ತಾಯಿ ಕಾರಿನ ಹಿಂದೆ ಮೂತ್ರ ಮಾಡಿ ಜೈಲಿಗೆ ಹೋದ ಬಾಲಕ..!

By Suvarna NewsFirst Published Aug 19, 2023, 2:56 PM IST
Highlights

ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಬೇಡಿ ಅಂತಾ ನಮ್ಮಲ್ಲೂ ಬೋರ್ಡ್ ಇರುತ್ತೆ. ಆದ್ರೆ ಜನರು ಕಣ್ಣು ಕಾಣದವರಂತೆ ವರ್ತಿಸುತ್ತಾರೆ. ಆದ್ರೆ ಎಲ್ಲ ದೇಶ ಭಾರತದಂತಲ್ಲ. ಅಲ್ಲಿ ಕೆಲ ನಿಯಮ ಕಟ್ಟುನಿಟ್ಟಾಗಿದ್ದು, ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗುತ್ತೆ.
 

ನಮ್ಮ ದೇಶದಲ್ಲಿ ನಾಯಿ ಮಾತ್ರವಲ್ಲ ಮನುಷ್ಯರು ಕೂಡ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡ್ತಾರೆ. ಸಾರ್ವಜನಿಕ ಶೌಚಾಲಯ ಹತ್ತಿರವಿದ್ರೂ ಬಯಲು ಮೂತ್ರ ವಿಸರ್ಜನೆಗೆ ಹೋಗುವವರ ಸಂಖ್ಯೆಯೇ ಹೆಚ್ಚು. `ಇಲ್ಲಿ ಮೂತ್ರ ವಿಸರ್ಜನೆ ಮಾಡಬಾರದು’ ಎಂದು ಸ್ಪಷ್ಟವಾಗಿ ಬರೆದ ಸ್ಥಳದಲ್ಲೇ ದುಷ್ಟರು ಹೇಯಕೃತ್ಯ ಮಾಡೋದನ್ನು ನೀವು ನೋಡ್ಬಹುದು. ಸಾರ್ವಜನಿಕ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ದಂಡ ವಿಧಿಸಲಾಗುತ್ತದೆ ಎಂಬ ಬೋರ್ಡ್ ಇರುತ್ತದೆಯೇ ವಿನಃ ಇಲ್ಲಿ ದಂಡ ಹಾಕೋರು ಕಾಣೋದಿಲ್ಲ. 

ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಬಯಲು ಮೂತ್ರ (Urine) ವಿಸರ್ಜನೆಯನ್ನು ಇಷ್ಟಪಡ್ತಾರೆ. ಸಾರ್ವಜನಿಕ ಶೌಚಾಲಯ (Toilet) ಕ್ಲೀನ್ ಆಗಿರೋದಿಲ್ಲ ಎನ್ನುವ ದೂರು ಒಂದಾದ್ರೆ ಅದಕ್ಕೆ ಹಣ ನೀಡ್ಬೇಕು ಎನ್ನುವುದು ಇನ್ನೊಂದು ಕಾರಣ. ಈ ಬಗ್ಗೆ ಸರ್ಕಾರ (Govt) ಈಗ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರ್ತಿದ್ದರೂ ಪ್ರಯೋಜನ ಶೂನ್ಯ. ಭಾರತದಲ್ಲಿ  ಮಾಡಿದಂತೆ ಅಮೆರಿಕಾಕ್ಕೆ ಹೋದಾಗ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ದಂಡ ಮಾತ್ರವಲ್ಲ ಜೈಲೂಟ ಗ್ಯಾರಂಟಿ. ಯಾಕೆಂದ್ರೆ ನಿಷೇಧಿತ ಪ್ರದೇಶದಲ್ಲಿ ಮೂತ್ರ ವಿಸರ್ಜನೆ ಮಾಡಿದ್ರೆ ಅಮೆರಿಕಾ ಪೊಲೀಸರು ಮಕ್ಕಳನ್ನೇ ಬಿಡಲ್ಲ ಇನ್ನು ನಿಮ್ಮನ್ನು ಬಿಡ್ತಾರಾ?. ಕೆಲ ದಿನಗಳ ಹಿಂದೆ ಅಮೆರಿಕಾದಲ್ಲಿ 10 ವರ್ಷದ ಬಾಲಕನನ್ನು ಇದೇ ವಿಚಾರಕ್ಕೆ ಜೈಲಿಗೆ ಕಳುಹಿಸಲಾಗಿತ್ತು. ಘಟನೆ ಏನು ಎಂಬುದನ್ನು ನಾವು ಹೇಳ್ತೇವೆ.

ಮದುವೆ ಆದ್ಮೆಲೇ ಜೀವನವೇ ಮುಗಿದು ಹೋಯ್ತಾ? ಮಹಿಳೆಯರೇ ನೀವು ಬಾಸ್ ಆಗೋದ್ಯಾವಾಗ?

ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಬಾಲಕನ ಬಂಧನ
ತನ್ನ ತಾಯಿಯ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡುತ್ತಿದ್ದ 10 ವರ್ಷದ ಬಾಲಕನನ್ನು ಅಮೆರಿಕದ ಮಿಸಿಸಿಪ್ಪಿ ಪೊಲೀಸರು ಬಂಧಿಸಿದ್ದರು (Arrest). ತಾಯಿ ಲಾಟೋನ್ಯಾ ಈಸನ್ ತನ್ನ ವಕೀಲರನ್ನು ಭೇಟಿ ಮಾಡಲು ಹೋಗಿದ್ದಳು. ಈ ವೇಳೆ ಬಾಲಕನಿಗೆ ಅರ್ಜೆಂಟ್ ಆಗಿದೆ. ಆದ್ರೆ ಅಲ್ಲಿ ಯಾವುದೇ ಶೌಚಾಲಯವಿರಲಿಲ್ಲ. ಹಾಗಾಗಿ ಬಾಲಕ ತನ್ನ ತಾಯಿಯ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿದ ಪೊಲೀಸರು ಬಾಲಕನನ್ನು ಬಂಧಿಸಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ (Public place) ಮೂತ್ರ ವಿಸರ್ಜನೆಯ ಘಟನೆಯನ್ನು ಪೊಲೀಸರು ಉತ್ಪ್ರೇಕ್ಷೆ ಮಾಡಿದ್ದಾರೆ ಎಂದು ಮಹಿಳೆ ಲಾಟೋನ್ಯಾ ಆರೋಪಿಸಿದ್ದಾಳೆ. ಪೊಲೀಸ್ ಅಧಿಕಾರಿಯೊಬ್ಬರು ಮೊದಲು ಬಾಲಕನಿಗೆ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಇದು ಸಲ್ಲದು ಎಂದಿದ್ದಾರೆ. ಆದ್ರೆ ಹತ್ತಿರ ಎಲ್ಲೂ ಬಾತ್ ರೂಮ್ ಇಲ್ಲ ಎಂದು ಬಾಲಕ ಹೇಳಿದ್ದಾನೆ.  ಹಾಗೆ ಕಾರಿನ ಹಿಂದೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಇದನ್ನು ನೋಡಿದ ಇನ್ನು ಕೆಲ ಪೊಲೀಸರು ಮಗುವನ್ನು ಜೈಲಿಗೆ ಕರೆದೊಯ್ದಿದ್ದಾರೆ.

ನಿಮ್ಗೆ ಗಂಡನಾಗೋ ಮೊದ್ಲು ಆತ ತಾಯಿಗೆ ಮಗ, ಸೋ ಅತ್ತೆ ಜೊತೆ ಸ್ಪರ್ಧೆ ಮಾಡ್ಬೇಡಿ; ಸುಧಾಮೂರ್ತಿ

ಪೊಲೀಸರು ಮಗುವನ್ನು ಎಳೆದೊಯ್ದ ರೀತಿ ಸರಿಯಿಲ್ಲ ಎಂಬ ಅಭಿಪ್ರಾಯ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಲಾಟೋನ್ಯಾ, ಮಗು ಪಾರ್ಕಿಂಗ್ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದು ಸರಿಯಲ್ಲ, ಆದರೆ ಪೊಲೀಸರು ಮಗುವನ್ನು ಎಳೆದೊಯ್ದ ರೀತಿಯೂ ಸರಿಯಿಲ್ಲ. 10 ವರ್ಷದ ಮಗುವನ್ನು ಪೊಲೀಸರು ಹೇಗೆ ಬಂಧಿಸಬಾರದಿತ್ತು.  ಇದು ನನಗೆ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾಳೆ. ಘಟನೆಯಿಂದ ಮಗು ಹೆದರಿದ್ದಾನೆ. ಪೊಲೀಸರು ಆತನನ್ನು ಎಳೆದೊಯ್ಯುವಾಗ ಆತ ಅಳುತ್ತಿದ್ದ. ಭವಿಷ್ಯದಲ್ಲಿ ಈತ ಇನ್ನಾವಾಗಲೂ ಪೊಲೀಸರನ್ನು ನೋಡುವ ಧೈರ್ಯ ಮಾಡುವುದಿಲ್ಲ ಎಂದು ಮಹಿಳೆ ದೂರಿದ್ದಾಳೆ.

ಅಲ್ಲಿ ಏನಾಗ್ತಿದೆ ಎಂಬುದು ನನಗೆ ಗೊತ್ತಾಗಲಿಲ್ಲ. ಪೊಲೀಸ್ ವ್ಯಾನ್ ನಿಂದ ನನ್ನನ್ನು ಕೆಳಗೆ ಇಳಿಸ್ತಿದ್ದಂತೆ ನಾನು ನಡುಗುತ್ತಿದ್ದೆ. ನನ್ನನ್ನು ಜೈಲಿಗೆ ಹಾಕ್ತಾರೆಂದು ನಾನು ತುಂಬಾ ಹೆದರಿದ್ದೆ ಎನ್ನುತ್ತಾನೆ ಬಾಲಕ.  ಸದ್ಯ ಬಾಲಕನನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ. ಬಾಲಕ ತಾಯಿಯೊಂದಿಗೆ ವಾಪಸ್ ಹೋಗಿದ್ದಾನೆ.  ಸೆಂಟೋಬಿಯಾ ಪೊಲೀಸ್ ಮುಖ್ಯಸ್ಥ ರಿಚರ್ಡ್ ಚಾಂಡ್ಲರ್ ಯೂತ್ ಕೋರ್ಟ್ ಆಕ್ಟ್ ಅನ್ನು ಉಲ್ಲೇಖಿಸಿದ್ದಾರೆ. 

click me!