ಹೆಚ್ಚು ಲೈಂಗಿಕ ಕ್ರಿಯೆ ನಡೆಸಿದರೆ ದೀರ್ಘಾಯುಷ್ಯ? ಈ ಸ್ಟಡಿಯ ಫಲಿತಾಂಶವೇ ರೋಚಕ!

By Bhavani Bhat  |  First Published Oct 6, 2024, 3:01 PM IST

ನಿಯಮಿತ ಲೈಂಗಿಕ ಚಟುವಟಿಕೆ ಹಾಗೂ ನಿಮ್ಮ ಆಯುಷ್ಯ- ಎರಡಕ್ಕೂ ಸಂಬಂಧವಿದೆ ಎಂದು ಹೊಸ ಅಧ್ಯಯನ ಹೇಳಿದೆ. ಇದು ಹೆಚ್ಚು ಹೆಚ್ಚು ಸೆಕ್ಸ್‌ನಿಂದ ಮಹಿಳೆಯರ ಆರೋಗ್ಯದಲ್ಲಿ ಏನಾಗುತ್ತದೆ, ಪುರುಷರಲ್ಲಿ ಏನಾಗುತ್ತದೆ ಎಂಬುದನ್ನು ವಿವರಿಸಿದೆ.


"ಬ್ರಹ್ಮಚರ್ಯವೇ ಜೀವನ, ವೀರ್ಯನಾಶವೇ ಮೃತ್ಯುʼʼ ಎಂಬ ಮಾತುಗಳನ್ನು ನೀವು ಕೇಳಿರುತ್ತೀರಿ. ಹೆಚ್ಚು ಲೈಂಗಿಕ ಕ್ರಿಯೆ ನಡೆಸಿದರೆ ಮನುಷ್ಯ ಸಾವಿಗೆ ಹೆಚ್ಚು ಹತ್ತಿರವಾಗುತ್ತ ಹೋಗುತ್ತಾನೆ, ಯಾಕೆಂದರೆ ಆತನ ಎನರ್ಜಿ ಸೋರಿ ಹೋಗುತ್ತಿರುತ್ತದೆ ಎಂಬ ಮಾತನ್ನೂ ಕೇಳಿದ್ದೀರಿ. ಆದರೆ ಇದನ್ನು ಸಂಪೂರ್ಣವಾಗಿ ಮಗುಚಿಹಾಕುವ ಮಾಹಿತಿಯೊಂದು ಸಂಶೋಧನೆಯಿಂದ ಹೊರಬಿದ್ದಿದೆ. 

ಹೊಸ ಅಧ್ಯಯನದ ಪ್ರಕಾರ, ನಿಯಮಿತವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವವರು ಹೆಚ್ಚು ಕಾಲ ಬದುಕುತ್ತಾರಂತೆ. ಅದರಲ್ಲೂ  ಮಹಿಳೆಯರು! ಇದು ಅಮೆರಿಕದಲ್ಲಿ ನಡೆಸಿದ ಅಧ್ಯಯನ. ನ್ಯಾಷನಲ್ ಹೆಲ್ತ್ ಅಂಡ್ ನ್ಯೂಟ್ರಿಷನ್ ಎಕ್ಸಾಮಿನೇಷನ್ ಸರ್ವೆ (NHANES) ಇದನ್ನು ಮಾಡಿದೆ. ಇದರ ಫಲಿತಾಂಶದ ಅಧ್ಯಯನದಿಂದ ನಾವೀಗ ಹಲವು ಹೊಸ ವಿಷಯಗಳನ್ನು ತಿಳಿದಿದ್ದೇವೆ. 

Tap to resize

Latest Videos

undefined

ಏನಿದು ಅಧ್ಯಯನ? ವಾಲ್ಡೆನ್ ವಿಶ್ವವಿದ್ಯಾನಿಲಯದ ಸಾರ್ವಜನಿಕ ಆರೋಗ್ಯ ವಿಜ್ಞಾನಿ ಶ್ರೀಕಾಂತ ಬ್ಯಾನರ್ಜಿ ನೇತೃತ್ವದ ಸಂಶೋಧನೆಯು 20 ರಿಂದ 59 ವರ್ಷ ವಯಸ್ಸಿನ 14,542 ವಯಸ್ಕರನ್ನು ಸಮೀಕ್ಷೆಗೆ ಒಳಪಡಿಸಿತು. ಇದರಲ್ಲಿ ಭಾಗವಹಿಸಿದವರನ್ನು ಅವರ ಲೈಂಗಿಕ ಚಟುವಟಿಕೆಯ ಬಗ್ಗೆ ಕೇಳಲಾಯಿತು. ಸುಮಾರು 38% ರಷ್ಟು ಜನರು ವಾರಕ್ಕೊಮ್ಮೆಯಾದರೂ ಲೈಂಗಿಕತೆಯನ್ನು ಹೊಂದಿದ್ದಾರೆಂದು ಹೇಳಿದರು. ಐದು ವರ್ಷಗಳ ಅಧ್ಯಯನದ ಅವಧಿಯಲ್ಲಿ ಕಂಡುಬಂದ ಫಲಿತಾಂಶಗಳನ್ನು ಜರಡಿ ಹಿಡಿಯಲಾಯಿತು.

ಮಹಿಳೆಯರಿಗೆ ಸೆಕ್ಸ್‌ ಹೆಚ್ಚು ಫಲಕಾರಿ ಎಂಬುದು ಗೊತ್ತಾಗಿದೆ. ವರ್ಷಕ್ಕೆ 52ಕ್ಕಿಂತ ಕಡಿಮೆ ಬಾರಿ ಸಂಭೋಗ ಮಾಡಿದವರು ಯಾವುದೇ ಕಾರಣದಿಂದ ಸಾಯುವ ಸಾಧ್ಯತೆ ಮೂರು ಪಟ್ಟು ಹೆಚ್ಚು ಕಂಡುಬಂತು. ಶಿಕ್ಷಣ, ಜನಾಂಗೀಯತೆ ಮತ್ತು ಸಾಮಾಜಿಕ ಆರ್ಥಿಕ ಸ್ಥಿತಿಯಂತಹ ಅಂಶಗಳನ್ನು ಲೆಕ್ಕಹಾಕಿದ ನಂತರವೂ ಈ ವಿಚಾರ ಹೀಗೆ ಕಂಡುಬಂದುದು ಗಮನಾರ್ಹ.

ಕುತೂಹಲಕಾರಿ ಎಂದರೆ, ಈ ಫಲಿತಾಂಶ ಪುರುಷರಲ್ಲಿ ಕಂಡುಬರಲಿಲ್ಲ. ಆದರೂ ಲೈಂಗಿಕ ಚಟುವಟಿಕೆಯು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಫಲದಾಯಕ. ವಿಶೇಷವಾಗಿ, ಕಳಪೆ ಮಾನಸಿಕ ಆರೋಗ್ಯ ಹೊಂದಿರುವವರಿಗೆ ಇದು ತುಂಬಾ ಆರಾಮದಾಯಕವಂತೆ. ಖಿನ್ನತೆಗೆ ಒಳಗಾದ ವ್ಯಕ್ತಿಗಳಿಗೆ ಹೋಲಿಸಿದರೆ ವರ್ಷಕ್ಕೆ 52 ಕ್ಕಿಂತ ಕಡಿಮೆ ಲೈಂಗಿಕ ಸಂಭೋಗ ಹೊಂದಿರುವ ಖಿನ್ನತೆ ಹೊಂದಿರುವವರು ಸಾಯುವ ಸಾಧ್ಯತೆ 200% ಹೆಚ್ಚು. ಆದರೆ ವರ್ಷಕ್ಕೆ 52 ಕ್ಕಿಂತ ಹೆಚ್ಚು ಬಾರಿ ಲೈಂಗಿಕವಾಗಿ ಸಕ್ರಿಯವಾಗಿರುವವರು 75% ಕಡಿಮೆ ಅಪಾಯವನ್ನು ಹೊಂದಿರುತ್ತಾರೆ.

ಮೈಸೂರು ಅರಮನೆಯಲ್ಲಿ ಗುಡ್‌ ನ್ಯೂಸ್?‌ ಸಂಸದ ಯದುವೀರ ಒಡೆಯರ್‌- ತ್ರಿಶಿಕಾ ಕುಮಾರಿಗೆ ಇನ್ನೊಂದು ಮಗು ಆಗಮನದ ಸುಳಿವು!
 

ಲೈಂಗಿಕತೆಯಿಂದ ಸುಧಾರಿತ ಹೃದಯ ರಕ್ತನಾಳದ ಆರೋಗ್ಯ, ಕಡಿಮೆ ಒತ್ತಡ, ಹೆಚ್ಚಿದ ಸಂತೋಷ ಮತ್ತು ವರ್ಧಿತ ಮೆದುಳಿನ ಆರೋಗ್ಯ ಲಾಭಗಳಿವೆ. ಹಸ್ತಮೈಥುನದಂತಹ ಏಕವ್ಯಕ್ತಿ ಲೈಂಗಿಕ ಚಟುವಟಿಕೆ ಕೂಡ ಒತ್ತಡವನ್ನು ಕಡಿಮೆ ಒತ್ತಡ ಮಾಡುತ್ತದೆ ಮತ್ತು ಉತ್ತಮ ನಿದ್ರೆಯನ್ನು ತಂದು ನೀಡುತ್ತದೆ. ಆದರೆ ಈ ಹೊಸ ಸಂಶೋಧನೆಯು ಮಹಿಳೆಯರಿಗೆ ಲೈಂಗಿಕ ಚಟುವಟಿಕೆಯ ಪ್ರಯೋಜನಗಳನ್ನು ವಿಶೇಷವಾಗಿ ದೀರ್ಘಾಯುಷ್ಯದ ವಿಷಯದಲ್ಲಿ ಹೆಚ್ಚು ವರದಾಯಕ ಎಂದಿದೆ. ಇದಕ್ಕೆ ನಿಖರವಾದ ಕಾರಣಗಳು ಸ್ಪಷ್ಟವಾಗಿಲ್ಲ. ಆದರೆ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿರುವ ಖಿನ್ನತೆಯು ಅಕಾಲಿಕ ಮರಣದ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ. ನಿಯಮಿತ ಲೈಂಗಿಕ ಚಟುವಟಿಕೆಯು ಈ ಅಪಾಯದ ವಿರುದ್ಧ ಹೆಚ್ಚಿನ ರಕ್ಷಣೆ ನೀಡುತ್ತದೆ.

ಲೈಂಗಿಕತೆಯ ಪ್ರಕಾರಗಳು ಅಥವಾ ಒಳಗೊಂಡಿರುವ ತೃಪ್ತಿಯ ಮಟ್ಟಗಳಂತಹ ಲೈಂಗಿಕ ಚಟುವಟಿಕೆಯ ಅಂಶಗಳನ್ನು ಈ ಅಧ್ಯಯನ ಪರಿಶೀಲಿಸಿಲ್ಲ. ಭವಿಷ್ಯದ ಸಂಶೋಧನೆಗಳಲ್ಲಿ ಲೈಂಗಿಕ ತೃಪ್ತಿಯ ಕುರಿತು ಹೆಚ್ಚು ವಿವರಗಳನ್ನು ಸೇರಿಸುವುದು ಸಂಶೋಧನೆಯನ್ನು ಸ್ಪಷ್ಟಪಡಿಸಲು ಸಹಾಯ ಮಾಡುತ್ತದೆ. ನೀವು ಈ ಕುರಿತು ಯಾವುದೇ ತೀರ್ಮಾನಕ್ಕೆ ಬರುವ ಮೊದಲು, ಒಂದು ಪ್ರಮುಖ ಎಚ್ಚರಿಕೆ ಇದೆ: ದೈನಂದಿನ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ ಪುರುಷರು ಅದೇ ರೀತಿ ಮಾಡಿದ ಮಹಿಳೆಯರಿಗಿಂತ ಅಕಾಲಿಕ ಮರಣವನ್ನು ಅನುಭವಿಸುವ ಸಾಧ್ಯತೆ ಆರು ಪಟ್ಟು ಹೆಚ್ಚಂತೆ! ಅಂದರೆ, ಅತಿಯಾದ ಲೈಂಗಿಕತೆಯೂ ಒಳ್ಳೆಯದಲ್ಲ. 

ಈಕೆಗೆ ಕಿಸ್‌ ಕೊಡ್ತೀರಾ? ಅವಳ ಪ್ರಾಣಾನೇ ಹೋಗಬಹುದು ಹುಷಾರ್!‌
 

click me!