
ಸೆಲ್ ರೋಟಿ ಎಂಬುದು ನೇಪಾಳದ ಸಾಂಪ್ರದಾಯಿಕ ರೊಟ್ಟಿಯಾಗಿದ್ದು ಇದನ್ನು ಹಬ್ಬಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಮಾಡಲಾಗುತ್ತದೆ. ಇದು ಡೀಪ್-ಫ್ರೈಡ್ ಡೋನಟ್ ತರಹದ ತಿಂಡಿಯಾಗಿದ್ದು ಹೊರಗೆ ಗರಿಗರಿಯಾಗಿದ್ದು, ಒಳಭಾಗದಲ್ಲಿ ಮೃದುವಾಗಿರುತ್ತದೆ. ಸೆಲ್ ರೋಟಿಯನ್ನು ನೀವು ಇನ್ನೂ ಮಾಡದಿದ್ದರೆ ಅದರ ರುಚಿ ಪ್ರಯತ್ನಿಸಲು ಯೋಗ್ಯವಾಗಿದೆ. ಮನೆಯಲ್ಲಿ ಮಕ್ಕಳಿದ್ದರಂತೂ ನೀವಿದನ್ನು ಪ್ರಯತ್ನಿಸಲೇಬೇಕು. ಅದರ ಆಕಾರ, ರುಚಿ ಎರಡೂ ಮಕ್ಕಳಿಗೆ ಇಷ್ಟವಾಗುತ್ತದೆ.
ಸೆಲ್ ರೋಟಿ ತನ್ನ ವಿಶಿಷ್ಟ ವಿನ್ಯಾಸ ಮತ್ತು ಸುವಾಸನೆಯಿಂದಾಗಿ ನೇಪಾಳದ ಜನರಲ್ಲಿ ಯುವಕರು ಮತ್ತು ಹಿರಿಯರ ನೆಚ್ಚಿನದಾಗಿದೆ. ಇದನ್ನು ಬೆಳಗಿನ ಉಪಾಹಾರವಾಗಿ ಅಥವಾ ಚಹಾ ಅಥವಾ ಕಾಫಿಯೊಂದಿಗೆ ಲಘುವಾಗಿಯೂ ಸಹ ಆನಂದಿಸಬಹುದು.
ಅಕ್ಕಿ ಹಿಟ್ಟಿನ ತಿನಿಸು
ಈ ಸೆಲ್ ರೋಟಿಯು ಇತರ ಕರಿದ ಆಹಾರ ಪದಾರ್ಥಗಳಿಗೆ ಆರೋಗ್ಯಕರ ಪರ್ಯಾಯವಾಗಿದೆ. ಏಕೆಂದರೆ ಇದನ್ನು ಅಕ್ಕಿ ಹಿಟ್ಟಿನಿಂದ ತಯಾರಿಸಲಾಗುತ್ತದೆ, ಇದು ಅಂಟು-ಮುಕ್ತ ಮತ್ತು ಗೋಧಿ ಹಿಟ್ಟಿಗಿಂತ ಜೀರ್ಣಿಸಿಕೊಳ್ಳಲು ಸುಲಭವಾಗಿದೆ. ರೊಟ್ಟಿಗಳು ಅತಿಯಾಗಿ ಸಿಹಿಯಾಗದ ಕಾರಣ ಇತರ ಕರಿದ ಸಿಹಿತಿಂಡಿಗಳಿಗಿಂತ ಇದು ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಕಡಿಮೆಯಾಗಿದೆ. ಮೆಂತ್ಯೆಯು ಇದಕ್ಕೆ ಪರಿಮಳ ಒದಗಿಸುತ್ತದೆ.
ಸತತ 7ನೇ ಬಾರಿ 'ಬೆಸ್ಟ್ ಡಯಟ್ 2024' ಪಟ್ಟ ತೆಗೆದುಕೊಂಡ ಮೆಡಿಟರೇನಿಯನ್ ಆಹಾರ; ಇದರಲ್ಲೇನಿರುತ್ತೆ?
ಮನೆಯಲ್ಲಿ ನೇಪಾಳಿ ಸೆಲ್ ರೋಟಿಯನ್ನು ಹೇಗೆ ತಯಾರಿಸುವುದು ಎಂಬುದು ಇಲ್ಲಿದೆ:
ನೇಪಾಳಿ ಸೆಲ್ ರೋಟಿ ಮಾಡುವ ವಿಧಾನ
ಒಟ್ಟು ಸಮಯ: 40 ನಿಮಿಷ
ತಯಾರಿ ಸಮಯ: 15 ನಿಮಿಷ
ಅಡುಗೆ ಸಮಯ: 25 ನಿಮಿಷ
ಅಳತೆ: 4 ಜನ
'ಅಮೃತಧಾರೆ' ಗೌತಮ್ ಬಾಯಲ್ಲಿ ನೀರೂರಿಸಿದ ಅವರೆಕಾಳು ಉಪ್ಪಿಟ್ಟು ಮಾಡೋದು ಹೇಗೆ?
ಪದಾರ್ಥಗಳು
1/2 ಕಪ್ ಅಕ್ಕಿ
1/2 ಕಪ್ ಮೈದಾ ಹಿಟ್ಟು
1/2 ಟೀ ಸ್ಪೂನ್ ಅಡಿಗೆ ಸೋಡಾ
2 ಚಮಚ ಸಕ್ಕರೆ
2 ಚಮಚ ತುಪ್ಪ
1 ಟೀಸ್ಪೂನ್ ಮೆಂತ್ಯ ಪುಡಿ
ಹುರಿಯಲು ಎಣ್ಣೆ
ಅಕ್ಕಿಯನ್ನು ಚೆನ್ನಾಗಿ ತೊಳೆಯಿರಿ ಮತ್ತು ಅದನ್ನು ನೀರಿನಲ್ಲಿ ಕನಿಷ್ಠ 6 ಗಂಟೆಗಳ ಕಾಲ ನೆನೆಸಿಡಿ. ದೀರ್ಘಕಾಲ ನೆನೆಸಿಟ್ಟಷ್ಟೂ ರೋಟಿ ಮೃದುವಾಗಿರುತ್ತದೆ.
ನೆನೆಸಿದ ಅಕ್ಕಿಯನ್ನು ಒಣಗಿಸಿ ಮತ್ತು ಗ್ರೈಂಡರ್ ಅಥವಾ ಬ್ಲೆಂಡರ್ ಬಳಸಿ ಪುಡಿ ಮಾಡಿ. ಅಗತ್ಯವಿದ್ದರೆ, ಅದಕ್ಕೆ ಸ್ವಲ್ಪ ನೀರು ಸೇರಿಸಿ.
ದೊಡ್ಡ ಬಟ್ಟಲಿನಲ್ಲಿ ಪುಡಿ ಮಾಡಿಕೊಂಡ ಅಕ್ಕಿ ಹಿಟ್ಟು, ಕೊಂಚ ಮೈದಾ ಹಿಟ್ಟು, ತುಪ್ಪ, ಸಕ್ಕರೆ, ಮೆಂತ್ಯ ಪುಡಿ ಮತ್ತು ಅಡಿಗೆ ಸೋಡಾವನ್ನು ಸೇರಿಸಿ. ಮೃದುವಾದ ಮತ್ತು ಸ್ವಲ್ಪ ಜಿಗುಟಾದ ಹಿಟ್ಟನ್ನು ಪಡೆಯುವವರೆಗೆ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ತುಂಬಾ ಒಣಗಿದಂತಿದ್ದರೆ ಕೊಂಚ ನೀರನ್ನು ಸೇರಿಸಿ.
ಹಿಟ್ಟಿನ ಸಣ್ಣ ಭಾಗಗಳನ್ನು ಚೆಂಡುಗಳಾಗಿ ಸುತ್ತಿಕೊಳ್ಳಿ. ನಿಮ್ಮ ಹೆಬ್ಬೆರಳು ಬಳಸಿ ಪ್ರತಿ ಚೆಂಡಿನ ಮಧ್ಯದಲ್ಲಿ ರಂಧ್ರವನ್ನು ಮಾಡಿ, 2-3 ಇಂಚುಗಳಷ್ಟು ವ್ಯಾಸದಲ್ಲಿ ಉಂಗುರವನ್ನು ರೂಪಿಸಿ ಅದನ್ನು ನಿಧಾನವಾಗಿ ವಿಸ್ತರಿಸಿ. ಕೋಡುಬಳೆಯಾಕಾರಕ್ಕೆ ತನ್ನಿ.
ಆಳವಾದ ಪ್ಯಾನ್‌ನಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ.
ಸೆಲ್ ರೋಟಿಯನ್ನು ಬಿಸಿ ಎಣ್ಣೆಗೆ ನಿಧಾನವಾಗಿ ಬಿಡಿ. ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಪ್ರತಿ ಬದಿಯಲ್ಲಿ ಕೆಲವು ನಿಮಿಷಗಳ ಕಾಲ ಫ್ರೈ ಮಾಡಿ. ಅಲ್ಲಿಗೆ ರುಚಿಯಾದ ಸೆಲ್ ರೋಟಿ ರೆಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.