ಮೂಲವ್ಯಾಧಿ ಶಮನಕ್ಕೆ ಯಾವ ಆಹಾರ ಉತ್ತಮ?

By Suvarna Web DeskFirst Published Dec 24, 2016, 1:53 PM IST
Highlights

ಇದರಮುಖ್ಯಕಾರಣಅಗ್ನಿಮಾಂದ್ಯ, ಅಜೀರ್ಣ, ಮಲಬದ್ಧತೆ, ಆಹಾರದಅಸಮ್ಯಕ, ಅನಿಯಮಿತಆಹಾರಸೇವನೆ, ಬೊಜ್ಜು, ಹೆಚ್ಚುಕುಳಿತುಕೆಲಸ (ಅವ್ಯಾಯಮ). ಮಲಬದ್ದತೆಯಿಂದಸಮಸ್ಯೆಶುರುವಾಗಿನೋವು, ಮಲವಿಸರ್ಜನೆವೇಳೆರಕ್ತಸ್ರಾವಕಾಣಿಸಿಕೊಳ್ಳು­ವುದು.

1) ನಾನು 45 ವರ್ಷದ ಮಹಿಳೆ. ಮೂಲವ್ಯಾಧಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಕೆಲವೊಮ್ಮೆ ಮಲವಿಸರ್ಜನೆಗೆ ತೀವ್ರ ಕಷ್ಟವಾಗುತ್ತದೆ. ಮೊದಲಿನಿಂದಲೂ ನಾನು ಆಯುರ್ವೇದ ಔಷಧಗಳನ್ನು ನಂಬಿರುವವಳು. ಆಯುರ್ವೇದದಲ್ಲಿ ಇದಕ್ಕೆ ಶಾಶ್ವತ ಪರಿಹಾರ ಇದೆಯೇ? ಯಾವ ಆಹಾರ ಕ್ರಮವನ್ನು ಅನುಸರಿಸಬೇಕು? ಯಾವ ಆಹಾರವನ್ನು ದೂರವಿಡಬೇಕು?
- ಹೆಸರು ಬೇಡ ಬೆಂಗಳೂರು

ಉ: ಮೂಲವ್ಯಾಧಿ ಎಂಬುದು ಗುದದ್ವಾರದಲ್ಲಿರುವ ರಕ್ತನಾಳಗಳ ಒತ್ತಡ ಉಂಟಾಗಿ ಅವು ಬಾತು ನೋವು/ ಸ್ರಾವವನ್ನು ಉಂಟುಮಾಡುವ ರೋಗ. ಇದರ ಮುಖ್ಯ ಕಾರಣ ಅಗ್ನಿಮಾಂದ್ಯ, ಅಜೀರ್ಣ, ಮಲಬದ್ಧತೆ, ಆಹಾರದ ಅಸಮ್ಯಕ, ಅನಿಯ ಮಿತ ಆಹಾರ ಸೇವನೆ, ಬೊಜ್ಜು, ಹೆಚ್ಚು ಕುಳಿತು ಕೆಲಸ (ಅವ್ಯಾಯಮ). ಮಲಬದ್ದತೆ ಯಿಂದ ಸಮಸ್ಯೆ ಶುರುವಾಗಿ ನೋವು, ಮಲ ವಿಸರ್ಜನೆ ವೇಳೆ ರಕ್ತ ಸ್ರಾವ ಕಾಣಿಸಿಕೊಳ್ಳು­ವುದು. ಆರ್ಯುವೇದದಲ್ಲಿ ಇದಕ್ಕೆ ಔಷಧಿ, ಆಹಾರ, ವಿಹಾರಗಳ ಮೂಲಕ ಸಂಪೂರ್ಣ ಪರಿಹಾರ ಸೂಚಿಸಲಾಗಿದೆ.
ಆಯುರ್‌ ಔಷಧ
ಮೂಲವ್ಯಾಧಿ ಮೊಳಕೆಗಳು ಗಾತ್ರದಲ್ಲಿ ದೊಡ್ಡದಾಗಿದ್ದರೆ ಕ್ಷಾರ ಸೂತ್ರದ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ
ತ್ರಿಫಲ ಚೂರ್ಣ, ಅವಿಪತ್ತಿಕರ ಚೂರ್ಣ ಉತ್ತಮ
ಹರಳೆಣ್ಣೆಯನ್ನು ಬಿಸಿ ಹಾಲಿನ ಜೊತೆಗೆ ಸೇವಿಸಿದರೆ ಮೂಲವ್ಯಾಧಿಯನ್ನು ದೂರವಿಡಬಹುದು
ಅಮೃತ ಬಳ್ಳಿಯ ಕಷಾಯ ಉತ್ತಮ ಪೇಯ
ಆಹಾರ ಹೇಗಿರಬೇಕು?
ಪಥ್ಯ: ಹೆಚ್ಚು ನೀರನ್ನು ಸೇವಿಸುವುದು, ಮಜ್ಜಿಗೆ, ಬೆಣ್ಣೆ, ಅಂಜೂರ ಹಣ್ಣು, ಪಪ್ಪಾಯ, ನೇರಳೆ ಹಣ್ಣು, ಹೆಚ್ಚು ನಾರಿನ ಅಂಶ ಇರುವ ಆಹಾರ, ಸಬ್ಬಸಿಗೆ ಸೊಪ್ಪು, ಮೆಂತ್ಯೆ ಸೊಪ್ಪು, ಹಾಗಲ, ಸೋರೆಕಾಯಿ, ಹೀರೆಕಾಯಿ, ಪಡವಲ, ಮೂಲಂಗಿ, ಕರಿಬೇವು ಹೆಚ್ಚಾಗಿ ಸೇವಿಸಿ.
ಅಪಥ್ಯ: ಮಾಂಸ, ಮೊಟ್ಟೆ, ಮೀನು, ಆಲೂಗಡ್ಡೆ, ಬಟಾಣಿ, ಮೈದಾ ಪದಾರ್ಥ, ಜಂಕ್‌ ಆಹಾರ.
ವಿಹಾರ: ವ್ಯಾಯಾಮ, ಪ್ರಸನ್ನತೆ.

click me!