
ಪ್ರೇತಾತ್ಮಗಳು ಕ್ಯಾಮಾರಾದಲ್ಲಿ ಸೆರೆಯಾದ ದೃಶ್ಯಗಳು ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲ ವೀಕ್ಷಕರು ಇದನ್ನು ನಂಬಿದರೆ ಮತ್ತೆ ಕೆಲವರು ಇದು ಮೂಢನಂಬಿಕೆ ಎನ್ನುತ್ತಾರೆ. ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ಪ್ರೇತಾತ್ಮಗಳಂತೆ ವೇಷ ತೊಟ್ಟು ಪ್ರಾಂಕ್ ವಿಡಿಯೋ ಮಾಡಿ ಜನರನ್ನು ಹೆದರಿಸಿ, ವಿಡಿಯೋ ಮಾಡುತ್ತಾರೆ.
ಸದ್ಯ ಪ್ರೇತಾತ್ಮದ ವಿಡಿಯೋವೊಂದು ವೈರಲ್ ಆಗಿದೆ. ನ್ಯೂಯಾರ್ಕ್'ನ ಎಲೆಕ್ಸ್ರಾನಿಕ್ಸ್ ಶಾಪ್'ನಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದ್ದು, ಇದರಲ್ಲಿ ಜನರನ್ನು ಬೆಚ್ಚಿ ಬೀಳಿಸಿದ ಪ್ರೇತಾತ್ಮ 2002ರಲ್ಲಿ ತೆರೆಕಂಡ 'ದ ರಿಂಗ್' ಹಾಗೂ 2005ರಲ್ಲಿ ತೆರೆಕಂಡ ಇದೇ ಸಿನಿಮಾದ ಮುಂದಿನ ಭಾಗ 'ದ ರಿಂಗ್ ಟು'ನಲ್ಲಿ ಕಂಡು ಬಂದ 'ಸಮಾರಾ' ಹೆಸರಿನ ಪ್ರೇತಾತ್ಮವನ್ನೇ ಇದು ಹೋಲುತ್ತದೆ. ಅಂದು ಆ ಸಿನಿಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಕೆಲವು ದಿನಗಳವರೆಗೆ ಸುಖವಾಗಿ ನಿದ್ರಿಸಿರಲಿಲ್ಲ, ಅಷ್ಟು ಭಯಾನಕವಾಗಿತ್ತು ಆ ಪ್ರೇತಾತ್ಮ. ಇಂಹ ಭಯಾನಕ ಆತ್ಮ ಎದುರಿಗೆ ಬಂದರೆ ಹೇಗಾಗಬೇಡ? ನಿಜಕ್ಕೂ ಹೃದಯವೇ ಬಾಯಿಗೆ ಬಂದಂತಿರುತ್ತದೆ.
ಆದರೆ ಈ ಶಾಪ್'ನಲ್ಲಿ ಕಂಡು ಬಂದ ಪ್ರತಾತ್ಮ ಮಾತ್ರ ನಿಜವಾದ ಆತ್ಮವಾಗಿರಲಿಲ್ಲ. ಬದಲಾಗಿ 'ದ ರಿಂಗ್' ಸಿನಿಮಾದ ಮುಂದಿನ ಭಾಗದ ಪ್ರಚಾರಕ್ಕಾಗಿ ಕಂಡುಕೊಂಡ ಉಪಾಯವಾಗಿದೆ. ಟಿವಿ ಖರೀದಿಸಲು ಬಂದ ಗ್ರಾಹಕರಿಗೆ ನೋಡಲೆಂದೇ ಈ ಸಿನಿಮಾದ ಜಾಹಿರಾತನ್ನು ಪ್ರಸಾರ ಮಾಡಿದ್ದು, ನೋಡ ನೋಡುತ್ತಿದ್ದಂತೆಯೇ ಒಂದು ಟಿವಿ ಮೂಲಕ ಪ್ರೇತಾತ್ಮದಂತೆ ವೇಷ ಧರಿಡಸಿದ ಯುವತಿಯೊಬ್ಬಳು ಟಿವಿಯಿಂದ ಹೊರ ಬರುತ್ತಾಳೆ. ಇದನ್ನು ಕಂಡ ಗ್ರಾಹಕರು ಭಯದಿಂದ ಕಾಲ್ಕಿತ್ತಿದ್ದಾರೆ.
ಇದು ಸಿನಿಮಾದ ಪ್ರಚಾರಕ್ಕಾಗಿ ಕಂಡುಕೊಂಡ ಹೊಸ ಉಪಾಯವಾಗಿದ್ದು, ಪ್ರೇಕ್ಷಕರು ಭಯದಿಂದ ಕಾಲ್ಕಿತ್ತಾಗ ಸಿನಿಮಾ ತಂಡದ ಸದಸ್ಯರು ಸಮಾಧಾನಪಡಿಸಿ ನಿಜ ವಿಚಾರವನ್ನು ತಿಳಿಸಿದ್ದಾರೆ. ಆದರೆ ಈ ಕುರಿತಾಗಿ ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ತಂಡದ ಸದಸ್ಯರಿಗೆ ಬಾಯಿಗೆ ಬಂದಂತೆ ಬಯ್ದಿದ್ದಾರೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಕೋಟ್ಯಾಂತರ ಜನರು ವೀಕ್ಷಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.