ಇದೆಂಥಾ ಹುಚ್ಚಾಟ? ಈ ಚಳಿಗಾಲದಲ್ಲಿ ಐಸ್ ತುಂಡುಗಳ ಬಾಕ್ಸೊಳಗೆ 3 ಗಂಟೆ ನಿಂತ ವ್ಯಕ್ತಿ!

By Suvarna NewsFirst Published Jan 7, 2024, 3:45 PM IST
Highlights

ಅಲ್ಲಾ ಸ್ವಾಮಿ, ಈಗ ಹೊರಗಿನ ಚಳಿಯೇ ತಾಳುವುದು ಕಷ್ಟವಾಗಿದೆ. ಅಂಥದರಲ್ಲಿ ಈ ವ್ಯಕ್ತಿ ಗಂಟಲವರೆಗೂ ಐಸ್ ತುಂಡುಗಳನ್ನು ಹಾಕಿಕೊಂಡು ಅದರೊಳಗೆ 3 ಗಂಟೆಗಳ ಕಾಲ ನಿಂತಿದ್ದ ಎಂದರೆ ಹುಚ್ಚಾಟ ಎನಿಸದಿರದು. ಇಷ್ಟಕ್ಕೂ ಈತ ಹೀಗೆ ಮಾಡಿದ್ದೇಕೆ ಗೊತ್ತಾ?

ಅಬ್ಬಬ್ಬಾ! ಚಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂಥ ಚಳಿಯಲ್ಲಿ ಕೋಟ್ ಇಲ್ಲದೆ ಹೊರ ಹೋಗುವುದೇ ಕಷ್ಟ. ಅಂಥದರಲ್ಲಿ ಈ ವ್ಯಕ್ತಿಯು ತನ್ನ ಇಡೀ ದೇಹವನ್ನು ಮೂರು ಗಂಟೆಗಳಿಗೂ ಹೆಚ್ಚು ಕಾಲ ಮಂಜಿನಿಂದ ಮುಚ್ಚಿಕೊಂಡಿದ್ದಾನೆ. ತೆಳುವಾದ ಮಂಜೂ ಅಲ್ಲ, ಪೂರಾ ಗಟ್ಟಿಯಾದ ಐಸ್ ತುಂಡುಗಳ ನಡುವೆ ದೇಹವನ್ನು ಗಂಟಲ ಮಟ್ಟ ಹುದುಗಿಸಿಕೊಂಡು ಬರೋಬ್ಬರಿ 3 ಗಂಟೆ ನಿಂತಿದ್ದಾನೆ.  ಇದರ ವೀಡಿಯೋ ಹೊರಬಿದ್ದಿದ್ದು, ಕೊನೆಗೆ ಚಳಿಯಿಂದಾಗಿ ಅವರ ಸ್ಥಿತಿ ಹದಗೆಟ್ಟಿರುವುದನ್ನು ಕಾಣಬಹುದು.

ಈ ವ್ಯಕ್ತಿ ಇಷ್ಟೊಂದು ಹುಚ್ಚಾಟಕ್ಕೆ ಇಳಿದಿದ್ದು ಗಿನ್ನೆಸ್ ಬುಕ್ ಸೇರಲು. 

ವೀಡಿಯೋವನ್ನು ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ಸ್ ಪೇಜಿಗೆ ಹಂಚಿಕೊಳ್ಳಲಾಗಿದೆ. ಇದರಲ್ಲಿ ಒಬ್ಬ ವ್ಯಕ್ತಿಯು ಐಸ್ ಬಾಕ್ಸ್‌ನಲ್ಲಿ ಹೆಚ್ಚು ಸಮಯ ನಿಂತಿರುವ ದಾಖಲೆಯನ್ನು ಮಾಡಲು ಬಯಸುತ್ತಾನೆ. ಮೊದಲನೆಯದಾಗಿ, ಒಂದು ಪೆಟ್ಟಿಗೆಯನ್ನು ತರಲಾಯಿತು, ಅದರಲ್ಲಿ ವ್ಯಕ್ತಿ ನಿಂತು ಅವನ ಕುತ್ತಿಗೆಯವರೆಗೂ ಐಸ್ ತುಂಡುಗಳನ್ನು ಇರಿಸಲಾಯಿತು. ಈ ವ್ಯಕ್ತಿ ಮೂರು ಗಂಟೆಗಳ ಕಾಲ ಹಾಗೆ ನಿಂತಿದ್ದನು.

ಕಡುಬಡತನದಲ್ಲಿ ಬೆಳೆದು 16 ಬಾರಿ ಮೂಳೆ ಮುರಿತ, 8 ಬಾರಿ ಸರ್ಜರಿಗೆ ಒಳಗಾದಾಕೆ ಈಗ ಐಎಎಸ್‌ ಆಫೀಸರ್‌!

ಪೋಲೆಂಡ್ ನಿವಾಸಿ ರೊಮಾನೋವ್ಸ್ಕಿ ಎಂಬ ವ್ಯಕ್ತಿಯೇ ಅತಿ ಹೆಚ್ಚು ಸಮಯ ಮಂಜುಗಡ್ಡೆಗಳ ನಡುವೆ ನಿಂತ ದಾಖಲೆ ಮಾಡಿರುವುದು. ಇದಕ್ಕಾಗಿ ಅವರು ದೀರ್ಘಕಾಲದಿಂದ ಪ್ರಯತ್ನಿಸುತ್ತಿದ್ದುದ್ದಾಗಿ ರೊಮಾನೋವ್ಸ್ಕಿ ಹೇಳುತ್ತಾರೆ. ಈ ಮೊದಲು ಫ್ರಾನ್ಸ್‌ನ ವ್ಯಕ್ತಿಯೊಬ್ಬರು ಎರಡು ಗಂಟೆ, 35 ನಿಮಿಷ ಮತ್ತು 33 ಸೆಕೆಂಡುಗಳ ಕಾಲ ಹಿಮದ ಮಧ್ಯದಲ್ಲಿ ನಿಂತು ದಾಖಲೆ ಮಾಡಿದ್ದರು.

ಫ್ರೆಂಚ್‌ನ ವ್ಯಕ್ತಿಗೂ ಮೊದಲು, ಈ ದಾಖಲೆಯನ್ನು ಚೀನೀ ವ್ಯಕ್ತಿಯೊಬ್ಬರು ಹೊಂದಿದ್ದರು, ಅವರು 1 ಗಂಟೆ 53 ಸೆಕೆಂಡುಗಳು ಮತ್ತು 10 ಸೆಕೆಂಡುಗಳ ಕಾಲ ಹಿಮದ ನಡುವೆ ನಿಂತಿದ್ದರು. 

ಎಲ್ಲರ ದಾಖಲೆಯನ್ನು ಮುರಿದ ರೊಮಾನೊವ್ಸ್ಕಿ ಮೂರು ಗಂಟೆ 28 ಸೆಕೆಂಡುಗಳ ಕಾಲ ಹಿಮದಲ್ಲಿ ನಿಂತರು. ದಾಖಲೆಯನ್ನು ಮುರಿದ ತಕ್ಷಣ, ರೊಮಾನೋವ್ಸ್ಕಿಯನ್ನು ಪೆಟ್ಟಿಗೆಯಿಂದ ಹೊರಗೆ ತೆಗೆದು ಬೆಚ್ಚಗಿನ ಬಟ್ಟೆಗಳನ್ನು ಅವರಿಗೆ ತೊಡಿಸಲಾಯಿತು. ವೈದ್ಯರ ತಂಡ ಅವರ ಆರೋಗ್ಯ ತಪಾಸಣೆ ನಡೆಸಿ ನಂತರ ಪ್ರಮಾಣ ಪತ್ರ ನೀಡಿ ಗೌರವಿಸಿದ್ದು, ಅದರ ವಿಡಿಯೋ ಕೂಡ ಲಭ್ಯವಾಗಿದೆ. ಹಿಮದಲ್ಲಿ ಗಂಟೆಗಟ್ಟಲೆ ನಿಂತು ಈ ರೆಕಾರ್ಡ್ ಮಾಡುವ ವಿಡಿಯೋ ನೋಡಿ ಕೆಲವರು ಹುಚ್ಚೆದ್ದು ಕುಣಿದು ಕುಪ್ಪಳಿಸುತ್ತಿದ್ದಾರೆ.

click me!