ಹೊಟ್ಟೆ ನೋವು, ತಲೆನೋವಿಗೂ ಶುಂಠಿ ಮನೆ ಮದ್ದು....

By Web DeskFirst Published Jan 12, 2019, 4:42 PM IST
Highlights

ಹೊಟ್ಟೆ ನೋವು ಹಾಗೂ ತಲೆ ನೋವು ಮನುಷ್ಯನನ್ನು ಕಾಡುವ ಸಾಮಾನ್ಯ ಕಾಯಿಲೆಗಳು. ಇದಕ್ಕೆ ಸುಖಾ ಸುಮ್ಮನೆ ಮಾತ್ರೆ ಸೇವಿಸೋ ಬದಲು, ಶುಂಠಿಯಿಂದ ಮದ್ದು ಮಾಡಿಕೊಳ್ಳಬಹುದು. ಹೇಗೆ?

ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಇರುವ ವಸ್ತು ಎಂದರೆ ಅದು ಶುಂಠಿ. ಚಟ್ನಿ ಮಾಡಲು, ಸಾಂಬಾರ್, ತಿಂಡಿ ಮಾಡಲು ಇದನ್ನು ಬಳಸಲಾಗುತ್ತದೆ. ಇದು ಹಲವಾರು ಔಷಧೀಯ ಗುಣ ಹೊಂದಿದೆ. ಶುಂಠಿ ಕೇವಲ ಸ್ವಾದಿಷ್ಟ ಚಹಾ ಮಾಡಲು ಮಾತ್ರವಲ್ಲ ಕೆಮ್ಮು, ಶೀತ, ಹೊಟ್ಟೆ ನೋವು, ತಲೆನೋವು ಮೊದಲಾದ ಸಮಸ್ಯೆ ನಿವಾರಿಸುತ್ತದೆ.

  • ಒಂದು ಚಮಚ ಶುಂಠಿ ಪುಡಿಯನ್ನು ಜೇನು ಅಥವಾ ಬೆಲ್ಲದ ಜೊತೆ ಸೇವಿಸಿದರೆ ಕೆಮ್ಮು, ಶೀತ ನಿವಾರಣೆಯಾಗುತ್ತದೆ.
  • ಶುಂಠಿ ತುಂಡನ್ನು ಉಪ್ಪಿನ ಜೊತೆ ಸೇವಿಸಿದರೆ ಹಸಿವಿನ ಸಮಸ್ಯೆಗೆ ಬೆಸ್ಟ್ ಮದ್ದು.
  • ತಂಡಿಯಿಂದ ಬರೋ ಕಿವಿ ನೋವಿಗೂ ಶುಂಠಿ ರಸ ಮದ್ದು. ಶುಂಠಿ ರಸ ಕುಡಿದರೆ ತಂಡಿ ತೊಲಗಿ, ಕಿವಿ ನೋವೂ ಗುಡ್ ಬೈ ಹೇಳುತ್ತೆ.
  • ಗಂಟಲಿನಲ್ಲಿ ಕೆರೆತ ಕಾಣಿಸಿಕೊಂಡರೆ, ಶುಂಠಿಯನ್ನು ಜೇನಿನ ಜೊತೆ ಸೇವಿಸಿ. ಇದರಿಂದ ಗಂಟಲಿಗೆ ಆರಾಮ ದೊರೆಯುತ್ತದೆ.
  • ತಲೆ ನೋವು ಸಾಮಾನ್ಯವಾಗಿ ಕಾಡುವ ಸಮಸ್ಯೆ. ಜೋರಾಗಿ ತಲೆ ನೋವು ಕಾಣಿಸಿಕೊಂಡರೆ ಹಣೆ ಮೇಲೆ ಶುಂಠಿ ಪೇಸ್ಟ್ ಹಚ್ಚಿ. ಇದರಿಂದ ಕೆಲವೇ ಕ್ಷಣಗಳಲ್ಲಿ ತಲೆನೋವು ಮಾಯವಾಗುತ್ತದೆ.
  • ಹೊಟ್ಟೆ ನೋವಿನ ಸಮಸ್ಯೆ ಉಂಟಾದರೆ ನಿಂಬೆ ಜ್ಯೂಸು ಜೊತೆ ಉಪ್ಪು ಬೆರೆಸಿ ಅದಕ್ಕೆ ಶುಂಠಿ ರಸ ಹಾಕಿ ಸೇವಿಸಿ.
click me!