
1) ನನಗೆ 30 ವರುಷ. ನನ್ನ ಎಡಭಾಗದ ವೃಷಣ ಬಹಳ ಚಿಕ್ಕದಿದೆ. ಬಹುಶಃ ನಾನು ಬಿಗಿ ಪ್ಯಾಂಟ್ ಧರಿಸುವುದರಿಂದ ಹೀಗಾಗಿರಬಹುದೇನೋ. ಆದರೆ, ಯಾವುದೇ ನೋವಿಲ್ಲ. ವೈದ್ಯಕೀಯವಾಗಿ ಒಂದು ವೃಷಣ ಏಕೆ ಚಿಕ್ಕದಾಗುತ್ತದೆ? ಇದರಿಂದ ವೀರ್ಯೋತ್ಪಾದನೆಗೆ ಅಡ್ಡಿಯಾಗುವುದೇ? ನಾವು ಮಗುವಿಗೆ ಯೋಜನೆ ಮಾಡಿದ್ದೇವೆ. ಸಲಹೆ ನೀಡಿ.
-ಹೆಸರು ಬೇಡ, ಊರು ಬೇಡ
ಉ: ಸಾಮಾನ್ಯವಾಗಿ ಬಲವೃಷಣ ಸ್ವಲ್ಪ ಮೇಲಕ್ಕೆಳೆದಿರುವುದರಿಂದ ಅದು ಚಿಕ್ಕದಾಗಿ ಕಾಣುವುದೇ ಹೊರತು ಎಡದ್ದಲ್ಲ. ಆದ್ದರಿಂದ ಇನ್ನೊಮ್ಮೆ ಸರಿಯಾಗಿ ನೋಡಿಕೊಳ್ಳಿ. ಇನ್ನು ಚಳಿಗೆ ವೃಷಣಗಳ ಮೃದು ಮಾಂಸಖಂಡ ಸಂಕುಚಿತಗೊಂಡು ಅವು ಸ್ವಲ್ಪ ಚಿಕ್ಕಾದದಂತೆ ಕಾಣಬಹುದು. ಕೆಲವು ಕಾಯಿಲೆಗಳು ಹಾಗೂ ಔಷಧಿಗಳಿಂದ ವೃಷಣಗಳು ಚಿಕ್ಕದಾಗುತ್ತವೆಯಾದರೂ 30 ವರ್ಷದ ಆರೋಗ್ಯವಂತರಾದ ನಿಮಗೆ ಇದು ಅನ್ವಯಿಸುವುದಿಲ್ಲ. ಹಾಗೂ ನಿಮಗೆ ಸಂಶಯವಿದ್ದರೆ ಶಸ್ತ್ರವೈದ್ಯರ (ಸರ್ಜನ್) ಬಳಿ ಒಮ್ಮೆ ತೋರಿಸಿ. ಪರೀಕ್ಷಿಸದೆ ಏನೂ ಹೇಳಲಾಗದು. ಇನ್ನು ಮಗುವಿನ ವಿಷಯಕ್ಕೆ ಬಂದರೆ, ಮೊದಲು ಪ್ರಯತ್ನಿಸಿ. ಪ್ರಯತ್ನವಿಲ್ಲದಿದ್ದರೆ ಫಲ ಸಿಗದು. ಆಗದಿದ್ದರೆ ಪರೀಕ್ಷಿಸಿಕೊಳ್ಳಿ. ವಿನಾಕಾರಣ ನೀವು ನಿಮ್ಮನ್ನು ಅತಿಯಾಗಿ ಸಂಶಯಿಸಿಕೊಳ್ಳಬೇಡಿ.
(ಕೃಪೆ: ಕನ್ನಡ ಪ್ರಭ- ಡಾ. ಬಿ ಆರ್ ಸುಹಾಸ್, ಲೈಂಗಿಕ ತಜ್ಞ)
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.