ಸಕ್ಕರೆ ಕಾಯಿಲೆಗೂ ಸೆಕ್ಸಿಗೂ ಆಗೋದಿಲ್ವೆ: ಇದಕ್ಕೆ ವೈದ್ಯರು ಏನಂತಾರೆ?

By Suvarna Web DeskFirst Published Dec 26, 2016, 5:14 AM IST
Highlights

ಸಕ್ಕರೆ ಕಾಯಿಲೆಗೂ ಸೆಕ್ಸಿಗೂ ಆಗೋದಿಲ್ವೆ: ಇದಕ್ಕೆ ವೈದ್ಯರು ಏನಂತಾರೆ?

1) ಸಕ್ಕರೆ ಕಾಯಿಲೆಗೂ ಸೆಕ್ಸಿಗೂ ಆಗೋದಿಲ್ವೆ: ಇದಕ್ಕೆ ವೈದ್ಯರು ಏನಂತಾರೆ?

ಊರು ಬೇಡ ಹೆಸರು ಬೇಡ
ಊ: ಮಧುಮೇಹ ಇರುವವರಿಗೆ ಕ್ರಮೇಣ ನರಗಳು ದುರ್ಬಲವಾಗುತ್ತವೆ. ರಕ್ತನಾಳಗಳ ಗೋಡೆಗಳು ಗಟ್ಟಿಯಾಗುತ್ತವೆ. ರಕ್ತ ಹೆಪ್ಪುಗಟ್ಟಿಲಿಂಗಕ್ಕೆ ನರಸಂವೇದನೆ ಹಾಗೂ ರಕ್ತದ ಹರಿವುಗಳು ಕಡಿಮೆಯಾಗಿ ಉದ್ರೇಕ ಕಡಿಮೆಯಾಗುತ್ತದೆ. ಆದರೆ, ಇದು ಕೆಲವು ವರ್ಷಗಳ ಬಳಿಕ ಇಷ್ಟುಚಿಕ್ಕ ವಯಸ್ಸಿನಲ್ಲಿ ಹಾಗೂ ಆರಂಭದಲ್ಲಿ ಆಗಲಾರದು. ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿದ್ದರೆ ಅಷ್ಟುತೊಂದರೆಯಾಗಲಾರದು. ಇಷ್ಟಾದರೂ ಲೈಂಗಿಕ ಆಸಕ್ತಿಯೇನೂ ಕುಗ್ಗುವುದಿಲ್ಲ. ನೀವು ಪ್ರಾಯಶಃ ಲಿಂಗೋದ್ರೇಕದ ಕಡೆಗೆ ಮಾತ್ರ ಗಮನವಿಡುತ್ತಿದ್ದೀರಿ. ಹಾಗೆ ಮಾಡದೆ, ಸಮಗ್ರವಾಗಿ ರತಿಯಾಟಗಳಲ್ಲಿ ಹೆಚ್ಚು ಹೊತ್ತು ತೊಡಗಿ ನಂತರ ಸಂಭೋಗಿಸಿ. ಯಾವುದೂ ಬಲವಂತದಿಂದಾಗುವುದಿಲ್ಲ. ಭೋಜನದಲ್ಲಿ ಆಸಕ್ತಿ ಬರಬೇಕೆಂದರೆ, ಭೋಜನ ರುಚಿಯಾಗಿ ಚೆನ್ನಾಗಿರಬೇಕು. ಹಾಗೆಯೇ ನೀವು ರತಿಕ್ರೀಡೆಯನ್ನು ಚೆನ್ನಾಗಿ ರೂಪಿಸಿಕೊಳ್ಳಿ. ಸ್ಪರ್ಶ, ಮಾತು, ಆಲಿಂಗನ, ಚುಂಬನ, ತುಂಟಾಟಗಳು ಎಲ್ಲವೂ ಮುಖ್ಯ. ಇನ್ನು ಧೂಮಪಾನ, ಮದ್ಯಪಾನಗಳಂಥ ದುರಭ್ಯಾಸಗಳಿದ್ದರೆ ದೂರಮಾಡಿ. ಇನ್ನೂ ಕಷ್ಟವಾದರೆ ಲಿಂಗದ ಸ್ಕ್ಯಾನಿಂಗ್‌ ಮಾಡಿಸಿ.

(ಡಾ. ಬಿ.ಆರ್. ಸುಹಾಸ್, ಲೈಂಗಿಕ ತಜ್ಞ- ಕೃಪೆ: ಕನ್ನಡ ಪ್ರಭ)

click me!