
ಬೆಂಗಳೂರು : ಭಾರತದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಡಯಾಬಿಟಿಸ್ ರೋಗಿಗಳಿದ್ದು, ಡಯಾಬಿಟಿಸ್ ಕ್ಯಾಪಿಟಲ್ ಎನಿಸಿಕೊಳ್ಳುವತ್ತ ಸಾಗುತ್ತಿದೆ. ಜೀವನ ಪರ್ಯಂತ ಕಾಡುವ ಈ ಸಮಸ್ಯೆಗೆ ಗುಣಕಾರಿಯಾದ ಯಾವುದೇ ಔಷಧಗಳಿಲ್ಲದಿದ್ದರು ನಿಯಂತ್ರಣ ಮಾಡಲು ಔಷಧಗಳಿದೆ. ಆದರೆ ಈ ಆಯುರ್ವೇದ ಔಷಧಿಯು ಗುಣಕಾರಿ ಎಂದು ಕೆಲ ಸಂಶೋಧನೆಗಳು ತಿಳಿಸಿವೆ.
ಸಂಶೋಧನೆಯೊಂದರ ಪ್ರಕಾರ ಡಯಾಬಿಟಿಸ್ ಅನ್ನು ಮಾವಿನ ಎಲೆಗಳು ಗುಣ ಮಾಡುತ್ತದೆಯಂತೆ. ಮಾವಿನ ಎಲೆಗಳಲ್ಲಿ ಡಯಾಬಿಟಿಸ್ ಗುಣ ಮಾಡುವ ಅಂಶವಿದ್ದು, ಸೂಕ್ತ ಪರಿಣಾಮವನ್ನು ಉಂಟು ಮಾಡುತ್ತದೆ. ಅಲ್ಲದೇ ಅಸ್ತಮಾ ನಿವಾರಣೆ ಮಾಡುವ ಗುಣವೂ ಕೂಡ ಅದರಲ್ಲಿದೆ. ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣ ಸೂಕ್ತ ಪ್ರಮಾಣದಲ್ಲಿ ಇರಿಸಿ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಇನ್ಸುಲಿನ್ ಅಂಶವನ್ನು ಉತ್ತಮಗೊಳಿಸಿ ಸೂಕ್ತ ನ್ಯೂಟ್ರಿಶನ್ ದೇಹಕ್ಕೆ ಒದಗುವಂತೆ ಮಾಡುತ್ತದೆ. ಮುಖ್ಯವಾಗಿ ವಿಟಮಿನ್ ಸಿ, ಫೈಬರ್, ಪೆಕ್ಟಿನ್ ಅಂಶವನ್ನು ಒದಗಿಸುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಲೇಖನದಲ್ಲಿ ತಿಳಿಸಲಾಗಿದೆ.
ಹೇಗೆ ಬಳಕೆ ಮಾಡಬೇಕು..?
15 ಮಾವಿನ ಎಲೆಗಳನ್ನು 150 ಎಂ ಎಲ್ ನೀರಿನಲ್ಲಿ ಕುದಿಸಿ ರಾತ್ರಿ ಪೂರಾ ಇರಿಸಿ ಬೆಳಗ್ಗೆ ಎದ್ದು ಕಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಮೂರು ತಿಂಗಳ ಕಾಲ ಪ್ರತಿ ದಿನವೂ ಕೂಡ ಸೇವಿಸಿದಲ್ಲಿ ಪರಿಣಾಮಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.