
ಪ್ರೀತಿಯಲ್ಲಿ ಮೋಸ ಮಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಪ್ರತಿ ದಿನ ಇಂತಹ ಸುದ್ದಿ ವರದಿಯಾಗುತ್ತಿರುತ್ತದೆ. ಆದರೆ ಇಲ್ಲೊಬ್ಬ ಯುವಕ ತನಗೆ ಮೋಸ ಮಾಡಿದ ಪ್ರಿಯತಮೆಯ ಮೇಲೆ ಸೇಡು ತೀರಿಸಲು ಆಕೆಗೆ ನೀಡಿದ ಶಿಕ್ಷೆ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳುತ್ತೇವೆ. ಈತ ನೀಡಿದ ಶಿಕ್ಷೆ ನೋಡಿದರೆ ಯಾವೊಬ್ಬ ಯುವತಿಯೂ ಮೋಸ ಮಾಡುವ ಮುನ್ನ ಹಲವು ಬಾರಿ ಯೋಚಿಸುವುದರಲ್ಲಿ ಅನುಮಾನವಿಲ್ಲ.
ಈ ಘಟನೆ ಬ್ರೆಜಿಲ್'ನಲ್ಲಿ ನಡೆದಿದ್ದು, ಯುವಕ ತನಗೆ ಮೋಸ ಮಾಡಿದ ಪ್ರಿಯತಮೆಯ ನೀಳ ಕೂದಲನ್ನು ಎಲ್ಲರೆದುರು ಟ್ರಿಮರ್'ನಿಂದ ಕತ್ತರಿಸಿ ತಲೆಯನ್ನು ಬೋಳು ಮಾಡಿದ್ದಾನೆ. ಘಟನಾ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬ ಈ ದೃಶ್ಯಗಳನ್ನು ತನ್ನ ಮೊಬೈಲ್'ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿದಾಡುವಂತೆ ಮಾಡಿದ್ದಾನೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವತಿ ವಿರೋಧಿಸದೆ ಶಿಕ್ಷೆ ಅನುಭವಿಸುವುದನ್ನು ನೋಡಿದರೆ ಯುತಿಯದ್ದೇ ತಪ್ಪು ಎಂಬುವುದು ಖಚಿತವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.