
ಬೆಂಗಳೂರು (ಡಿ.11): ಪ್ರಯಾಣ ಮಾಡಲು ಜಗತ್ತಿನಲ್ಲಿ ಒಂದಕ್ಕಿಂತ ಒಂದು ಸ್ಥಳಗಳಿವೆ. ಟ್ರಾವೆಲ್ ನಿರ್ಧರಿಸಿದವರಿಗೆ ಜೀವನ ಮುಗಿದರೂ ಸ್ಥಳಗಳ ಕೊರತೆ ಇರುವುದಿಲ್ಲ ಎನ್ನುತ್ತಾರೆ. ಆದರೆ ವಿಶ್ವದ ಅತಿ ಚಿಕ್ಕ ಪಟ್ಟಣದ ಬಗ್ಗೆ ನಿಮಗೆ ತಿಳಿದಿದೆಯೇ? ಇದು ಕೇವಲ 50 ಜನರಷ್ಟೇ ವಾಸಿಸುವ ಪಟ್ಟಣ. ಈ ಪಟ್ಟಣ ಇರೋದು ಕ್ರೊವೇಷಿಯಾ ದೇಶದಲ್ಲಿ ಹುಮ್ ಎಂಬ ಈ ಪಟ್ಟಣ ಎಷ್ಟು ಸುಂದರವೋ ಅಷ್ಟೇ ನಿರ್ಜನವೂ ಹೌದು. ಇಲ್ಲಿ ವಾಸಿಸುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ.
ವಿಶ್ವದ ಅತಿ ಚಿಕ್ಕ ಪಟ್ಟಣದ ಬಗ್ಗೆ ತಿಳಿಯಿರಿ: ಕ್ರೊಯೇಷಿಯಾದ ಹುಮ್ ಪಟ್ಟಣದ ಉದ್ದ 100 ಮೀಟರ್ ಮತ್ತು ಅಗಲ 30 ಮೀಟರ್. ಇದು ಬಹುಶಃ ಭಾರತದ ಯಾವುದೇ ಬೀದಿಗಿಂತ ಇದು ಚಿಕ್ಕದಾಗಿದೆ. ಆದರೆ ಈ ಪುಟ್ಟ ಪಟ್ಟಣ ತನ್ನ ಸೌಂದರ್ಯ ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಕ್ರೊಯೇಷಿಯಾದ ಇಸ್ಟ್ರಿಯನ್ ಪೆನಿನ್ಸುಲಾದಲ್ಲಿರುವ ಈ ಪಟ್ಟಣದ ಇತಿಹಾಸ 11 ನೇ ಶತಮಾನಕ್ಕೆ ಸಂಬಂಧಿಸಿದೆ. ಈ ಪಟ್ಟಣವು ಪ್ರಾಚೀನ ಕಲ್ಲಿನ ಗೋಡೆಗಳಿಂದ ಆವೃತವಾಗಿದೆ. ವಿಶೇಷವೆಂದರೆ ಈ ಪಟ್ಟಣದ ರಸ್ತೆಗಳು ಕಾಂಕ್ರೀಟ್‌ನಿಂದಲ್ಲ, ಬದಲಾಗಿ ಕಲ್ಲುಗಳಿಂದ ಮಾಡಲ್ಪಟ್ಟಿವೆ. ಇಲ್ಲಿ ಹಲವಾರು ಕಟ್ಟಡಗಳಿವೆ. ಇವುಗಳಲ್ಲಿ ಪ್ರಮುಖವಾದವು ವೈಟ್ ಸ್ಟೋನ್ ಟವರ್ ಮತ್ತು ಸೇಂಟ್ ಜೆರೋಮ್ ಚರ್ಚ್.
Bengaluru: ಡಾಕ್ಟರ್‌ನ ಪಿಕಪ್-ಡ್ರಾಪ್ ಮಾಡೋಕೆ ಆಂಬ್ಯುಲೆನ್ಸ್ ಸೈರನ್ ಬಳಸ್ತಿದ್ದ ಡ್ರೈವರ್ ಮೇಲೆ ಕೇಸ್!
ಸೌಂದರ್ಯದ ಪ್ರತೀಕ ಹುಮ್: ವಿಶ್ವದ ಅತಿ ಚಿಕ್ಕ ಪಟ್ಟಣವಾದ ಹುಮ್‌ನಲ್ಲಿ ಒಂದು ಸ್ಮಶಾನ, ಎರಡು ಚರ್ಚುಗಳು, ಒಂದು ಸಣ್ಣ ರೆಸ್ಟೋರೆಂಟ್ (ಹುಮ್ಸ್ಕಾ ಕೊನೊಬಾ ಎಂದು ಕರೆಯಲ್ಪಡುತ್ತದೆ) ಮತ್ತು ಕೆಲವು ವಸತಿ ಕಟ್ಟಡಗಳಿವೆ. ವಿಶೇಷವೆಂದರೆ ಇಲ್ಲಿ ಮಿಸ್ಟ್ಲೆಟೊ ಎಂಬ ಸಸ್ಯವಿದೆ. ಇದನ್ನು ಮನೆಯಲ್ಲಿ ಬ್ರಾಂಡಿ ತಯಾರಿಸಲು ಬಳಸಲಾಗುತ್ತದೆ. ಇಲ್ಲಿ ಯಾವುದೇ ಪಾರ್ಟಿ ಮತ್ತು ಕಾರ್ಯಕ್ರಮ ಮನೆಯಲ್ಲಿ ತಯಾರಿಸಿದ ಬ್ರಾಂಡಿಯಿಲ್ಲದೆ ಅಪೂರ್ಣ. ಇಲ್ಲಿ ಟ್ರಫಲ್ ಖಾದ್ಯಗಳನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ನೀವು ಮಾಂಸಾಹಾರ ಮತ್ತು ಸಸ್ಯಾಹಾರದಿಂದ ಬೇರೆಯದನ್ನು ತಿನ್ನಲು ಬಯಸಿದರೆ ಇಲ್ಲಿಗೆ ಬರಬಹುದು. ನೀವು ಹುಮ್‌ಗೆ ಹೋಗಲು ಬಯಸಿದರೆ, ಬುಜೆಟ್ ಮತ್ತು ರೋವಿಂಜ್‌ನಂತಹ ನಗರಗಳಿಂದ ನೇರವಾಗಿ ತಲುಪಬಹುದು.
1 ಲೀಟರ್ ಕೆಮಿಕಲ್ ಬಳಸಿ 500 ಲೀಟರ್ ನಕಲಿ ಹಾಲು ಮಾಡುತ್ತಿದ್ದ ಉದ್ಯಮಿಯ ಬಂಧನ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.