
ಪ್ರತಿಯೊಬ್ಬರಿಗೂ ತಮ್ಮಇಂಟಿಮೇಟ್ ಸಮಯಗಳು ಸಂತೋಷವನ್ನು ನೀಡಬೇಕೆಂಬ ಅಸೆ ಇರುತ್ತದೆ. ಅದರಲ್ಲೂ ಮಹಿಳೆಯರು ಆ ಸಮಯದ ಬಗ್ಗೆ ತುಂಬಾ ಆಲೋಚನೆಗಳನ್ನು ಮಾಡಿರುತ್ತಾರೆ. ಮಹಿಳೆಯರು ಆ ಸಮಯದಲ್ಲಿ ಏನನ್ನು ಬಯಸುತ್ತಾರೆ ಅನ್ನೋದನ್ನು ತಿಳಿದುಕೊಂಡರೆ ಅವರನ್ನು ಮತ್ತಷ್ಟು ಖುಷಿಪಡಿಸಬಹುದು.
ಕಿಸ್: ಮಹಿಳೆಯರು ಈ ಸಮಯದಲ್ಲಿ ಮುತ್ತಿಡಲು ಹಾತೊರೆಯುತ್ತಾರೆ. ಅದರಲ್ಲಿಯೂ ದೇಹ ಪೂರ್ತಿ ಪತಿ ಮುತ್ತಿಡಲಿ ಎಂದು ಆಶಿಸುತ್ತಾರೆ.
ಅಗ್ರೆಸಿವ್ ಗಂಡವಿಷ್ಟ: ಸುಮ್ಮನೆ ಮುದ್ದು ಮಾಡೋ ಬದಲು, ಪತಿ ಸ್ವಲ್ಪ ಅಗ್ರೆಸಿವ್ ಆಗಿರಬೇಕೆಂದು ಪತ್ನಿ ಇಷ್ಟಪಡುತ್ತಾಳೆ. ಹಾಗಂತ ಈ ಅಗ್ರೆಸಿವ್‌ನೆಸ್ ಎಲ್ಲ ಕಾಲದಲ್ಲಿಯೂ ಇರಬಾರದು ಹೆಣ್ಣಿಗೆ.
ಡರ್ಟಿ ಟಾಲ್ಕ್: ಬೆಡ್ ರೂಮಿನಲ್ಲಿರುವಾಗ ಪತಿದೇವ, ಪೋಲಿ ಪೋಲಿ ಮಾತನಾಡಿದರೆ ಪತ್ನಿಗಿಷ್ಟ. ಹಾಗಂತ ಸಭ್ಯತೆ ಚೌಕಟ್ಟಿನಲ್ಲಿಯೇ ಇರೋದು ಆಕೆಗಿಷ್ಟ.
ಗೌರವ: ಗಂಡನಿಂದ ಸದಾ ಗೌರವ ಬಯಸೋ ಹೆಣ್ಣಿಗೆ ಆ ಸಮಯದಲ್ಲಿ ಪ್ರೀತಿ ಮಾತ್ರ ಮುಖ್ಯವಾಗಿರುತ್ತದೆ. ಹಾಗಂತ ಇದು ಗೌರವಯುತ ಪ್ರೀತಿಯೇ ಆಗಿದ್ದರೆ ಮತ್ತಷ್ಟು ಚೆಂದ.
ಆಕೆಯ ಒಪ್ಪಿಗೆ: ಸುಖಾ ಸುಮ್ನೆ ಗಂಡ ಮೈ ಮೇಲೆ ಬಿದ್ದರೆ ಪತ್ನಿ ಇರಿಟೇಟ್ ಆಗ್ತಾಳೆ. ಬದಲಾಗಿ ಆಕೆಯನ್ನು ಮೂಡಿಗೆ ತರಬೇಕು. ಬಲವಂತ ಮಾಡಿದರಂತೂ ಸಿಕ್ಕಾಪಟ್ಟೆ ಹರ್ಟ್ ಆಗಿರ್ತಾಳೆ ಎಂಬುವುದು ನೆನಪಿರಲಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.