ತಾಯಿ ಕೊಲೆಗೆ ನ್ಯಾಯ ಪಡೆಯಲು 89 ಬಾರಿ ಭಾರತಕ್ಕೆ ಬಂದ ಉದ್ಯಮಿ!

By Suvarna NewsFirst Published Jan 13, 2020, 6:27 PM IST
Highlights

ಸಂಜಯ್ ಗೋಯಲ್ ಕಳೆದ 16 ವರ್ಷಗಳಲ್ಲಿ ಅವರು ಹೀಗೆ ಭಾರತಕ್ಕೆ ಬರುತ್ತಿರುವುದು 89ನೇ ಬಾರಿ. ತಾಯಿಯ ಕೊಲೆಗೆ ನ್ಯಾಯ ಪಡೆಯಲು ಕೆನಡಾದಿಂದ ಭಾರತಕ್ಕೆಅಲೆದಾಡಿದ್ದಾರೆ. ಸಿಕ್ಕೀತಾ ನ್ಯಾಯ?

ಸಂಜಯ್ ಗೋಯಲ್ ಅವರು ಕೆನಡಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ. ಸೋಮವಾರ ಅವರು ಭಾರತದ ಮುಂಬಯಿಯಲ್ಲಿ ನಡೆಯುವ ನ್ಯಾಯಾಲಯ ವಿಚಾರಣೆಯೊಂದಕ್ಕಾಗಿ ಕೆನಡಾದಿಂದ ಬಂದಿದ್ದಾರೆ. ಕಳೆದ 16 ವರ್ಷಗಳಲ್ಲಿ ಅವರು ಹೀಗೆ ಭಾರತಕ್ಕೆ ಬರುತ್ತಿರುವುದು 89ನೇ ಬಾರಿ. ಪ್ರತಿಸಲ ಬಂದಾಗಲೂ ಈ ಬಾರಿ ಪ್ರಕರಣ ಮುಗಿಯಲಿದೆ ಅಂದುಕೊಳ್ಳುತ್ತಾರೆ. ಆದರೆ ವಿಚಾರಣೆ ಮತ್ತೆ ಅಡ್ಜರ್ನ್ ಆಗುತ್ತದೆ. ಹೀಗೆ ನಡೆಯುತ್ತಲೇ ಇದೆ. ಭಾರತದ ನ್ಯಾಯಾಂಗ ಪ್ರಕ್ರಿಯೆಯ ವಿಳಂಬ ನಡೆಯ ಬಗ್ಗೆ ಸಂಜಯ್ಗೆ ಸಾಕಷ್ಟು ಸಿಟ್ಟಿದೆ. ಹಾಗೇ ನ್ಯಾಯ ಸಿಗಬಹುದು ಎಂಬ ವಿಶ್ವಾಸವೂ ಇದೆ.

ಸಂಜಯ್ ಅವರ ತಾಯಿ ಆಶಾ ಗೋಯಲ್ ಅವರು ಕೂಡ ಕೆನಡಾದಲ್ಲೇ ವಾಸವಿದ್ದ ಗೈನಕಾಲಜಿಸ್ಟ್. ಅವರದೊಂದು ಆಸ್ತಿ ಮುಂಬಯಿಯಲ್ಲಿದೆ. ಆಸ್ತಿಯ ಮೌಲ್ಯ ಸುಮಾರು 7 ಕೋಟಿ ರೂಪಾಯಿ. ಆಸ್ತಿಗೆ ಸಂಬಂಧಿಸಿ ಆಕೆಗೂ ಸಹೋದರರಿಗೂ ನಡುವೆ ವ್ಯಾಜ್ಯ ಹುಟ್ಟಿಕೊಂಡಿತ್ತು. ಅದನ್ನು ಪರಿಹರಿಸಲು ಅವರು ಭಾರತಕ್ಕೆ ಬಂದಿದ್ದರು. ಅಲ್ಲೇ ಕೊಲೆಯಾಗಿದ್ದರು. ಅದನ್ನು ಆತ್ಮಹತ್ಯೆ ಎಂದು ಮೊದಲು ನಂಬಿಸಲಾಗಿತ್ತು. ಆದರೆ ಆಕೆಯ ಮೈಮೇಲೆ ಚಾಕು ಇರಿತದ ಗಾಯಗಳು ಕಂಡುಬಂದುದರಿಂದ ಅನುಮಾನ ಹುಟ್ಟಿಕೊಂಡಿತ್ತು. ಪೊಲೀಸರು ಆಕೆಯ ಸಹೋದರರಾದ ಸುರೇಶ್ ಮತ್ತು ಸುಭಾಷ್ ಅಗರ್ವಾಲ್ ಬಗ್ಗೆ ಅನುಮಾನ ಪಟ್ಟಿದ್ದರು. ಕೇಸು ದಾಖಲಿಸಿಕೊಂಡು ತನಿಖೆ ನಡೆಸಲಾಯಿತು. ಈ ಮಧ್ಯೆ ಸುರೇಶ್ 2003ರಲ್ಲೇ ಸತ್ತಿದ್ದಾನೆ. ಸುಭಾಷ್ ಅಗರ್ವಾಲ್ ಕೆನಡಾದಲ್ಲಿ ನೆಲೆಸಿದ್ದಾನೆ. ಶಂಕಿತ ಕೊಲೆಗಾರರಲ್ಲಿ ಒಬ್ಬನನ್ನು ಬಂಧಿಸಲಾಗಿತ್ತು. ಆದರೆ ಸಾಕಷ್ಟು ಸಾಕ್ಷಿಗಳು ಸಿಕ್ಕದೆ ಕೇಸು ಕೈಬಿಡಲಾಗಿತ್ತು. ಸಂಜಯ್ ಗೋಯಲ್ ಇದನ್ನು ಪ್ರತಿಭಟಿಸಿದರು. ನಂತರ ಕೇಸು ಕ್ರೈಮ್ ಬ್ರಾಂಚ್ಗೆ ಹೋಯ್ತು. ಅಲ್ಲಿ ಶಂಕಿತ ಕೊಲೆಗಾರನನ್ನು ಬಂಧಿಸಿ, ಆತನಿಂದ ಸುಭಾಷ್ ಅಗರ್ವಾಲ್ ಸುಪಾರಿ ನೀಡಿದ ಸತ್ಯವನ್ನು ಹೊರಗೆಳೆಯಲಾಯಿತು.

ಆದರೆ ಕೆನಡಾ ಸರಕಾರ ಸುಭಾಷ್ನನ್ನು ಬಂಧಿಸಿ ವಿಚರಣೆಗೆ ಒಳಪಡಿಸಲು ಸಾಕಷ್ಟು ಸಹಕಾರ ನೀಡುತ್ತಿಲ್ಲ ಎನ್ನುತ್ತಾರೆ ಆಶಾ ಅವರ ಪುತ್ರ ಸಂಜಯ್. ಆತನ ಪತ್ತೆಗಾಗಿ ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿದೆ. ಆದರೆ ತಾನು ಭಾರತದ ಪೊಲೀಸರಿಂದ ವಿಚಾರಣೆಗೆ ಒಳಪಡಲಾರೆ, ತಾನು ಕೆನಡಾದ ಪ್ರಜೆ, ಇಲ್ಲೇ ಬೇಕಾದರೆ ವಿಚಾರಣೆಗೆ ಒಳಪಡುತ್ತೇನೆ ಎನ್ನುತ್ತಾನೆ ಆತ. ಕೆನಡಾ ಆ ಕುರಿತು ಆಸಕ್ತಿ ವಹಿಸುತ್ತಿಲ್ಲ. ಆಶಾ ಅವರ ಅಳಿಯ ನರೇಂದ್ರ ಗೋಯಲ್ ಕೂಡ ಶಂಕಿತರಲ್ಲೊಬ್ಬ. ಈತನೂ ಬಂಧನ, ವಿಚಾರಣೆಗೆ ಒಳಪಟ್ಟಿದ್ದಾನೆ. ಆದರೆ 2017ರಲ್ಲಿ ಅವನನ್ನು ರಿಲೀಸ್ ಮಾಡಲಾಗಿದೆ.

ವೃತ್ತಿ ಜೀವನಕ್ಕೆ ಬೇಸರ, ಚೆಕ್ಕಿ ಆತ್ಮಹತ್ಯೆ

ಮರ್ಡರ್ ಮಿಸ್ಟರಿ
ಆಶಾ ಗೋಯಲ್ ಪ್ರಕರಣ ಜಸ್ವೀಂದರ್ ಕೌರ್ ಸಿಧು ಎಂಬ ಇನ್ನೊಬ್ಬ ಮಹಿಳೆಯ ಕೊಲೆಯನ್ನು ಹೋಲುತ್ತದೆ. ಅಲ್ಲೂ ಆಸ್ತಿಗೆ ಸಂಬಂಧಿಸಿ ಕೊಲೆಯಾಗಿದೆ. ಆದರೆ ಅದು ಕೂಡ ಹಲವಾರು ವರ್ಷಗಳಿಂದ ತೀರ್ಮಾನ ಕಾಣದೇ ಕಾಣದೆ ಕೋರ್ಟಿನಲ್ಲಿ ಕೊಳೆಯುತ್ತಿದೆ. ಹೀಗೇ ಹಲವರು ಭಾರತೀಯ ಮೂಲದ, ಕೆನಡಾದಲ್ಲಿ ನೆಲೆಸಿರುವ NRIಗಳು ಕೊಲೆಯಾಗಿದ್ದಾರೆ. ಭಾರತದಲ್ಲಿರುವ ಅವರ ದೊಡ್ಡ ಮೊತ್ತದ ಆಸ್ತಿಗಳು ಈ ಕೊಲೆಗಳಿಗೆ ಮುಖ್ಯ ಕಾರಣ. ವಿವಾಹ ವ್ಯಾಜ್ಯ, ಹಳೆ ದ್ವೇಷವೂ ಉಂಟು. ಸಾಮಾನ್ಯವಾಗಿ ಸುಪಾರಿ ಕಿಲ್ಲರ್‌ಗಳು ಕೊಲೆ ಮಾಡುತ್ತಾರೆ. ಸುಪಾರಿ ಕೊಟ್ಟ ಶ್ರೀಮಂತರು ಬೇರೆ ದೇಶಗಳಲ್ಲಿದ್ದು ಪಾರಾಗುತ್ತಾರೆ. ಎನ್ನಾರೈಗಳ ಕೊಲೆಯನ್ನು ಹೇಗೆ ನಿರ್ವಹಿಸಬೇಕು ಎಂಬುದು ಸಮರ್ಪಕವಾಗಿ ಗೊತ್ತಿಲ್ಲದ ವ್ಯವಸ್ಥೆಯಲ್ಲಿ, ಅಪರಾಧಿಗಳು ನುಣುಚಿಕೊಳ್ಳುತ್ತಾರೆ. ಹಲವು ಪ್ರಕರಣಗಳಲ್ಲಿ, ಕಡಿಮೆ ಸಂಬಳ ಪಡೆಯುವ ಪೊಲೀಸ್ ಅಧಿಕಾರಿಗಳು ಕೂಡ ಡಾಲರ್ಹಳ ಆಸೆಗಾಗಿ ಕೊಲೆ ಮಾಡುತ್ತಾರೆ ಅಥವಾ ಕೊಲೆ ಪ್ರಕರಣಗಳನ್ನು ಮುಚ್ಚಿ ಹಾಕುತ್ತಾರೆ.

ಜೀವನ ಮುಗೀತು ಎನಿಸಿದರೆ ಒಮ್ಮೆ ಈ ಲೇಖನವನ್ನು ಓದಿ...

ಆಶಾ ಗೋಯಲ್ ಪ್ರಕರಣ ಕೂಡ ಇಂಥದೇ. ಸಂಜಯ್ ಗೋಯಲ್ ಇನ್ನೆಷ್ಟು ಕಾಲ ನ್ಯಾಯಕ್ಕಾಗಿ ಅಲೆದಾಡಬೇಕೋ ತಿಳಿಯದು.

click me!