ಮನೆ ಕೆಲಸವೇನಿದ್ರೂ ಪತ್ನಿಗೆ ಎಂಬ ಪತಿ ನೀವಾ? ಹಾಗಾದ್ರೆ ಇದನ್ನೊಮ್ಮೆ ಓದಿ..

By Suvarna News  |  First Published Jan 13, 2020, 6:21 PM IST

ಮನೆಗೆಲಸ ಏನಿದ್ದರೂ ಹೆಣ್ಣಿಗೆ ಸೀಮಿತ ಎಂಬ ಭಾವನೆಯಿದೆ. ಆದರೆ, ಹೊರಗೆ ದುಡಿದು ಕುಟುಂಬ ನಿರ್ವಹಣೆಗೆ ಪತಿಗೆ ಹೆಗಲು ನೀಡುವ ಪತ್ನಿಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಗಂಡಿನ ಕರ್ತವ್ಯ ಅಲ್ಲವೆ? ಮನೆಗೆಲಸಗಳನ್ನು ಪತಿ-ಪತ್ನಿ ಹಂಚಿಕೊಂಡು ಮಾಡುವುದರಿಂದ ದಾಂಪತ್ಯದಲ್ಲಿ ಸಾಮರಸ್ಯ ಹೆಚ್ಚುತ್ತದೆ.


ಆಕೆ ನೋಡಿ ಗಂಡನ ಕೈಯಲ್ಲಿ ಬಟ್ಟೆ ಒಣ ಹಾಕಿಸ್ತಾಳೆ, ಅವರ ಮನೆಯಲ್ಲಿ ಗಂಡನೇ ಅಡುಗೆ ಮಾಡೋದಂತೆ, ಕಸ ಎಸೆದು ಬರಲೂ ಗಂಡನೇ ಹೋಗ್ತಾನೆ....ಇಂಥ ಮಾತುಗಳು ಆಗಾಗ ನಿಮ್ಮ ಕಿವಿ ಮೇಲೆ ಬೀಳುತ್ತಿರುತ್ತವೆ. ಅದರಲ್ಲೂ
ಇಂಥ ಮಾತುಗಳನ್ನಾಡುವವರು ಹೆಂಗಸರೇ ಆಗಿರುತ್ತಾರೆ. ಇಂಥ ಮಾತುಗಳ ತಾತ್ಪಾರ್ಯವಿಷ್ಟೇ, ಈ ಎಲ್ಲ ಕೆಲಸಗಳನ್ನು ಹೆಣ್ಣೇ ಮಾಡಬೇಕು. ಒಂದು ವೇಳೆ ಗಂಡು ಈ ಕೆಲಸಗಳನ್ನು ಮಾಡಿದರೆ, ಆತನ ಹೆಂಡತಿ ತುಂಬಾ ಘಾಟಿ,
ಗಂಡನ ಹತ್ರನೇ ಎಲ್ಲ ಕೆಲಸಗಳನ್ನು ಮಾಡಿಸುತ್ತಾಳೆ, ಗಂಡನನ್ನು ಬುಗುರಿಯಂತೆ ಆಡಿಸುತ್ತಾಳೆ, ಅವನು ಅಮ್ಮೋರ್ ಗಂಡ.....ಹೀಗೆ ನಾನಾ ಪದಪುಂಜಗಳನ್ನು ಪೋಣಿಸುತ್ತಾರೆ. ನಿಮ್ಮ ಮನೆಯಲ್ಲೇ ಗಮನಿಸಿ ನೋಡಿ, ನಿಮಗೆ ಕೈ
ತುಂಬಾ ಕೆಲಸಗಳಿರುವಾಗ ಗಂಡನ ಬಳಿ ಮಗುವಿಗೆ ಊಟ ಮಾಡಿಸಲು ಹೇಳುತ್ತೀರಿ. ಅಲ್ಲೇ ಪಕ್ಕದಲ್ಲಿರುವ ಅತ್ತೆ ಅಥವಾ ಅಮ್ಮ ಆ ಕೂಡಲೇ ‘ಏನಮ್ಮಾ, ಗಂಡಸರಿಗೆ ಅದೆಲ್ಲ ತಿಳಿಯಲ್ಲ. ಅವರ ಹತ್ರ ಅಂಥ ಕೆಲಸಗಳನ್ನೆಲ್ಲ
ಹೇಳಬಾರದು. ನೀನೇ ಮಾಡಿಸು, ಹೋಗು’ ಎಂದು ನಿಮಗೇ ಆ ಕೆಲಸ ಹಚ್ಚಿಬಿಡುತ್ತಾರೆ. ಅಂದ್ರೆಮನೆಗೆಲಸ ಹೆಣ್ಣಿಗೆ ಮಾತ್ರ ಎಂಬ ಭಾವನೆ ಕುಟುಂಬ, ಸಮಾಜದಲ್ಲಿ ನೆಲೆ ನಿಂತು ಬಿಟ್ಟಿದೆ. ಆದರೆ, ಗಂಡ-ಹೆಂಡತಿ ಇಬ್ಬರೂ
ಹೊರಗೆ ದುಡಿದು ಸಂಸಾರ ಸಾಗಿಸಬೇಕಾದಂತಹ ಅನಿವಾರ್ಯತೆ ಇಂದು ನಗರ ಪ್ರದೇಶಗಳಲ್ಲಿದೆ. ಅಲ್ಲದೆ, ವಿಭಕ್ತ ಕುಟುಂಬವಿರುವ ಕಾರಣ ಗಂಡ-ಹೆಂಡತಿ ಪರಸ್ಪರ ಮನೆಗೆಲಸಗಳಲ್ಲಿ ನೆರವಾದರೆ ಮಾತ್ರ ದಾಂಪತ್ಯದಲ್ಲಿ
ಅನುರಾಗ ಅರಳಲು ಸಾಧ್ಯ. ಇಂದಿನ ದಾಂಪತ್ಯಕ್ಕೆ ನಂಬಿಕೆಯ ಜೊತೆಗೆ ಮನೆಗೆಲಸಗಳನ್ನು ಹಂಚಿಕೊಂಡು ಮಾಡುವುದು ಕೂಡ ಅಗತ್ಯ. 

ಸಂಗಾತಿಗೆ ಸಮಯ ನೀಡಲು ಸಾಧ್ಯವಾಗುತ್ತಿಲ್ಲವಾ? 

Tap to resize

Latest Videos

ಮನೆಗೆಲಸದಲ್ಲಿ ನೆರವಾಗಲು ಹಿಂಜರಿಕೆ ಏಕೆ?: ಪತ್ನಿ ಉದ್ಯೋಗಕ್ಕೆ ಹೋಗಿ ಪತಿಯ ಜವಾಬ್ದಾರಿಗಳಿಗೆ ಹೆಗಲು ನೀಡುತ್ತಾಳೆ ಎಂದಾದ ಮೇಲೆ ಮನೆಗೆಲಸದಲ್ಲಿ ಆಕೆಗೆ ಪತಿ ನೆರವು ನೀಡುವುದರಲ್ಲಿ ತಪ್ಪೇನಿದೆ? ಮನೆಗೆಲಸ ಮಾಡಿದರೆ ಬೇರೆಯವರು ಏನೆಂದುಕೊಳ್ಳುತ್ತಾರೋ ಎಂಬ ಭಾವನೆ ಬಹುತೇಕ ಗಂಡಂದಿರಲ್ಲಿರುತ್ತದೆ. ಈ ಕಾರಣಕ್ಕೇ ಹೆಚ್ಚಿನವರು ಪತ್ನಿ ಅದೆಷ್ಟೇ ಒದ್ದಾಟ ನಡೆಸುತ್ತಿದ್ದರೂ ಸುಮ್ಮನೆ ಟಿವಿ ಮುಂದೆಯೋ ಇಲ್ಲ ಮೊಬೈಲ್ ಹಿಡಿದೋ
ತನಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ಕುಳಿತಿರುತ್ತಾರೆ. ಆದರೆ, ನಿಮ್ಮ ಈ ವರ್ತನೆ ಪತ್ನಿಯ ಮನಸ್ಸಿನ ಮೇಲೆ ಎಂಥ ಪರಿಣಾಮವನ್ನುಂಟು ಮಾಡಬಲ್ಲದು ಎಂಬುದು ನಿಮಗೆ ಗೊತ್ತಾ? ಆಕೆಗೆ ನಿಮ್ಮ ಮೇಲೆ ಸಿಟ್ಟು
ಬರಬಹುದು, ಆಕೆಯ ಬಗ್ಗೆ ನಿಮಗೆ ಕಾಳಜಿಯಿಲ್ಲ ಎಂಬ ಭಾವನೆ ಹುಟ್ಟಬಹುದು. ಇಂಥ ಭಾವನೆಗಳು ದಾಂಪತ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ.

ಎಷ್ಟೆಲ್ಲ ಪ್ರಯೋಜನವಿದೆ: ಪತಿಯು ಮನೆಗೆಲಸಗಳಲ್ಲಿ ಪತ್ನಿಗೆ ನೆರವು ನೀಡುವುದರಿಂದ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಇದರಿಂದ ಸಂಬಂಧದಲ್ಲಿ ಏನೆಲ್ಲ ಬದಲಾವಣೆಗಳಾಗುತ್ತವೆ ಗೊತ್ತಾ?

1.ಪ್ರೀತಿ ಹೆಚ್ಚುತ್ತದೆ: ಗಂಡ ಮನೆಗೆಲಸಗಳಲ್ಲಿ ನೀಡುವ ನೆರವು ಪತ್ನಿಗೆ ಆತನೆಡೆಗಿನ ಪ್ರೀತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಗಂಡ ತನ್ನನ್ನು ಎಷ್ಟು ಪ್ರೀತಿಸುತ್ತಾನೆ, ಎಷ್ಟು ಕಾಳಜಿ ವಹಿಸುತ್ತಾನೆ ಎಂಬುದು ಆಕೆಗೆ
ಅರ್ಥವಾಗುತ್ತದೆ. ಇದರಿಂದ ಇಬ್ಬರೂ ಒಬ್ಬರನ್ನೊಬ್ಬರು ಇನ್ನಷ್ಟು ಚೆನ್ನಾಗಿ ಅರಿತುಕೊಳ್ಳಲು ಪ್ರಯತ್ನಿಸುತ್ತಾರೆ.

ಕನಸಿನಲ್ಲಿ ಹಳೇ ಪ್ರೇಮಿ ಕಾಡಲು ಕಾರಣವೇನು ಗೊತ್ತಾ?

2.ಬಾಂಧವ್ಯ ಗಟ್ಟಿಗೊಳ್ಳುತ್ತದೆ: ಗಂಡ ತನ್ನ ಕಷ್ಟಗಳಿಗೆ ಹೆಗಲು ನೀಡುತ್ತಾನೆ ಎಂಬ ವಿಶ್ವಾಸ ಹೆಂಡತಿಗೆ ಮೂಡುತ್ತದೆ. ಇದು ಆತನ ಕುರಿತು ಆಕೆಯ ನಂಬಿಕೆಗಳನ್ನು ಇನ್ನಷ್ಟು ಬಲಗೊಳಿಸುತ್ತವೆ. ಜೊತೆಗೆ ಪತಿ ತನ್ನ ಗುರಿ,
ಕನಸುಗಳಿಗೆ ಬೆನ್ನೆಲುಬಾಗಿ ನಿಲ್ಲುತ್ತಾನೆ ಎಂಬ ವಿಶ್ವಾಸವೂ ಮೂಡುತ್ತದೆ.

3.ತಪ್ಪು ತಿಳಿವಳಿಕೆ ತಗ್ಗುತ್ತದೆ: ಗಂಡನ ಕುರಿತು ಹೆಂಡತಿಗೆ ಅಥವಾ ಹೆಂಡತಿ ಕುರಿತು ಗಂಡನಿಗೆ ಒಂದಷ್ಟು ತಪ್ಪು ತಿಳಿವಳಿಕೆಗಳು ಇದ್ದೇಇರುತ್ತವೆ. ಕೆಲವೊಂದು ಸಂದರ್ಭ, ಘಟನೆಗಳಿಂದ ಈ ಭಾವನೆಗಳು ಮೂಡಿರಬಹುದು. ಆದರೆ,
ಅಡುಗೆ, ಬಟ್ಟೆ ಒಣಹಾಕುವುದು ಸೇರಿದಂತೆ ಕೆಲವೊಂದು ಕೆಲಸಗಳನ್ನು ಜೊತೆ ಜೊತೆಯಾಗಿ ಮಾಡುವಾಗ ಇಬ್ಬರ ನಡುವಿನ ಹೊಂದಾಣಿಕೆ ಹೆಚ್ಚುತ್ತದೆ. ಇದರಿಂದ ಇಬ್ಬರ ನಡುವಿನ ತಪ್ಪು ತಿಳಿವಳಿಕೆಗಳು ದೂರವಾಗುವ
ಸಾಧ್ಯತೆಯಿರುತ್ತದೆ. 

ಈ ಅಭ್ಯಾಸಗಳು ನಿಮಗಿದ್ರೆ ಸೆಕ್ಸ್‌ ಲೈಫ್‌ ಹಾಳಾಗೋದು ಗ್ಯಾರಂಟಿ!

4.ಭಾವನೆಗಳನ್ನು ಹಂಚಿಕೊಳ್ಳಲು ಸಮಯ: ಇಬ್ಬರು ಹಂಚಿಕೊಂಡು ಮಾಡುವುದರಿಂದ ಕೆಲಸಗಳು ಬೇಗ ಮುಗಿದು ಹೋಗುತ್ತವೆ. ಉಳಿದ ಸಮಯದಲ್ಲಿ ಇಬ್ಬರು ಜೊತೆಯಾಗಿ ಕುಳಿತು ಹರಟುವುದು, ಟಿವಿ ನೋಡುವುದು ಸೇರಿದಂತೆ
ಮನಸ್ಸಿಗೆ ರಿಲಾಕ್ಸ್ ನೀಡುವ ಕಾರ್ಯದಲ್ಲಿ ನಿರತರಾಗಬಹುದು. ಬೇರೆ ಬೇರೆ ವಿಷಯಗಳ ಕುರಿತು ಮಾತನಾಡಲು, ಭಾವನೆಗಳನ್ನು ಹಂಚಿಕೊಳ್ಳಲು ಸಮಯ ಸಿಗುತ್ತದೆ.

5.ಪರಸ್ಪರ ಗೌರವದ ಭಾವನೆ: ಇದರಿಂದ ಇಬ್ಬರ ನಡುವೆ ಪರಸ್ಪರ ಪ್ರೀತಿ, ಬಾಂಧವ್ಯ ಹೆಚ್ಚುವ ಜೊತೆಗೆ ಗೌರವ ಭಾವನೆ ಕೂಡ ಮೂಡುತ್ತದೆ. ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಗೌರವಿಸಲು ಪ್ರಾರಂಭಿಸುತ್ತಾರೆ. 

click me!