ಎಲ್ಲಿಗಾದರೂ ಹೋಗಿ, ಕಾರಲ್ಲಿ ಮಾತ್ರ ಈ ವಸ್ತುಗಳು ಇರುವಂತೆ ನೋಡಿಕೊಳ್ಳಿ

By Suvarna News  |  First Published Nov 9, 2022, 3:32 PM IST

ಸ್ವಂತ ಕಾರಿದ್ದರೆ ಎಲ್ಲಿ ಬೇಕಾದ್ರೂ ಸುತ್ತಾಡಬಹುದು. ಸಂಪೂರ್ಣ ಸ್ವಾತಂತ್ರ್ಯ ಹೊಂದಿರುವ ನಾವು ಕಾರು ಏರುವ ಮೊದಲು ಕೆಲ ವಿಷ್ಯ ನೆನಪಿಟ್ಟುಕೊಳ್ಳಬೇಕು. ನಮ್ಮ ಪ್ರಯಾಣ ಸುರಕ್ಷಿತ ಹಾಗೂ ಆರಾಮದಾಯಕವಾಗಿರಬೇಕೆಂದ್ರೆ ಕೆಲ ವಸ್ತು ಕಾರಿನಲ್ಲಿರಬೇಕು. 
 


ಸಾರ್ವಜನಿಕ ಸಾರಿಗೆಗಿಂತ ಸ್ವಂತ ವಾಹನಗಳ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಪ್ರತಿಯೊಬ್ಬರ ಮನೆಯಲ್ಲೂ ಬೈಕ್, ಕಾರು ಸಾಮಾನ್ಯ ಎನ್ನುವಂತಾಗಿದೆ. ಕಾರಿನ ಪ್ರಯಾಣ ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕವಾಗಿರುತ್ತದೆ. ಸ್ವಂತ ವಾಹನವಿದ್ರೆ ನಮಗೆ ಮನಸ್ಸು ಬಂದಾಗ ನಾವು ಪ್ರಯಾಣ ಬೆಳೆಸಬಹುದು. ವಾಹನಕ್ಕೆ ಗಂಟೆಗಟ್ಟಲೆ ಕಾಯುವ ಅಗತ್ಯವಿರುವುದಿಲ್ಲ. ಬೇಕಾದಲ್ಲಿ ಸುತ್ತಿ ಬರುವ ಅವಕಾಶ ಸ್ವಂತ ವಾಹನದ ಅನುಕೂಲಗಳಲ್ಲಿ ಒಂದು. ಹಾಗಾಗಿಯೇ ಜನರು ದೂರದೂರದ ಪ್ರಯಾಣಕ್ಕೆ ಕೂಡ ಕಾರ್ ಬಳಸ್ತಾರೆ. ಕಾರಿನಲ್ಲಿ ಪ್ರಯಾಣ ಬೆಳೆಸುವುದು ಆರಾಮದಾಯಕ ಹೌದು. ಆದ್ರೆ ಕಾರು ಏರುವ ಮೊದಲು ಇಲ್ಲವೇ ನೀವು ಹೊಸ ಕಾರು ಖರೀದಿ ಮಾಡಿದ್ದೀರಿ ಎಂದಾದ್ರೆ ನಿಮ್ಮ ಕಾರಿನಲ್ಲಿ ಕೆಲ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಮರೆಯಬೇಡಿ. ಕೆಲ ವಸ್ತುಗಳು ತುರ್ತು ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತವೆ. ನಾವಿಂದು ಕಾರಿನಲ್ಲಿ ಯಾವ ವಸ್ತುಗಳು ಅಗತ್ಯವಾಗಿ ಇರಬೇಕು ಎಂಬುದನ್ನು ನಿಮಗೆ ಹೇಳ್ತೇವೆ.

ಕಾರಿ (Car) ನಲ್ಲಿ ಅಗತ್ಯವಾಗಿರಲಿ ಈ ವಸ್ತು (Material) : 
ಮಹತ್ವದ ದಾಖಲೆ (Documents) :
ಯಾವುದೇ ವಾಹನ ಚಾಲನೆ ಮಾಡುವಾಗ  ಕೆಲವು ದಾಖಲೆಗಳನ್ನು ಹೊಂದಿರಬೇಕು. ಕಾರಿನ ಪ್ರಮುಖ ಪೇಪರ್‌ಗಳು ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving license)  ಸೇರಿ ಕೆಲ ದಾಖಲೆಗಳನ್ನು ನೀವು ಕಾರಿನಲ್ಲಿ ಇಟ್ಟಿರಬೇಕು. ಅನೇಕ ಬಾರಿ ವಾಹನವನ್ನು ಪೊಲೀಸರು ಪರಿಶೀಲಿಸುತ್ತಾರೆ. ಇಲ್ಲವೆ ಯಾವುದೇ ರೀತಿಯ ಘಟನೆ ಮತ್ತು ಅಪಘಾತ (Accident) ದ ಸಂದರ್ಭದಲ್ಲಿ ಈ ಪೇಪರ್‌ (Paper) ಗಳು ತುಂಬಾ ಉಪಯುಕ್ತ. ದಾಖಲೆಗಳು ಕಾರಿನಲ್ಲಿ ಇಲ್ಲದೆ ಹೋದ್ರೆ ನೀವು ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೊಲೀಸರಿಗೆ ದಂಡ ಪಾವತಿ ಮಾಡಬೇಕಾಗುತ್ತದೆ. 

ಏನೇನೋ ನೋವು, ಕೆಲಸದ ಟೆನ್ಷನ್‌ನಿಂದಲೂ ಕಾಡಬಹುದು, ಸರ್ವೆ ಹೇಳುವುದೇನು?

Tap to resize

Latest Videos

undefined

ನೀರಿನ ಬಾಟಲಿ (Water Bottle): ಕೆಲವರು ಬೇಕಾದಾಗ ಖರೀದಿ ಮಾಡಿದ್ರೆ ಆಯ್ತು ಎನ್ನುತ್ತ ನೀರಿನ ಬಾಟಲಿಯನ್ನು ಕಾರಿನಲ್ಲಿ ಇಡುವುದಿಲ್ಲ. ನೆನಪಿರಲಿ, ನಮಗೆ ಅಗತ್ಯವಿದ್ದಾಗ ನೀರಿನ ಬಾಟಲಿ ಖರೀದಿಗೆ ಅಂಗಡಿ ಸಿಗದೆ ಇರಬಹುದು. ಹಾಗಾಗಿ ಯಾವುದೇ ಪ್ರಯಾಣವಿರಲಿ, ನೀರಿನ ಬಾಟಲಿ ಕಾರ್ ನಲ್ಲಿ ಇರುವಂತೆ ನೋಡಿಕೊಳ್ಳಿ. ಹಠಾತ್ ಬಾಯಾರಿಕೆಯಾದಾಗ, ಮಾತ್ರೆ ಸೇವನೆ ಮಾಡುವ ಸಂದರ್ಭದಲ್ಲಿ ಅಥವಾ ಅಪಘಾತವಾದಾಗ ಇಲ್ಲವೆ ಮಕ್ಕಳ ಜೊತೆ ಕಾರಿನಲ್ಲಿ ಪ್ರಯಾಣ ಬೆಳೆಸುವಾಗ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ.

ಕಾರಿನಲ್ಲಿರಲಿ ಟಿಶ್ಯು ಪೇಪರ್ (Tissue Paper) : ಕಾರಿನಲ್ಲಿ ಪ್ರಯಾಣ ಮಾಡ್ತೀರಿ ಎಂದಾದ್ರೆ ಟಿಶ್ಯು ಪೇಪರ್ ಇಟ್ಕೊಳ್ಳಿ. ಎಲ್ಲ ಬಾರಿ ನೀರಿನಿಂದ ಕೈ ತೊಳೆಯಲು ಸಾಧ್ಯವಾಗುವುದಿಲ್ಲ. ಆಗ ಟಿಶ್ಯೂ ನೆರವಿಗೆ ಬರುತ್ತದೆ. ಪ್ರಯಾಣದ ವೇಳೆ ವಾಂತಿಯಾದ್ರೆ ಕೂಡ ಟಿಶ್ಯೂ ಸಹಾಯಕ್ಕೆ ಬರುತ್ತದೆ. ಹಾಗಾಗಿ ಕಾರಿನಲ್ಲಿ ಒಂದಿಷ್ಟು ಟಿಶ್ಯೂ ಇಡಲು ಮರೆಯಬೇಡಿ.

ತುರ್ತು ಔಷಧಿ (Emergency Medicines) : ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಫಸ್ಟ್ ಎಡ್ ಬಾಕ್ಸ್ ಕಾರಿನಲ್ಲಿ ಸದಾ ಇರಬೇಕು. ಇದ್ರ ಹೊರತಾಗಿ ನೀವು ಯಾವುದೇ ಖಾಯಿಲೆಯಿಂದ ಬಳಲುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಇಟ್ಟುಕೊಳ್ಳಿ. ಇದಲ್ಲದೆ, ವಾಂತಿ ನಿಯಂತ್ರಿಸುವ ಮಾತ್ರೆ, ಜ್ವರದ ಮಾತ್ರೆ, ತಲೆ ನೋವಿನ ಮಾತ್ರೆ, ಗ್ಯಾಸ್ಟ್ರಿಕ್ ಮಾತ್ರೆಗಳನ್ನು ನಿಮ್ಮ ಕಾರಿನಲ್ಲಿ ಇಟ್ಟುಕೊಳ್ಳುವುದು ಒಳ್ಳಯದು.

Punjabi Wedding: ಫನ್ನಿ ಜೊತೆ, ವಿಭನ್ನತೆ ಇಲ್ಲಿರುತ್ತೆ

ಈ ವಸ್ತುಗಳೂ ಕಾರಿನಲ್ಲಿರಲಿ : ಮೇಲಿನ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ನೀವು ಇನ್ನೂ ಕೆಲ ವಸ್ತುಗಳನ್ನು ಕಾರಿನಲ್ಲಿ ಇಟ್ಟುಕೊಳ್ಳಬೇಕು. ಬಿಸ್ಕತ್ ಸೇರಿದಂತೆ ಬೇಗ ಹಾಳಾಗದ ಆಹಾರ, ಫೋನ್ ಚಾರ್ಜರ್, ಟಾರ್ಚ್, ಮಳೆಗಾಲದ ಸಮಯದಲ್ಲಿ ಕೊಡೆ, ಕತ್ತರಿ ಅಥವಾ ಚಾಕು, ಒಂದು ಜೊತೆ ಬಟ್ಟೆ ಸೇರಿದಂತೆ ಕೆಲ ಅಗತ್ಯ ವಸ್ತುಗಳನ್ನು ನೀವು ಇಟ್ಟುಕೊಳ್ಳುವುದು ಮುಖ್ಯ. 
 

click me!