ಓದಿದ್ದು SSLC, ಸೃಷ್ಟಿಸಿದ್ದು ಸ್ಪೆಷಲ್ ಬೈಕ್: ಹಳೆಯ ಬೈಕ್'ಗೆ ವಿನೂತನ ಸ್ಪರ್ಶ ನೀಡಿದ ಕಾರ್ಪೆಂಟರ್

By Suvarna Web DeskFirst Published Jan 31, 2017, 4:38 AM IST
Highlights

ಆತ ಇಂಜಿನಿಯರ್ ಅಲ್ಲ, ಮೆಕ್ಯಾನಿಕ್​ ಕೂಡ ಅಲ್ಲ. ಎಸ್.ಎಸ್.ಎಲ್.ಸಿ. ಓದಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾರೆ. ಈಗ ತಾವೇ ಒಂದು ಬೈಕ್ ತಯಾರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಹೆಸರಾಂತ ಕಂಪನಿಯ ಬೈಕ್'​​​ಗಳನ್ನು ನಾಚಿಸುಂತಹ, ಇಂದಿನ ಯುವಕರ  ಕ್ರೇಜ್'​ಗೆ ತಕ್ಕಂತೆ ತಯಾರಿಸಿರುವ ಈ ಸ್ಪೆಷಲ್ ಬೈಕ್ ಹೇಗಿದೆ ಅಂತಿರಾ? ಹಾಗಾದ್ರೆ ಈ ಸ್ಟೋರಿ ಓದಿ.

ಚಾಮರಾಜನಗರ(ಜ.31): ಆತ ಇಂಜಿನಿಯರ್ ಅಲ್ಲ, ಮೆಕ್ಯಾನಿಕ್​ ಕೂಡ ಅಲ್ಲ. ಎಸ್.ಎಸ್.ಎಲ್.ಸಿ. ಓದಿ ಕಾರ್ಪೆಂಟರ್ ಕೆಲಸ ಮಾಡುತ್ತಿದ್ದಾರೆ. ಈಗ ತಾವೇ ಒಂದು ಬೈಕ್ ತಯಾರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಹೆಸರಾಂತ ಕಂಪನಿಯ ಬೈಕ್'​​​ಗಳನ್ನು ನಾಚಿಸುಂತಹ, ಇಂದಿನ ಯುವಕರ  ಕ್ರೇಜ್'​ಗೆ ತಕ್ಕಂತೆ ತಯಾರಿಸಿರುವ ಈ ಸ್ಪೆಷಲ್ ಬೈಕ್ ಹೇಗಿದೆ ಅಂತಿರಾ? ಹಾಗಾದ್ರೆ ಈ ಸ್ಟೋರಿ ಓದಿ.

ಕಾರ್ಪೆಂಟರ್​ ತಯಾರಿಯ ವಿಶಿಷ್ಟ ಬೈಕ್

ಆತ ತಯಾರಿಸಿದ್ದು ಯಾವುದೋ ಹೆಸರಾಂತ ಕಂಪನಿಯ ಹೊಸ ಮಾಡೆಲ್ ಬೈಕ್ ಅಲ್ಲ. ಆದರೂ ದೊಡ್ಡ ದೊಡ್ಡ ಕಂಪನಿಗಳ ಬೈಕ್'​​ಗಳಿಗಿಂತ ಚೆನ್ನಾಗಿದೆ. ಯುವ ಪೀಳಿಗೆಯಲ್ಲಿ ಕ್ರೇಜ್ ಹುಟ್ಟಿಸುವಂತಿರುವ ಇದರ ಕತೃ ಸಾಮಾನ್ಯ ಕಾರ್ಪೆಂಟರ್ ಹೆಸರು ಪುರುಷೋತ್ತಮ್.

ಚಾಮರಾಜನಗರದ ಚನ್ನಿಪುರಮೋಳೆ ಹೊಸ ಬಡಾವಣೆ  ನಿವಾಸಿಯಾದ ಪುರುಷೋತ್ತಮ್ ಓದಿರುವುದು ಕೇವಲ SSLC. ವೃತ್ತಿಯಲ್ಲಿ ಕಾರ್ಪೆಂಟರ್. ಪ್ರವೃತ್ತಿ ಹೊಸತನದ ಶೋಧ. ಇದರ ಫಲವೇ ತಮ್ಮಲ್ಲಿದ್ದ ಹಳೆಯ ಮೋಟಾರ್ ಬೈಕ್ ಒಂದ್ರ ಇಂಜಿನ್ ಬಳಸಿ ಅಲ್ಲಿ-ಇಲ್ಲಿ ಬಿಡಿಭಾಗಗಳನ್ನ ತಂದಿದ್ದಾರೆ. ಹೀಗೆ ಸತತ ಆರು ತಿಂಗಳ ಕಾಲ ಕಿತ್ತು-ಜೋಡಿಸಿದ ಪರಿಣಾಮ ಹೊಸ ಬೈಕ್ ಒಂದನ್ನ ತಾವೇ ತಯಾರಿಸಿದ್ದಾರೆ.

ಇನ್ನು ಪುರುಷೋತ್ತಮ್ ಈ ಆವಿಷ್ಕಾರಕ್ಕೆ ಕುಟುಂಬ ಸದಸ್ಯರ ಸಂಪೂರ್ಣ ಸಹಕಾರ ಸಿಕ್ಕಿದೆ. ಸ್ಟೈಲಿಷ್​​ ಬೈಕ್​​ಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಆದರೆ, ಪುರುಷೋತ್ತಮ್ ಕಡಿಮೆ ಖರ್ಚಿನಲ್ಲಿ  ವಿನೂತನ ಬೈಕ್ ಆವಿಷ್ಕರಿಸಿ ಎಲ್ಲರನ್ನ ಹುಬ್ಬೇರುವಂತೆ ಮಾಡಿದ್ದಾರೆ.

 

click me!