ಚೆಂದ ಇಲ್ಲದಿದ್ದರೇನು? ಚೆಂದ ಕಾಣಲು ಇಲ್ಲಿವೆ ಟಿಪ್ಸ್...

By Web DeskFirst Published Dec 25, 2018, 3:30 PM IST
Highlights

ಸೌಂದರ್ಯಕ್ಕೂ ಚೆಂದ ಕಾಣಿಸುವುದಕ್ಕೂ ನೇರ ಸಂಬಂಧವಿಲ್ಲ. ಉಡೋ ಉಡುಗೆ, ವ್ಯಕ್ತಿತ್ವ, ವಿಶ್ವಾಸ ತುಂಬಿ ತುಳುಕುತ್ತಿದ್ದರೆ, ಎಷ್ಟೇ ಕೆಟ್ಟದಾಗಿ ಇರುವವರೂ ಚೆಂದ ಕಾಣಬಹುದು. ಚೆಂದ ಕಾಣಿಸಿಕೊಳ್ಳಲು ಏನು ಮಾಡಬೇಕು?

ಸಿನಿಮಾ ತಾರೆಯರನ್ನೋ, ಬೆಂಜ್ ಕಾರಿನಿಂದ ಇಳಿದ ಸ್ಟೈಲಿಶ್ ಹುಡುಗನನ್ನೋ  ಅಥವಾ ಹೆಚ್ಚಿನ ಹುಡುಗಿಯರ ಕ್ರಶ್ ಆಗಿರುವ ಕಾಲೇಜಿನ ಆ ಹುಡುಗನನ್ನು ನೋಡಿದಾಗ ನಾವು ಯಾಕೆ ಹಾಗಿಲ್ಲ? ಸ್ಟೈಲಿಶ್ ಆಗಿ ನಾನ್ಯಾಕೆ ಕಾಣಿಸಬಾರದು ಎಂದೆನಿಸುತ್ತದೆ. ಸ್ಟೈಲಿಶ್ ಆಗಿ ಕಾಣೋದಿಕ್ಕೆ ನಾವು ಮತ್ತೊಬ್ಬರನ್ನು ಫಾಲೋ ಮಾಡೋದು ಬೇಡ. ಬದಲಾಗಿ ನಮ್ಮದೇ ವ್ಯಕ್ತಿತ್ವ ಬೆಳೆಯಿಸಿಕೊಳ್ಳಬೇಕು. ನಮಗೆ ನಾವೇ ಫ್ಯಾಷನ್ ಗುರು ಆಗೋದು ಮುಖ್ಯ. ಚೆಂದ ಕಾಣಲು ಇಲ್ಲಿವೆ ಟಿಪ್ಸ್..

  • ಮೊದಲು 'ನಾನು ಚೆನ್ನಾಗಿಲ್ಲ...' ಎನ್ನುವ ಭಾವನೆಯನ್ನು ತಲೆಯಿಂದ ತೆಗೆಯಬೇಕು. ಜೊತೆಗೆ ವಿಶ್ವಾಸ ನಿಮ್ಮಲ್ಲಿ ತುಂಬಿ ತುಳುಕುತ್ತಿರಬೇಕು. 
  • ಫ್ಯಾಷನ್ ಹೆಸರಿನಲ್ಲಿ ದೇಹಕ್ಕೆ ಹೊಂದದಂಥ ಡ್ರೆಸ್‌ಗಳನ್ನು ಧರಿಸಬೇಡಿ. ಇದರಿಂದ ಜೋಕರ್‌ನಂತೆ ಕಾಣಿಸಬಹುದು. 
  • ಜಿಮ್‌ಗೆ ಹೋಗಿ ಬಾಡಿ ಬಿಲ್ಡ್‌ ಮಾಡಿ. ಇದರಿಂದ ದೇಹ ಆಕರ್ಷಕವಾಗಿ ಕಾಣಿಸುತ್ತದೆ. 
  • ದೇಹ ತೆಳ್ಳಗಿದ್ದರೆ ಆ ಸಂದರ್ಭದಲ್ಲಿ ಲೇಯರಿಂಗ್ ಮಾಡಿಕೊಳ್ಳಿ. ಇದರಿಂದ ಫಿಟ್ ಅಗಿಯೂ ಕಾಣಿಸುವಿರಿ. ಜೊತೆಗೆ ಫ್ಯಾಷನೆಬಲ್ ಅಗಿಯು ಕಾಣಿಸುತ್ತೀರಿ. 
  • ಕೂದಲು ಬಿಳಿಯಾಗಿದ್ದರೆ ಕಲರಿಂಗ್ ಮಾಡಿಕೊಳ್ಳಿ. ಇದು ಫ್ಯಾಷನ್‌ನ ಒಂದು ಭಾಗ. 
  • ಫೇಷಿಯಲ್‌ ಇರೋದು ಹುಡುಗಿಯರಿಗೆ ಮಾತ್ರವಲ್ಲ. ತಿಂಗಳಿಗೆ ಒಂದೆರಡು ಬಾರಿ ಪುರುಷರು  ಫೇಷಿಯಲ್‌ ಮಾಡಿಸಿಕೊಳ್ಳಬೇಕು. ಇದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ. 
  • ಸೂಟ್ ಧರಿಸಿದರೆ, ಸೂಕ್ತ ಶೂ ಧರಿಸಿ. ಚಪ್ಪಲ್ ಧರಿಸಿದರೆ ಚೆನ್ನಾಗಿ ಕಾಣುವುದಿಲ್ಲ. 
  • ಸಂದರ್ಭಕ್ಕೆ ತಕ್ಕಂತೆ ಡ್ರೆಸ್ ಧರಿಸಿ. ಯಾವ ಸಂದರ್ಭದಲ್ಲಿ ಯಾವ ಉಡುಗೆ ಧರಿಸಬೇಕು ಎಂಬುದು ಗಮನದಲ್ಲಿರಲಿ.
  • ಸ್ಟೈಲಿಶ್ ಆಗಿ ಕಾಣುವಲ್ಲಿ ಕೂದಲು ಮುಖ್ಯ ಪಾತ್ರ ವಹಿಸುತ್ತದೆ. ಜನಪ್ರಿಯ ಹೇರ ಸ್ಟೈಲಿಶ್ ಬಳಿ ಹೋಗಿ ಮುಖಕ್ಕೆ ತಕ್ಕ ಹೇರ್ ಕಟ್ ಮಾಡಿಸಿಕೊಳ್ಳಿ. 
  • ಪರ್ಫ್ಯೂಮ್ , ಡಿಯೋಡ್ರೆಂಟ್‌, ಬಾಡಿ ಸ್ಪ್ರೇ ಏನೇ ಇರಲಿ ಅಗತ್ಯಕ್ಕಿಂತ ಹೆಚ್ಚು ಹಾಕಬೇಡಿ. 
  • ಬೈಕ್ ನಲ್ಲಿ ಓಡಾಡುವಿರಾದರೆ ಕೈಗೆ ಗ್ಲೌಸ್ ಹಾಗೂ ಗಾಗಲ್ಸ್ ಇರಲಿ.  
  • ಗಡ್ಡ-ಮೀಸೆಯನ್ನು ಚೆನ್ನಾಗಿ ಟ್ರಿಮ್‌ ಮಾಡಿ. ಅದಕ್ಕೂ ಮೊದಲು ಗಡ್ಡ ಮೀಸೆ ಇದ್ದರೆ ಚೆನ್ನಾಗಿರುತ್ತದೆಯೇ ಎಂದು ನೋಡಿಕೊಳ್ಳಿ. 
click me!