ಅವಿವಾಹಿತ ಸಿಂಗಲ್ ಹುಡುಗರ ಕೆರಳುವಂತೆ ಮಾಡಿದ ಮೀಸೆ ಚಿಗುರದ ಮಕ್ಕಳ ಕಾರುಬಾರು

By Anusha Kb  |  First Published Oct 6, 2024, 3:18 PM IST

ಚಿಕ್ಕ ಹುಡುಗನೊಬ್ಬ ತನಗಿಂತ ಕಿರಿಯ ಹುಡುಗಿಗೆ ಅದ್ದೂರಿಯಾಗಿ ಪ್ರೇಮ ನಿವೇದನೆ ಮಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ಗರ್ಲ್‌ ಫ್ರೆಂಡ್‌ ಇಲ್ಲದ ಪ್ರಬುದ್ಧ ವಯಸ್ಸಿನ ಒಂಟಿ ಹುಡುಗರು ಹೊಟ್ಟೆ ಉರಿಯುವಂತೆ ಮಾಡಿದೆ.


ಈಗಿನ ಮಕ್ಕಳು ತುಂಬಾ ಫಾಸ್ಟ್ ಬಿಡಿ ಆದರೆ ಈ ಲೆವೆಲ್‌ಗೆ ಫಾಸ್ಟಾ. ಸಾಮಾಜಿಕ ಜಾಲತಾಣವಂತೂ ಈಗ ವೈವಿಧ್ಯತೆಯ ಆಗರ ಇಲ್ಲಿ ಸಿಗದಿರುವ ವಿಷಯಗಳೇ ಇಲ್ಲ. ಹೀಗಿರುವಾಗ ಇಲ್ಲೊಂದು ಮಕ್ಕಳ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ವೀಡಿಯೋ ನೋಡಿದ ಅನೇಕರು ಈ ಮಕ್ಕಳು ಹಾಗೂ ಅವರ ಪೋಷಕರಿಗೆ ಹಿಗ್ಗಾಮುಗ್ಗಾ ಜಾಡಿಸುತ್ತಿದ್ದಾರೆ. ಹಾಗಾದರೆ ಈ ಮಕ್ಕಳು ಮಾಡಿದ್ದೇನು ನೋಡಿ? 

ಸಾಮಾನ್ಯವಾಗಿ ವಯಸ್ಸು ಹಾಗೂ ಮಾನಸಿಕವಾಗಿ ಪ್ರಬುದ್ಧರಾಗಿರುವ ಪ್ರೇಮಿಗಳು ಈ ರೀತಿ ತಮ್ಮ ಪ್ರಿಯತಮೆ ಹಾಗೂ ಪ್ರಿಯಕರನಿಗೆ ಆಕೆಗೆ ತಿಳಿಯದಂತೆ ಅದ್ದೂರಿಯಾಗಿ ಅಚ್ಚುಕಟ್ಟಾಗಿ ಎಲ್ಲಾ ವ್ಯವಸ್ಥೆ ಮಾಡಿ ಸರ್‌ಫ್ರೆಸ್‌ ನೀಡಿ ಪ್ರೇಮ ನಿವೇದನೆ ಮಾಡೋದು ಈಗಿನ ಟ್ರೆಂಡ್, ಪ್ರೇಮಿಯ ಹುಟ್ಟುಹಬ್ಬದ ದಿನವೇ ಯಾವುದಾದರು ರೆಸಾರ್ಟ್‌ನಲ್ಲೋ ಹೊಟೇಲ್‌ನಲ್ಲೋ ಹಾಲ್ ಬುಕ್ ಮಾಡಿ ಅಲ್ಲಿ  ಎಲ್ಲಾ ಅದ್ದೂರಿತನವನ್ನು ಧರೆಗಿಳಿಸಿದ ಹುಡುಗಿಗೆ ಹುಡುಗ ಪ್ರೇಮ ನಿವೇದನೆ ಮಾಡುತ್ತಾನೆ. ಆಕೆಯನ್ನು ಕಣ್ಣು ಮುಚ್ಚಿ ಕರೆತರುತ್ತಾನೆ. ಏನು ಇದೆ ಎಂದು ಸುಳ್ಳು ಹೇಳಿ ಕರೆಸಿ ಬಿಗ್ ಸರ್‌ಫ್ರೆಸ್ ನೀಡುವ ಅನೇಕ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದನ್ನು ನೀವು ನೋಡಿರುತ್ತೀರಿ. ಬಹುಶಃ ನಿಮ್ಮದೇ ಬದುಕಲು ಇಂತಹ ಸುಂದರ ಕ್ಷಣಗಳು ನಡೆದಿರಲೂಬಹುದು. 

Tap to resize

Latest Videos

ದುರ್ಗಾಮಾತೆಗೆ ನವ ವಧುವಿನಂತೆ ಶೃಂಗಾರ ಮಾಡಿದ ಮೇಕಪ್ ಆರ್ಟಿಸ್ಟ್: ವೀಡಿಯೋ ಸಖತ್ ವೈರಲ್

ಆದರೆ ಇಲ್ಲಿ ಮದುವೆ ವಯಸ್ಸಿಗೆ ಬಂದಿರುವ ಹುಡುಗರು ಒಂದು ಹುಡುಗಿಯೂ ಸಿಗದೇ ಪರದಾಡ್ತಿದ್ರೆ, ಇಲ್ಲೊಬ್ಬ ಇನ್ನೂ ಮೀಸೆಯೂ ಚಿಗುರುದ ಹುಡುಗನೋರ್ವ ತನಗಿಂತ ಕಿರಿಯ ಹುಡುಗಿಯೊಬ್ಬಳನ್ನು ಕರೆದುಕೊಂಡು ಬಂದು ಆಕೆಯ ಹುಟ್ಟುಹಬ್ಬದ ದಿನವೇ ಪ್ರೇಮ ನಿವೇದನೆ ಮಾಡಿದ್ದಾನೆ. ಆತ ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ ಪ್ಲಾನ್ ಮಾಡಿದ ಅದ್ದೂರಿತನವೇ ಈಗ ನೆಟ್ಟಿಗರ ಕಣ್ಣು ಕುಕ್ಕುತ್ತಿದೆ. 

ಇವರಿಗೆ ನಿಜವಾಗಲೂ ಪ್ರಾಪ್ತ ವಯಸ್ಸಾಗಿ ಹೀಗೆ ಆಡುತ್ತಿದ್ದರೂ ಅಥವಾ ನಿಜವಾಗಿಯೂ ಇವರಿನ್ನು ಎಳೆ ಪ್ರಾಯದ ಪ್ರೇಮಿಗಳೋ ಒಂದು ತಿಳಿಯುತ್ತಿಲ್ಲ, ವೀಡಿಯೋದಲ್ಲಿ ಕಾಣಿಸುವಂತೆ, ಐಷಾರಾಮಿ ಕಪ್ಪು ಬಣ್ಣದ ಕಾರೊಂದರಲ್ಲಿ  ತನ್ನ ಪ್ರೇಮಿಯನ್ನು ಕರೆದುಕೊಂಡು ಬರುವ ಸಣ್ಣ ಹುಡುಗ ಆಕೆ ಕಾರಿನಿಂದ ಇಳಿಯುತ್ತಿದ್ದಂತೆ ಆಕಾಶದಲ್ಲಿ ಸುಡುಮದ್ದಿನ ಪ್ರದರ್ಶನವಾಗುತ್ತಿದೆ. ನಂತರ ಕಪ್ಪು ಬಣ್ಣದ ಉದ್ದನೆಯ ಗವನ್ ತೊಟ್ಟಿರುವ ಆಕೆಯ ಕಣ್ಣನ್ನು ಮುಚ್ಚಿಸಿಕೊಂಡು ಸಂಪೂರ್ಣವಾಗಿ ಅಲಂಕಾರ ಮಾಡಲಾಗಿರುವ ಸ್ಥಳಕ್ಕೆ,  ಹೂ ಹಾಸಿರುವ ಹಾದಿಯಲ್ಲಿ ಆಕೆಯನ್ನು ಕರೆದುಕೊಂಡು ಬರುತ್ತಾನೆ ಈ ಹುಡುಗ,  ಇದಾದ ನಂತರ ಆಕೆಯನ್ನು ವೇದಿಕೆಗೆ ಹತ್ತಿಸಿ ಆಕೆಯ ಕಣ್ಣಿನಿಂದ ಆತ ಕೈ ತೆರೆಯುತ್ತಾನೆ. ಈ ವೇಳೆ ಸುತ್ತಲೂ ನೋಡಿ ಆಕೆ ಅಚ್ಚರಿ ಪಡುತ್ತಾಳೆ. ಅದೇ ಸಮಯಕ್ಕೆ ಆತ ಮಂಡಿಯೂರಿ ಆಕೆಗೆ ಪ್ರೇಮ ನಿವೇದನೆ ಮಾಡಿದ್ದಾನೆ.  ಇತ್ತ ಈ ಬಾಲೆ ನಾಚುತ್ತಾ ಕೈ ನೀಡಿದ್ದಾಳೆ. ಉಂಗುರ ಆಕೆಯ ಬೆರಳನ್ನಲಂಕರಿಸಿದೆ.

ಈ ವೀಡಿಯೋ ನೋಡಿದ ನೆಟ್ಟಿಗರು ಈ ಮಕ್ಕಳ ಅಪ್ಪ ಅಮ್ಮ ಎಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ.  time4fun_'s ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ.  ವೀಡಿಯೋ ನೋಡಿದ ಅನೇಕರು ಲೆದರ್ ಬೆಲ್ಟ್‌ನಿಂದ ಇವರ ಈ ಶೋಕಿ ಸರಿಪಡಿಸಬಹುದು ಎಂದು ಕಾಮೆಂಟ್ ಮಾಡ್ತಿದ್ದಾರೆ.  ಹೀಗೆ ಅನೇಕರು ತರಹೇವಾರಿ ಕಾಮೆಂಟ್ ಮಾಡಿದ್ದು, ಈ ವೀಡಿಯೋವನ್ನು ಎರಡು ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಕಂಡಿದೆ. 

ಇಲ್ಲಿದೆ ನೋಡಿ ಈ ಪ್ರೇಮ ನಿವೇದನೆಯ ವೀಡಿಯೋ

 
 
 
 
 
 
 
 
 
 
 
 
 
 
 

A post shared by Saifeena (@time4fun_)

 

click me!