ತಿರುಪತಿ ದೇಗುಲದ ಲಡ್ಡಿನಲ್ಲಿ ದನದ ಕೊಬ್ಬಿನಾಂಶ ಇರುವ ವಿಚಾರ ದೇಶದ್ಯಾಂತ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬೆನ್ನಲ್ಲೇ ಈಗ ತಿರುಪತಿಯಲ್ಲಿ ನೀಡಿದ ಅನ್ನ ಪ್ರಸಾದದಲ್ಲಿ ಕೀಟವೊಂದು ಸಿಕ್ಕಿದೆ ಎಂದು ಭಕ್ತರೊಬ್ಬರು ಆರೋಪ ಮಾಡಿದ್ದಾರೆ.
ತಿರುಪತಿ ದೇಗುಲದ ಲಡ್ಡಿನಲ್ಲಿ ದನದ ಕೊಬ್ಬಿನಾಂಶ ಇರುವ ವಿಚಾರ ದೇಶದ್ಯಾಂತ ತೀವ್ರ ರಾಜಕೀಯ ಜಟಾಪಟಿಗೆ ಕಾರಣವಾಗಿರುವ ಬೆನ್ನಲ್ಲೇ ಈಗ ತಿರುಪತಿಯಲ್ಲಿ ನೀಡಿದ ಅನ್ನ ಪ್ರಸಾದದಲ್ಲಿ ಕೀಟವೊಂದು ಸಿಕ್ಕಿದೆ ಎಂದು ಭಕ್ತರೊಬ್ಬರು ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ತಿರುಪತಿ ದೇಗುಲ ಮಂಡಳಿ ನಿರಾಕರಿಸಿದೆ. ಇದೊಂದು ಆಧಾರರಹಿತವಾದ ಆರೋಪ ಎಂದು ದೇಗುಲ ಮಂಡಳಿ ಹೇಳಿದೆ.
ಈ ಘಟನೆ ಬುಧವಾರ ನಡೆದಿದೆ, ಹೆಸರು ಹೇಳಲು ಇಚ್ಚಿಸದ ಭಕ್ತರೊಬ್ಬರು ತನಗೆ ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ನೀಡಿದ ಅನ್ನ ಪ್ರಸಾದದಲ್ಲಿ ಕೀಟವೊಂದು ಸಿಕ್ಕಿದೆ ಎಂದು ದೂರಿದ್ದಾರೆ. ಈ ರೀತಿಯ ಅವ್ಯವಸ್ಥೆಯನ್ನು ಒಪ್ಪಿಕೊಳ್ಳಲಾಗದು, ಇದು ಟಟಿಡಿಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತೇವೆ ಎಂದು ಭಕ್ತರೊಬ್ಬರು ಹೇಳಿದ್ದಾರೆ.
ಶಬರಿಮಲೆ ಯಾತ್ರೆಗೆ ಇನ್ನು ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ: ನಿತ್ಯ ಇಷ್ಟು ಭಕ್ತರಿಗಷ್ಟೇ ಅಯ್ಯಪ್ಪ ದರ್ಶನ
ಅಲ್ಲದೇ ತಮಗಾದ ಅನುಭವವನ್ನು ಭಕ್ತರೊಬ್ಬರು ಹೀಗೇ ಹೇಳಿಕೊಂಡಿದ್ದಾರೆ. ನಾನು ವಾರಂಗಲ್‌ನಿಂದ ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬಂದಿದ್ದೆ. ನಾನು ದೇಗುಲದಲ್ಲಿ ಕೇಶ ಮುಂಡನ ಮಾಡಿಸಿದ ನಂತರ ಇಲ್ಲಿ ಊಟಕ್ಕೆ ಹೋಗಿದ್ದು, ಅಲ್ಲಿ ನನಗೆ ಮೊಸರನ್ನ ಪ್ರಸಾದದಲ್ಲಿ ಚೇರಟೆ (millipede)ಹುಳ ಸಿಕ್ಕಿದೆ. ಈ ವಿಚಾರವನ್ನು ನಾನು ಆಡಳಿತ ಮಂಡಳಿ ಬಳಿ ದೂರಿದಾಗ ಅವರ ವರ್ತನೆ ಇದೆಲ್ಲಾ ಸಹಜ ಎಂಬಂತಿತ್ತು. ಕೆಲವೊಮ್ಮೆ ಹೀಗಾಗುತ್ತೆ ಎಂದು ಅವರು ಹೇಳಿದರು. ಆಂಧ್ರಪ್ರದೇಶದಲ್ಲಿ ಸರ್ಕಾರ ಬದಲಾದರು ಇಂತಹ ಸಮಸ್ಯೆಗಳು ಮಾತ್ರ ಹಾಗೆಯೇ ಇದೆ ಎಂದು ಆ ಭಕ್ತರು ಆರೋಪಿಸಿದ್ದಾರೆ.
ಇಂಗ್ಲೀಷ್‌ನಲ್ಲಿ ಮಿಲ್ಲಿಪಿಡೆ ಎಂದು ಕರೆಯಲ್ಪಡುವ ಈ ಸಹಸ್ರಪದಿಯನ್ನು ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಉತ್ತರ ಕರ್ನಾಟಕದ ಕಡೆ ಬೆಂಡೆ ಹುಳ ಎಂದು ಕರೆದರೆ ದಕ್ಷಿಣ ಕನ್ನಡ ಭಾಗದಲ್ಲಿ ಚೇರಟೆ ಎಂದು ಕರೆಯುತ್ತಾರೆ. ಅಧಿಕ ತೇವಾಂಶವಿರುವ ಹೆಚ್ಚು ಮಳೆ ಬರುವ ಪ್ರದೇಶಗಳಲ್ಲಿ ಇದು ಸಾಮಾನ್ಯವಾಗಿದ್ದು, ಸಾಧು ಜೀವಿಯಾಗಿದೆ. ಮನುಷ್ಯರಿಗೆ ಇದು ಯಾವುದೇ ಹಾನಿ ಮಾಡುವುದಿಲ್ಲ, ಇದನ್ನು ಮುಟ್ಟಿದರೆ ಸುರುಳಿ ಸುತ್ತಿ ಚಕ್ಕುಲಿಯಂತಾಗುತ್ತದೆ.
ದೇಗುಲ ಸ್ವಚ್ಛಗೊಳಿಸಿದ ಪವನ್ ಕಲ್ಯಾಣ್- ಇತ್ತ ಕ್ಷಮೆ ಯಾಚಿಸಿದ ನಟ ಕಾರ್ತಿ