ಕಾಂತಿಯುತ ತ್ವಚೆಯ ವರ್ಷದ ಚೆಕ್‌ಲಿಸ್ಟ್

By Web DeskFirst Published May 22, 2019, 4:42 PM IST
Highlights

ಹೊಳೆವ ಕಲೆರಹಿತ ತ್ವಚೆ ಎಲ್ಲರ ಕನಸು. ಆದರೆ ಇದು ಏಕಾಏಕಿ ಯಾರಿಗೂ ಒಲಿಯುವುದಿಲ್ಲ. ನಿಮ್ಮ ತ್ವಚೆಗಾಗಿ ನೀವಿಷ್ಟು ಸಮಯ ಹಾಗೂ ಆರೈಕೆ ಮೀಸಲಿಟ್ಟರೆ, ನಿಧಾನವಾಗಿ ಫಲಿತಾಂಶ ಮುಖದಲ್ಲಿ ಪ್ರತಿಫಲಿಸತೊಡಗುತ್ತದೆ. 

ಗ್ಲೋಯಿಂಗ್ ಸ್ಕಿನ್‌ಗಾಗಿ ಒಂದಿಷ್ಟು ಶ್ರಮ ಹಾಗೂ ಆರೈಕೆ ನಿಮ್ಮ ಜೀವನಶೈಲಿಯ ಭಾಗವಾಗಬೇಕು. ಹಾಗಿದ್ದರೆ ಅದಕ್ಕಾಗಿ ಪ್ರತಿದಿನ, ವಾರಕ್ಕೊಮ್ಮೆ, ತಿಂಗಳಿಗೊಮ್ಮೆ, ವರ್ಷಕ್ಕೊಮ್ಮೆ ಏನೇನು ಮಾಡಬೇಕು? ಇಲ್ಲಿದೆ ನೋಡಿ ಚೆಕ್‌ಲಿಸ್ಟ್. 

ಪ್ರತಿದಿನ
- ಬೆಳಗ್ಗೆ ಹಾಗೂ ರಾತ್ರಿ ಮುಖ ತೊಳೆದು ಮಾಯಿಶ್ಚರೈಸ್ ಮಾಡಿ
- ಹೊರ ಹೋಗುವಾಗ 50+ ಎಸ್‌ಪಿಎಫ್‌ನ ಸನ್‌ಸ್ಕ್ರೀನ್ ಹಚ್ಚಿ
- ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ
- ಕನಿಷ್ಠ 8 ಗಂಟೆ ನಿದ್ರಿಸಿ
- ಡಿಟಾಕ್ಸ್ ಡ್ರಿಂಕ್ಸ್ ಕುಡಿಯಿರಿ
- ನಿಮ್ಮ ಮೊಬೈಲ್ ಫೋನ್ ಹಾಗೂ ಹೆಡ್‌ಫೋನ್‌ಗಳನ್ನು ಸ್ವಚ್ಛಗೊಳಿಸಿ

ತ್ವಚೆಯ ಆರೋಗ್ಯ ಸಂಬಂಧಿ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರಕ್ಕೊಮ್ಮೆ
- ನಿಮ್ಮ ದೇಹ ಹಾಗೂ ಮುಖಕ್ಕೆ ಸ್ಕ್ರಬ್ ಮಾಡಿ
- ಹೋಂಮೇಡ್ ಫೇಶಿಯಲ್ ಮಾಡಿಕೊಳ್ಳಿ
- ವಾರಕ್ಕೆ ಕನಿಷ್ಠ 3 ಗಂಟೆಗಳ ವ್ಯಾಯಾಮ
- ನಿಮ್ಮ ತಲೆದಿಂಬು ಕವರ್ ಬದಲಿಸಿ
- ತಲೆಗೆ ಚೆನ್ನಾಗಿ ಎಣ್ಣೆ ಮಸಾಜ್ ಮಾಡಿ
- ಆರೋಗ್ಯಯುತ ಚರ್ಮಕ್ಕೆ ಬೇಕಾದ ಹೆಲ್ದೀ ಆಹಾರ ಮಾತ್ರ ಸೇವಿಸಿ
- ಬಾಚಣಿಗೆ ಸ್ಚಚ್ಛಗೊಳಿಸಿ

ತಿಂಗಳಿಗೊಮ್ಮೆ
- ಸ್ಪಾ ಮಸಾಜ್ ಮಾಡಿಸಿ
- ಎಣ್ಣೆ ಸ್ನಾನ ಮಾಡಿ
- ಕೈಗೆ ಕೊಬ್ಬರಿ ಎಣ್ಣೆಯ ಮ್ಯಾನಿಕ್ಯೂರ್ ಮಾಡಿ
- ಐಬ್ರೋಸ್ ಮಾಡಿಸಿ
- ನಿಮ್ಮ ಮೇಕಪ್ ಬ್ರಶ್‌ಗಳನ್ನೆಲ್ಲ ತೊಳೆಯಿರಿ
- ಬ್ಲ್ಯಾಕ್ ಹೆಡ್ಸ್ ತೆಗೆದುಕೊಳ್ಳಿ
-  ಕೈಕಾಲು ವ್ಯಾಕ್ಸ್ ಮಾಡಿಕೊಳ್ಳಿ

3 ತಿಂಗಳಿಗೊಮ್ಮೆ
- ಕಾಲಕ್ಕೆ ಸರಿಯಾಗಿ ನಿಮ್ಮ ಸ್ಕಿನ್‌ಕೇರ್ ಉತ್ಪನ್ನಗಳನ್ನು ಬದಲಿಸಿ
- ಮೇಕಪ್ ಬ್ಯಾಗ್ ಸ್ವಚ್ಛಗೊಳಿಸಿ
- ಕೂದಲನ್ನು ಟ್ರಿಮ್ ಮಾಡಿಸಿ
- ಪೆಡಿಕ್ಯೂರ್ ಮಾಡಿಕೊಳ್ಳಿ
- ಪ್ರೊಫೆಶನಲ್ ಫೇಶಿಯಲ್ ಮಾಡಿಸಿ

ವರ್ಷಕ್ಕೊಮ್ಮೆ
- ಸ್ಕಿನ್ ಕ್ಯಾನ್ಸರ್‌ಗಾಗಿ ಫುಲ್ ಬಾಡಿ ಸ್ಕ್ಯಾನ್ ಮಾಡಿಸಿ
- ಒಂದು ದಿನವಿಡೀ ಸ್ಪಾದಲ್ಲಿ ಕಳೆಯಿರಿ ಅಥವಾ ಪಂಚಕರ್ಮ ಚಿಕಿತ್ಸೆ ಮಾಡಿಸಿ.

ಸ್ಕಿನ್ ಟ್ಯಾನ್ ಆಗಿದ್ದರೆ ಹೀಗ್ ಮಾಡಿ

click me!