೆ ನೀವು ಉತ್ತರಿಸುವ ಮಾನದಂಡ, ನಿಮ್ಮ ವರ್ತನೆ ಇವುಗಳನ್ನು ಆಧರಿಸಿ ಮ್ಯಾಚಿಂಗ್ ಪ್ರೊಫೈಲ್ ಗಳನ್ನು ಹುಡುಕಿ ತಂದಿಡುತ್ತದೆ. ಬನಿಹಾಲ್ ಮ್ಯಾಟ್ರಿಮೋನಿ ಇಂಥದ್ದೊಂದು ಕ್ರಮ ಅನುಸರಿಸಿಕೊಂಡು ಬಂದಿದ್ದು ಹ್ಯುಮನ್ ಸೈಕಾಲಾಜಿ ಆಧಾರದಲ್ಲಿ ಸಂಬಂಧಗಳನ್ನು ಬೆಸೆಯುವ ಕೆಲಸ ಮಾಡುತ್ತಿದೆ.
ಮುತ್ತಿನಲ್ಲಿರೋದು ಮತ್ತು ಮಾತ್ರವಲ್ಲ.!!
ಮದುವೆಯಾಗಲು ಬಯಸುವವರು ನೀಡಿದ ಉತ್ತರಗಳನ್ನು ಆಧರಿಸಿಯೇ ಅವರ ವ್ಯಕ್ತಿತ್ವ ಅರ್ಥ ಮಾಡಿಕೊಳ್ಳುತ್ತೇವೆ. ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ನಂತರ ನಾವು ಸಜೆಸ್ಟ್ ಮಾಡುವ ಪ್ರೊಫೈಲ್ ಗಳು ಸುಲಭವಾಗಿ ಹೊಂದಾಣಿಕೆಯಾಗುತ್ತದೆ ಎಂದು ಬನಿಹಾಲ್ ಮ್ಯಾಟ್ರಿಮೋನಿ ಸಂಸ್ಥಾಪಕರಲ್ಲೊಬ್ಬರಾದ ಇಶ್‌ದೀಪ್ ಸಾಹ್ವೇಯ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.