ಮನೆಯಲ್ಲಿರೋ ಎಲ್ಲ ಪುರುಷರಿಗೂ ಒಂದೇ ಹೆಸರು; ಹೀಗಾದ್ರೆ ಗುರುತಿಸೋದು ಹೇಗಪ್ಪಾ?

By Suvarna News  |  First Published Aug 19, 2023, 1:52 PM IST

ಮಕ್ಕಳಿಗೆ ತಮ್ಮ ಸರ್ ನೇಮನ್ನು ಪಾಲಕರು ಇಡ್ತಾರೆ. ಇಲ್ಲವೆ ಅಜ್ಜ, ಮುತ್ತಜ್ಜನ ಹೆಸರನ್ನು ಇಡೋದಿದೆ. ಆದ್ರೆ ಕುಟುಂಬದ ಎಲ್ಲ ಪುರುಷರ ಹೆಸರೂ ಒಂದೇ ಆದ್ರೆ? ಅಂಥ ಕುಟುಂಬವೂ ಇದೆ. 
 


ವಿಶ್ವದಲ್ಲಿ ಚಿತ್ರವಿಚಿತ್ರ ಜನರಿದ್ದಾರೆ, ಕುಟುಂಬಗಳಿವೆ. ಕೆಲ ಕುಟುಂಬ ಊಟ, ಆಹಾರ ಪದ್ಧತಿಗೆ ಪ್ರಸಿದ್ಧಿಯಾದ್ರೆ ಮತ್ತೆ ಕೆಲ ಕುಟುಂಬಗಳು ಜನರ ಸಂಖ್ಯೆ, ಮಕ್ಕಳ ವಿಷ್ಯಕ್ಕೆ ಗಮನ ಸೆಳೆದಿವೆ. ಮತ್ತೆ ಕೆಲ ಕುಟುಂಬಗಳು ತಮ್ಮ ವ್ಯವಹಾರದಿಂದ ಎಲ್ಲರ ಮನಸ್ಸು ಗೆದ್ದಿದೆ. ವಿಶ್ವದಲ್ಲಿ ಕೆಲ ಕುಟುಂಬದ ಸದಸ್ಯರ ಹೆಸರು ಚರ್ಚೆಗೆ ಕಾರಣವಾಗಿದ್ದಿದೆ. ಈಗ ಮತ್ತೊಂದು ಕುಟುಂಬ ಹೆಸರಿನ ವಿಷ್ಯಕ್ಕೆ ಸುದ್ದಿ ಮಾಡಿದೆ.

ಅಜ್ಜನ ಹೆಸರನ್ನು ಮೊಮ್ಮಗನಿಗೆ ಅಥವಾ ಅಜ್ಜಿ ಹೆಸರನ್ನು ಮೊಮ್ಮಗಳಿಗೆ ಇಡುವ ಪದ್ಧತಿ ನಮ್ಮಲ್ಲಿ ಈಗ್ಲೂ ಇದೆ. ಒಂದೇ ಕುಟುಂಬದಲ್ಲಿ ಅಜ್ಜ, ಮಗ, ಮೊಮ್ಮಗ, ಮರಿ ಮೊಮ್ಮಗನಿದ್ರೆ ಅದ್ರಲ್ಲಿ ಇಬ್ಬರ ಹೆಸರು ಒಂದೇ ಆಗಿರುತ್ತದೆ. ಹಿರಿಯರ ನೆನಪು ಸದಾ ನಮಗೆ ಇರಲಿ ಎನ್ನುವ ಕಾರಣಕ್ಕೆ ಅವರ ಹೆಸರನ್ನು ಮಕ್ಕಳಿಗೆ ಇಡಲಾಗುತ್ತದೆ. ಆದ್ರೆ ಈಗ ನಾವು ಹೇಳಲು ಹೊರಟಿರುವ ಕುಟುಂಬದಲ್ಲಿ ಅಜ್ಜನ ಹೆಸರನ್ನು ಮೊಮ್ಮಗ ಅಥವಾ ಮರಿಮಗನಿಗೆ ಇಡಲಾಗಿಲ್ಲ. ಈ ಕುಟುಂಬದಲ್ಲಿರುವ ಎಲ್ಲ ಪುರುಷರ ಹೆಸರೂ ಒಂದೇ ಆಗಿದೆ. ಅಚ್ಚರಿಯಾದ್ರೂ ಇದು ನಿಜ. 

Tap to resize

Latest Videos

ಹುಡುಗಿ ಕೈ ಕೊಟ್ರೆ ರಿವೆಂಜ್ ಪೋರ್ನ್‌ ರೂಢಿಸಿಕೊಳ್ತಿದ್ದಾರೆ ಭಗ್ನಪ್ರೇಮಿಗಳು, ಏನಿದು?

ರೆಡ್ಡಿಟ್ (Reddit) ನಲ್ಲಿ ವ್ಯಕ್ತಿಯೊಬ್ಬ ಈ ವಿಷ್ಯವನ್ನು ಹಂಚಿಕೊಂಡಿದ್ದಾನೆ. ನಾನು, ನನ್ನ ತಂದೆ ಹಾಗೂ ನನ್ನ ಅಜ್ಜ ಮೂವರೂ ಒಂದೇ ಹೆಸರನ್ನು ಹೊಂದಿದ್ದೇವೆ ಎಂದು ಆತ ಬರೆದಿದ್ದಾನೆ. ಅಲ್ಲದೆ ಇನ್ನೊಂದು ವಿಷ್ಯವನ್ನು ಆತ ಹೇಳಿದ್ದಾನೆ. ತನಗೆ ಮಗು ಜನಿಸಿದಾಗ ಕುಟುಂಬ (Family) ದ ಸಂಪ್ರದಾಯವನ್ನು ಮುಂದುವರಿಸುತ್ತೇನೆ. ಆತನಿಗೂ ಇದೇ ಹೆಸರನ್ನು ಇಡುತ್ತೆನೆ ಎಂದು ಆತ ಹೇಳಿದ್ದಾರೆ.  ವ್ಯಕ್ತಿ ಪ್ರಕಾರ ಅವರ ಕುಟುಂಬ  ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಅವರ ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್‌ ಪುಸ್ತಕದಿಂದ ಸ್ಫೂರ್ತಿ ಪಡೆದಿದೆಯಂತೆ. ಆ ಪುಸ್ತಕ (book) ದಲ್ಲಿ ಒಂದೇ ಕುಟುಂಬದ ಹಲವಾರು ಸದಸ್ಯರು ಒಂದೇ ಹೆಸರನ್ನು ಹೊಂದಿದ್ದರು. 

ಕುಟುಂಬದಲ್ಲಿ ಎಲ್ಲರೂ ಒಟ್ಟಿಗೆ ಸೇರಿದಾಗ ಗೊಂದಲ ಕಾಡುವುದಿಲ್ಲವೆ ಎನ್ನುವ ಪ್ರಶ್ನೆಗೂ ಆ ವ್ಯಕ್ತಿ ಉತ್ತರ ನೀಡಿದ್ದಾನೆ. ಎಲ್ಲರೂ ಒಟ್ಟಿಗೆ ಇರುವಾಗ  ನನ್ನ ತಂದೆಯನ್ನು ಅವರ ಹೆಸರಿನಿಂದ ಕರೆಯಲಾಗುತ್ತದೆ. ನನ್ನ ಸಹೋದರನನ್ನು ಹೆಸರಿನ ಅಲ್ಪಾರ್ಥಕದಲ್ಲಿ ಕರೆಯಲಾಗುತ್ತದೆ. ನನ್ನನ್ನು ಉಪನಾಮದಿಂದ ಕರೆಯಾಗುತ್ತದೆ ಎಂದಿದ್ದಾನೆ. ಆದ್ರೆ ಮನೆ ಹೊರಗೆ ಉಪನಾಮವನ್ನು ಇವರು ಬಳಸುವುದಿಲ್ಲವಂತೆ.

Personality Tips: ಖುಷಿಖುಷಿಯಾಗಿರೋರು ಈ ಕೆಲಸಗಳನ್ನ ಎಂದಿಗೂ ಮಾಡೋಲ್ಲ

 ನಾನು ಹುಟ್ಟುವ ಮೊದಲೇ ನನ್ನ ಅಜ್ಜ ತೀರಿಕೊಂಡರು. ಹಾಗಾಗಿ ಅವರನ್ನು ಹೇಗೆ ಕರೆಯುತ್ತಿದ್ದರು ಎನ್ನುವುದು ನನಗೆ ತಿಳಿದಿಲ್ಲ. ನಮ್ಮಜ್ಜನಿಂದಲೇ ಈ ಪರಂಪರೆ ಶುರುವಾದಂತಿದೆ. ಯಾಕೆಂದ್ರೆ ಅವರನ್ನು ನಮ್ಮ ಚಿಕ್ಕಪ್ಪನವರು ಉಪನಾಮದಿಂದ ಕರೆಯುತ್ತಿದ್ದರು ಎಂದು ಆತ ಹೇಳಿದ್ದಾನೆ. ಅಲ್ಲದೆ ತನ್ನ ಮಗನಿಗೆ ಇದೇ ಹೆಸರನ್ನಿಡಲು ಆತ ಉತ್ಸುಕನಾಗಿದ್ದಾನೆ. 

ಈ ವ್ಯಕ್ತಿ ತನ್ನ ಮಕ್ಕಳಿಗೂ ಇದೇ ಹೆಸರನ್ನು ಮುಂದುವರೆಸುವುದು ಅನೇಕ ಬಳಕೆದಾರರಿಗೆ ಇಷ್ಟವಾಗಿಲ್ಲ. ಇದು ಒಳ್ಳೆಯ ಆಲೋಚನೆ ಅಲ್ಲ. ತಂದೆಯ ಹೆಸರನ್ನೇ ಇಡುವ ಮೂಲಕ ಮಗುವಿನ ಪ್ರತ್ಯೇಕತೆಯನ್ನು ದುರ್ಬಲಗೊಳಿಸಲಾಗುತ್ತದೆ ಎಂದು ವ್ಯಕ್ತಿಯೊಬ್ಬ ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ವ್ಯಕ್ತಿ ಕೂಡ ತಂದೆ ಹೆಸರಿನ ಮುಂದೆ ಜೂನಿಯರ್ ಎಂದು ಇಡುವುದರ ಬಗ್ಗೆ ಬರೆದಿದ್ದಾನೆ. ನನ್ನ ಹೆಸರಿನ ಹಿಂದೆ ಜೂನಿಯರ್ ಎಂದಿದೆ. ನಾನು ತಂದೆಯನ್ನು ಮೆಚ್ಚಿಸಬೇಕು. ಅವರ ಹೆಸರಿಗೆ ತಕ್ಕಂತೆ ಜೀವಿಸಬೇಕು. ಇದ್ರಿಂದ ನನಗೆ ಅಸ್ತಿತ್ವವೇ ಇಲ್ಲ ಎಂದಿದ್ದಾನೆ.

ಇದಕ್ಕೆ ಕಮೆಂಟ್ ಮಾಡಿದ ವ್ಯಕ್ತಿ, ತಾನು ತನ್ನ ಮಗನಿಗೆ ಜೂನಿಯರ್ ಎಂದು ಹೆಸರಿಡೋದಿಲ್ಲ. ಬರೀ ತಂದೆ ಹೆಸರನ್ನು ಮಾತ್ರ ಇಡ್ತೇನೆ. ತಂದೆ ಹೆಸರನ್ನು ಹೊಂದಿರುವ ನಾನು ಈವರೆಗೂ ತೊಂದರೆ ಅನುಭವಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾನೆ. 

click me!