
ಜನನಾಂಗದ ಬಗ್ಗೆ ಸತ್ಯವೆಂದೇ ನಂಬಿರುವ ಹಲವಾರು ಜನಪ್ರಿಯ ಸುಳ್ಳುಗಳಿವೆ. ಮಹಿಳೆಯರೇ, ಇಂಥ ಸುಳ್ಳಿನ ಗುಳ್ಳೆಗಳಿಗೆ ಸೂಜಿ ಚುಚ್ಚಿ, ನಿಮ್ಮನ್ನು ನೀವು ಎಜುಕೇಟ್ ಮಾಡಿಕೊಳ್ಳಿ.
ಸುಳ್ಳು 1: ಕೆಳಗಿನ ಆ ಸಂಪೂರ್ಣ ಜಾಗವನ್ನು ಜನನಾಂಗ ಎನ್ನುತ್ತಾರೆ.
ಸತ್ಯ: ಈ ವಿಷಯದಲ್ಲಿ ಶಿಕ್ಷಿತರೂ ಹಾಗೇ ನಂಬಿದ್ದಾರೆ. ಆದರೆ, ನಿಜವೆಂದರೆ ವೆಜೈನಾ ಎಂಬುದು ಮಹಿಳಾ ಜನನೇಂದ್ರಿಯದ ಒಂದು ಭಾಗವೇ ಹೊರತು ಜನನಾಂಗವೇ ಎಲ್ಲ ಅಲ್ಲ. ಹೊರಗಿನ ಭಾಗವನ್ನು ವಲ್ವಾ ಎಂದೂ ಒಳಗಿನ ಭಾಗವನ್ನು ಯೋನಿ ಎಂದೂ ಕರೆಯಲಾಗುತ್ತದೆ.
ಸುಳ್ಳು 2: ಗುಪ್ತಾಂಗವನ್ನು ಸದಾ ಸ್ವಚ್ಛಗೊಳಿಸುತ್ತಲೇ ಇರಬೇಕು.
ಸತ್ಯ: ಮಾರುಕಟ್ಟೆಯ ಹಲವು ಉತ್ಪನ್ನಗಳು ವೆಜೈನಾವನ್ನು ಸಂಪೂರ್ಣ ಸ್ವಚ್ಛಗೊಳಿಸುವ ಭರವಸೆ ನೀಡುತ್ತಾವಾದರೂ ಅವುಗಳಾವುವೂ ನಿಮಗೆ ಬೇಡ. ಜನನಾಂಗವು ತನ್ನನ್ನು ತಾನು ಸ್ವಚ್ಛಗೊಳಿಸಿಕೊಳ್ಳಲು ಶಕ್ತವಾಗಿದ್ದು, ಅದಕ್ಕೆ ಕ್ಲೀನ್ ಮಾಡಲು ಹೊರಗಿನ ಯಾವ ಸಹಾಯವೂ ಬೇಡ. ಇನ್ಫೆಕ್ಷನ್ ಹಾಗೂ ಕೆಟ್ಟ ಬ್ಯಾಕ್ಟೀರಿಯಾಗಳನ್ನು ದೂರವಿಡಲು ಜನನಾಂಗದಲ್ಲಿ ಅದರದ್ದೇ ಆದ ವ್ಯವಸ್ಥೆ ಇದ್ದು, ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಮಾತ್ರ ತನ್ನಲ್ಲಿ ಬಿಟ್ಟುಕೊಳ್ಳುತ್ತದೆ. ನಿಜವೆಂದರೆ, ಜನನಾಂಗ ಸ್ವಚ್ಛಗೊಳಿಸುವುದಾಗಿ ಹೇಳುವ ಉತ್ಪನ್ನಗಳು ವೆಜೈನಾದ ಪಿಎಚ್ ಬ್ಯಾಲೆನ್ಸ್ ಹಾಳು ಮಾಡಿ ಮತ್ತಷ್ಟು ಕೆಟ್ಟದ್ದನ್ನೇ ಮಾಡುತ್ತವೆ.
ಸುಳ್ಳು 3: ಮಗು ಜನಿಸಿದ ಬಳಿಕ ಜನನಾಂಗ ಶಾಶ್ವತವಾಗಿ ಅಗಲವಾಗಿಬಿಡುತ್ತದೆ.
ಸತ್ಯ: ಮಗುವಾದ ಬಳಿಕ ಅಲ್ಲಿ ಟೈಟ್‌ನೆಸ್ ಕಳೆದುಕೊಳ್ಳುವ ಭಯ ಹಲವು ಮಹಿಳೆಯರನ್ನು ಗುಟ್ಟಾಗಿ ಕಾಡುತ್ತಲೇ ಇರುತ್ತದೆ. ಆದರೆ ಕೆಲವೇ ತಿಂಗಳಲ್ಲಿ ಯೋನಿಯು ಮುಂಚಿನಂತಾಗುತ್ತದೆ. ಪೆಲ್ವಿಕ್ ಫ್ಲೋರ್ ಎಕ್ಸಸೈಸ್ ಮಾಡಿದಲ್ಲಿ ಬಹಳ ಬೇಗ ಯೋನಿಗೆ ಟೈಟ್‌ನೆಸ್ ಬರುತ್ತದೆ.
ಹೆಣ್ಣಿನ ಪಾವಿತ್ರ್ಯತೆ ಯೋನಿಯಲ್ಲಿಲ್ಲ
ಸುಳ್ಳು 4: ಆರೋಗ್ಯಯುತ ಯೋನಿಯು ವಾಸನೆ ಬರುವುದಿಲ್ಲ
ಸತ್ಯ: ಜನನೇಂದ್ರಿಯದ ಎಲ್ಲ ಅಂಗಗಳೂ ಸ್ವಲ್ಪ ವಾಸನೆ ಹೊಂದಿರುತ್ತವೆ. ಆದರೆ, ಯೋನಿಯು ಹಾರ್ಮೋನ್ ವ್ಯತ್ಯಾಸದಿಂದಾಗಿ ತಿಂಗಳಲ್ಲಿ ಕೆಲ ದಿನಗಳಲ್ಲಿ, ಪ್ರೆಗ್ನನ್ಸಿ ಸಂದರ್ಭದಲ್ಲಿ ಹಾಗೂ ಸೆಕ್ಸ್ ಬಳಿಕ ಹೆಚ್ಚಿನ ವಾಸನೆ ಬರಬಹುದು. ಅಲ್ಲದೆ, ಆ ಭಾಗದಲ್ಲಿ ಬೆವರಿನ ಗ್ರಂಥಿಗಳು ಹೆಚ್ಚಿದ್ದು, ಬೆವರ ವಾಸನೆಯೂ ಇದಕ್ಕೆ ಸೇರಿಕೊಳ್ಳಬಹುದು. ಆದರೆ ಇವು ಯಾವುದೂ ಅಸಹಜವಲ್ಲ, ಅನಾರೋಗ್ಯದ ಲಕ್ಷಣವಲ್ಲ.
ಸುಳ್ಳು 5: ಸಣ್ಣ ಗಾತ್ರದ ಹುಡುಗಿಯರಿಗೆ ವೆಜೈನಾ ಹೆಚ್ಚು ಟೈಟ್ ಇರುತ್ತದೆ.
ಸತ್ಯ: ಯುವತಿಯ ಎತ್ತರ, ದಪ್ಪ, ಅಗಲ ಯಾವುವೂ ಆಕೆಯ ವೆಜೈನಾದ ಗಾತ್ರವನ್ನಾಗಲೀ, ಟೈಟ್‌ನೆಸ್ಸನ್ನಾಗಲಿ ಹೇಳಲಾರವು. ಕೆಲವೊಮ್ಮೆ ಸಣ್ಣ ವಯಸ್ಸಿನ ಹುಡುಗಿಯರಿಗೆ ಬಿಗಿಯಾದ ಯೋನಿ ಇರುತ್ತದೆ ಎಂದು ನಂಬಲಾಗುತ್ತದೆ. ಇದೂ ನಿಜವಲ್ಲ. ಯೋನಿಯು ಸಿಕ್ಕಾಪಟ್ಟೆ ಎಲಾಸ್ಟಿಕ್ ಆಗಿದ್ದು, ಮಗು ಹೆರುವ ಹಾಗೂ ಸೆಕ್ಸ್‌ನ ಸಂದರ್ಭದಲ್ಲಿ ಶೇ.200ರಷ್ಟು ಹಿಗ್ಗಬಲ್ಲದು.
ಮಹಿಳಾ ಸಂಬಂಧಿ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಸುಳ್ಳು 6: ಎಲ್ಲ ವೆಜೈನಲ್ ಡಿಸ್ಚಾರ್ಜ್ ಬಗ್ಗೆಯೂ ನೀವು ಚಿಂತಿಸಬೇಕು.
ಸತ್ಯ: ಎಲ್ಲ ರೀತಿಯ ಡಿಸ್ಚಾರ್ಜ್‌ಗಳೂ ಕೆಟ್ಟದ್ದೆಂದು ನೀವು ಕೇಳಿರಬಹುದು. ಅದು ನಿಜವಲ್ಲ. ಕೆಲವೊಂದು ಡಿಸ್ಚಾರ್ಜ್‌ಗಳು ಸಂಪೂರ್ಣ ಆರೋಗ್ಯವಂತಿಕೆಯ ಲಕ್ಷಣವಾಗಿದ್ದು, ಒಳ್ಳೆಯ ಅಗತ್ಯವಿರುವ ಬ್ಯಾಕ್ಟೀರಿಯಾ ಹೊಂದಿರುತ್ತದೆ. ಇದು ಯೋನಿಯನ್ನು ಇನ್ಫೆಕ್ಷನ್‌ಮುಕ್ತಗೊಳಿಸಲೆಂದೇ ಡಿಸ್ಚಾರ್ಜ್ ಆಗುತ್ತದೆ. ಇದು ಸಾಮಾನ್ಯವಾಗಿ ಬಿಳಿಯಾಗಿದ್ದು, ವಾಸನೆರಹಿತವಾಗಿರುತ್ತದೆ. ಆದರೆ, ಕೆಲವೊಮ್ಮೆ ಈ ಡಿಸ್ಚಾರ್ಜ್ ವಾಸನೆ ಹೊಂದಿದ್ದು ನಾರ್ಮಲ್ ಅಲ್ಲ ಎನಿಸಿದರೆ ವೈದ್ಯರನ್ನು ಕಾಣಬೇಕು.
ಕನ್ಯತ್ವ ಪ್ರೂವ್ ಮಾಡ್ಲಿಕ್ಕೂ ಬಂದಿದೆ ಮಾತ್ರೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.