ಮಗು Lefty ನಾ Righty? ತಾಯಿ ಎದೆ ಹಾಲುಣಿಸುವಾಗ್ಲೇ ಗೊತ್ತಾಗುತ್ತೆ!

By Web Desk  |  First Published Jan 12, 2019, 1:19 PM IST

ನಿಮ್ಮ ಮಗು ಮುಂದೆ ಲೆಫ್ಟಿ ಆಗುತ್ತಾ ರೈಟಿ ಆಗುತ್ತಾ? ಇದು ಹಾಲುಣಿಸುವ ಪ್ರಕ್ರಿಯೆಯಿಂದಲೇ ತಿಳಿದು ಬರುತ್ತದೆ...! ಹೇಗೆ ಅಂತೀರಾ? ಇಲ್ಲಿದೆ ನೋಡಿ ವಿವರ


ನೀವು ಬರೆಯಲು, ಕೆಲಸ ಮಾಡಲು ನಿಮ್ಮ ಎಡಗೈ ಬಳಸುತ್ತೀರೋ, ಬಲಗೈ ಬಳಸುತ್ತೀರೋ? ಸದ್ಯ ಅಧ್ಯಯನವೊಂದರಲ್ಲಿ ತಾಯಿ ಹಾಲುಣಿಸುವ ಸಮಯದಿಂದ ಮಗು ಭವಿಷ್ಯದಲ್ಲಿ ಯಾವ ಕೈ ಹೆಚ್ಚು ಬಳಸುತ್ತದೆ ಎಂದು ತಿಳಿಯುತ್ತದೆ. ಎದೆ ಹಾಲು ಕುಡಿದ ಮಕ್ಕಳು ಹೆಚ್ಚಾಗಿ ಬಲಗೈಯನ್ನೇ ಬಳಸುತ್ತಾರೆ ಎಂದು ತಿಳಿದು ಬಂದಿದೆ. 

ಯೂನಿವರ್ಸಿಟಿ ಆಫ್ ವಾಷಿಂಗ್ಟನ್ ನಲ್ಲಿ ನಡೆದ ಅಧ್ಯಯನದ ಅನುಸಾರ ಯಾವೆಲ್ಲ ಮಕ್ಕಳು 9 ತಿಂಗಳಿಗಿಂತಲೂ ಅಧಿಕ ಎದೆ ಹಾಲು ಕುಡಿದಿದ್ದಾರೋ ಅವರೆಲ್ಲರೂ ತಮ್ಮ ದಿನ ನಿತ್ಯದ ಕೆಲಸಗಳಲ್ಲಿ ಬಲಗೈ ಬಳಸುತ್ತಿದ್ದಾರೆ.

Latest Videos

ಮತ್ತೊಂದೆಡೆ ಯಾವೆಲ್ಲಾ ಮಕ್ಕಳು ಬಾಟಲ್ ಹಾಲು ಕುಡಿದ ಮಕ್ಕಳಲ್ಲಿ ಹೆಚ್ಚಿನವರು ಎಡಗೈ ಬಳಕೆಮಾಡುತ್ತಿದ್ದಾರೆ ಎನ್ನಲಾಗಿದೆ.

ಇದಕ್ಕೇನು ಕಾರಣವಾಗಿರಬಹುದೆಂದು ವಿವರಿಸಿರುವ ಅಧ್ಯಯನ ತಂಡ, ಕೈಯನ್ನು ನಿಯಂತ್ರಿಸುವ ಮೆದುಳಿನ ಭಾಗ, ಮೆದುಳಿನ ಒಂದು ಭಾಗದಲ್ಲಿರುತ್ತದೆ. ಆದರೆ ಎದೆ ಹಾಲುಣಿಸುವಾಗ ಮೆದುಳಿನ ಈ ಭಾಗ ಕಾರ್ಯ ನಿರ್ವಹಿಸಲಾರಂಭಿಸುತ್ತದೆ. ಹೀಗಾಗಿ ಮಕ್ಕಳು ಕೈ ಬಳಕೆ ಆರಂಭಿಸುತ್ತಾರೆ ಎಂದಿದ್ದಾರೆ.

ಒಟ್ಟು 62,129 ತಾಯಿ, ಮಕ್ಕಳ ಜೋಡಿಯನ್ನು ಪರೀಕ್ಷಿಸಿ ಈ ಅಧ್ಯಯನ ನಡೆಸಲಾಗಿದೆ.

click me!