ಟಾಯ್ಲೆಟ್‌ ಸೀಟ್‌ಗಿಂತಲೂ ಮೊಬೈಲ್‌ ಹೆಚ್ಚು ಕೊಳಕು!

By Web DeskFirst Published Jan 13, 2019, 12:09 PM IST
Highlights

ಮೊಬೈಲ್‌ಗಳು ಟಾಯ್ಲೆಟ್‌ ಸೀಟ್‌ಗಿಂತ 7 ಪಟ್ಟು ಕೊಳಕಾಗಿರುತ್ತವಂತೆ!  ಮೊಬೈಲನ್ನು ಟಾಯ್ಲೆಟ್‌ಗೆ ತೆಗೆದುಕೊಂಡು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ!

ಬೆಂಗಳೂರು (ಜ. 13): ಮೊಬೈಲ್‌ ಮೊಬೈಲ್‌ ಮೊಬೈಲ್‌.. ಎಲ್ಲಿ ನೋಡಿದರೂ ಮೊಬೈಲ್‌. ಇತ್ತೀಚೆಗಂತೂ ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು. ಕೈಯಲ್ಲಿ ಮೊಬೈಲ್‌ ಇದ್ದರೆ ಇಡೀ ಪ್ರಪಂಚವೇ ಮುಷ್ಟಿಯಲ್ಲಿದೆ ಎಂಬಷ್ಟುತಂತ್ರಜ್ಞಾನ ಬೆಳೆಯುತ್ತಿದೆ.

ಹಾಗಾಗಿ ಮೊಬೈಲ್‌ ನಮ್ಮ ಕೈಬಿಟ್ಟು ದೂರ ಹೋಗೋದೇ ಎಲ್ಲ. ಪ್ರತಿ ಕ್ಷಣ ಸುಮ್ಮನೆಯಾದರೂ ಮೊಬೈಲ್‌ ಸ್ವೈಪ್‌ ಮಾಡುವುದು ಹವ್ಯಾಸ ಆಗುತ್ತಿದೆ. ಆದರೆ ನಮ್ಮ ಮೊಬೈಲ್‌ ಬಿಟ್ಟು ಮೂಗು ಮುಚ್ಚಿಕೊಳ್ಳುವಂತಹ ಸುದ್ದಿಯೊಂದನ್ನು ಸಮೀಕ್ಷೆಯೊಂದು ನೀಡಿದೆ. ಅದೇನೆಂದರೆ ಮೊಬೈಲ್‌ಗಳು ಟಾಯ್ಲೆಟ್‌ ಸೀಟ್‌ಗಿಂತ 7 ಪಟ್ಟು ಕೊಳಕಾಗಿರುತ್ತವಂತೆ! ಸಮೀಕ್ಷೆಗೆ 220 ಟಾಯ್ಕೆಟ್‌ ಸೀಟ್‌ ಮತ್ತು 1,479 ಮೊಬೈಲ್‌ಗಳನ್ನು ಪರಿಶೀಲಿಸಿದ್ದು, ಟಾಯ್ಲೆಟ್‌ ಸೀಟ್‌ಗಳಿಗಿಂತ ಮೊಬೈನಲ್ಲಿಯೇ ಹೆಚ್ಚು ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯು 2000 ಜನರನ್ನು ಒಳಗೊಂಡಿದ್ದು ಅದರಲ್ಲಿ ಶೇ.40ರಷ್ಟುಜನರು ಬಾತ್‌ರೂಮ್‌ಗೂ ಮೊಬೈಲ್‌ ತೆಗೆದುಕೊಂಡು ಹೋಗುವುದಕ್ಕೆ ಅಡಿಕ್ಟ್ ಆಗಿದ್ದಾರಂತೆ. ಅದರಲ್ಲಿ ಶೇ.20ರಷ್ಟುಜನರು ಮಾತ್ರ ಬಾತ್‌ರೂಮ್‌ನಿಂದ ವಾಪಸ್‌ ಬಂದ ಬಳಿಕ ಮೊಬೈಲನ್ನು ಕ್ಲೀನ್‌ ಮಾಡುತ್ತಾರಂತೆ.

ಇದಿಷ್ಟೇ ಅಲ್ಲದೆ ಕಚೇರಿಯಲ್ಲಿ ಕೆಲಸ ಮಾಡುವ ಐವರಲ್ಲಿ ಒಬ್ಬರು ಆಫೀಸ್‌ ಟಾಯ್ಲೆಟ್‌ ರೂಮ್‌ಗೂ ಮೊಬೈಲ್‌ ತೆಗೆದುಕೊಂಡು ಹೋಗುತ್ತಾರೆ ಎಂದು ಸಮೀಕ್ಷೆ ವೇಳೆ ತಿಳಿದುಬಂದಿದೆ. ಹಾಗಾಗಿ ಮೊಬೈಲ್‌ ಬಳಕೆ ಮತ್ತು ಕರ್ಚೀಫ್‌ ಎರಡೂ ಒಂದೇ. ಪದೇ ಪದೇ ಸ್ಪರ್ಶಿಸುವುದರಿಂದ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುತ್ತವೆ.

ಹಾಗಾಗಿ ಇತ್ತೀಚೆಗೆ ಮೊಬೈಲ್‌ ಅತ್ಯಂತ ಕೊಳಕು ವಸ್ತುವಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಇದು ಫುಡ್‌ ಪಾಯಿಸನ್‌ ಅಥವಾ ಹೊಟ್ಟೆನೋವಿಗೂ ಕಾರಣವಾಗುತ್ತಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.
 

click me!