ಮನೇಲೇ ಮಾಡಿ ನೋಡಿ ಸಿಂಪಲ್ಲಾಗೊಂದು ವೆಜ್ ಕಟ್ಲೇಟ್

By Suvarna NewsFirst Published Jan 18, 2020, 7:27 PM IST
Highlights

ಇದು ಅರ್ಧಗಂಟೆಯಲ್ಲಿ ತಯಾರಿಸಬಹುದಾದ ವೆಜ್ ಕಟ್ಲೇಟ್. ಸಂಜೆಯ ಟೀ ಜೊತೆಗೆ ಮೆಲ್ಲಲು ಮಜಾ ಇರುತ್ತೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಇಷ್ಟಪಡುವ ಸ್ನಾಕ್ಸ್ ಇದು.

ವೆಜ್ ಕಟ್ಲೇಟ್ ತಿಂದು ಗೊತ್ತಿಲ್ಲದವರು ಕಡಿಮೆ. ಆದರೆ ಮಾಡೋದು ಅಂದರೆ ತಲೆನೋವು ಅಂದಕೊಳ್ಳುವವರೇ ಜಾಸ್ತಿ. ಇದನ್ನು ಮಾಡಲಿಕ್ಕೆ ಹೆಚ್ಚು ಟೈಮ್ ಬೇಕು, ಮಾಡೋದು ಕಷ್ಟ. ಬೇಕಾದ ಪದಾರ್ಥಕ್ಕೆ ಅಂಗಡಿ ಅಂಗಡಿ ಅಲೀಬೇಕು ಅಂತೆಲ್ಲ ಕಂಪ್ಲೇಂಟ್ ಗಳು. ಆದರೆ ಇಲ್ಲಿ ಹೇಳ್ತಿರೋದು ಬಹಳ ಕಡಿಮೆ ಅಂದರೆ ಅರ್ಧ ಗಂಟೆ ಟೈಮ್ ನಲ್ಲಿ ಮಾಡಿ ಮುಗಿಸೋ ಕಟ್ಲೇಟ್ ಬಗ್ಗೆ. ಇದನ್ನು ಸಂಜೆಯ ಚಹಾದ ಜೊತೆಗೂ ತಿನ್ನಬಹುದು. ಮನೇಲಿ ಪಾರ್ಟಿ, ಫಂಕ್ಷನ್ ಇದ್ದಾಗಲೂ ಮಾಡ್ಕೊಳ್ಳಬಹುದು. ಮಕ್ಕಳು, ದೊಡ್ಡವರು, ವಯಸ್ಸಾದೋರು.. ಹೀಗೆ ಎಲ್ಲರಿಗೂ ಇಷ್ಟವಾಗುವ ರೆಸಿಪಿ. ಇದರಲ್ಲಿ ತರಕಾರಿಗಳನ್ನು ಹೇರಳವಾಗಿ ಬಳಸಬಹುದು. ಬ್ರೊಕೋಲಿಯಿಂದ ಹಿಡಿದು ಸೊಪ್ಪು ತರಕಾರಿವರೆಗೆ ನಿಮ್ಮಿಷ್ಟದ ತರಕಾರಿ ಸೇರಿಸಬಹುದು. ಹಾಗಂತ ತೀರಾ ಬೆಂಡೆಕಾಯಿ, ತೊಂಡೆಕಾಯಿ ಥರದ ತರಕಾರಿ ಸೇರಿಸಿದ್ರೆ ಅದು ಕಟ್ಲೇಟ್ ಹೋಗಿ ಮತ್ತೇನೋ ಆಗಬಹುದು. ಕ್ಯಾರೆಟ್, ಬಟಾಣಿ, ಬೀನ್ಸ್, ಆಲೂಗಡ್ಡೆಯಂಥಾ ತರಕಾರಿಗಳಾದ್ರೆ ಓಕೆ. ನಿಮಗೆ ಬೇಕಾದ ಶೇಪ್ ನಲ್ಲೂ ಮಾಡಬಹುದು. ಸಾಮಾನ್ಯವಾಗಿ ತರಕಾರಿ ತಿನ್ನಲ್ಲ ಅನ್ನೋ ಮಕ್ಕಳಿಗೆ ಅವರು ಇಷ್ಟಪಡುವ ಶೇಪ್ ನಲ್ಲಿ ವೆಜ್ ಕಟ್ಲೇಟ್ ಮಾಡಿಕೊಟ್ಟರೆ ನೋ ಅನ್ನೋದೇ ಇಲ್ಲ.

ಡ್ರೈ ಕ್ಯಾಬೇಜ್‌ ಮಂಚೂರಿಯನ್‌ ಮನೆಯಲ್ಲೇ ಮಾಡಿ! ...
 

ಮಾಡಲು ಬೇಕಾಗುವ ಸಮಯ - ಅರ್ಧ ಗಂಟೆ

ಸಂದರ್ಭ - ಸಂಜೆ ಸ್ನಾಕ್ಸ್, ಪಾರ್ಟಿ

ಬೇಕಾಗುವ ಸಾಮಗ್ರಿಗಳೇನು?

- ಸಿಪ್ಪೆ ತೆಗೆದು ಕಟ್ ಮಾಡಿದ ಎರಡು ಆಲೂಗಡ್ಡೆ

- ಕ್ಯಾರೆಟ್, ಬೀನ್ಸ್, ಸ್ವೀಟ್ ಕಾರ್ನ್, ಬಟಾಣಿ, ಬೀಟ್ ರೂಟ್ (ಎಲ್ಲವೂ ಕಾಲು ಕಪ್)

- ಉಪ್ಪು

- ಬ್ರೆಡ್ ಪೌಡರ್ - ಕಾಲು ಕಪ್

- ಅರ್ಧ ಸ್ಪೂನ್ ಖಾರದ ಪುಡಿ

- ಕಾಲು ಸ್ಪೂನ್ ಜೀರಿಗೆ ಪುಡಿ

- ಕಾಲು ಸ್ಪೂನ್ ಗರಂ ಮಸಾಲಾ

- 1 ಸ್ಪೂನ್ ಜಿಂಜರ್ ಗಾರ್ಲಿಕ್ ಪೇಸ್ಟ್

- ಡ್ರೈ ಮ್ಯಾಂಗೋ ಪೌಡರ್ ಅಥವಾ ಅಮ್ಚೂರ್ ಅರ್ಧ ಸ್ಪೂನ್

- ಹೆಚ್ಚಿದ ಕೊತ್ತಂಬರಿ ಸೊಪ್ಪು

- 1 ಕಪ್ ಪುಡಿ ಮಾಡಿದ ಕಾರ್ನ್ ಫ್ಲೇಕ್

- ಎಣ್ಣೆ

- ಕಾರ್ನ್ ಫ್ಲೋರ್ ೩ ಸ್ಪೂನ್

- ೨ ಸ್ಪೂನ್ ಮೈದಾ

- ಸ್ವಲ್ಪ ಪೆಪ್ಪರ್ ಪೌಡರ್

- ನೀರು.

ಮನೆಯಲ್ಲೇ ಪ್ರೊಟೀನ್ ಬಾರ್‌ ಮಾಡಲು ಇಲ್ಲಿದೆ ಸಿಂಪಲ್ ರೆಸಿಪಿ!...

- ಮೊದಲು ಎಲ್ಲ ತರಕಾರಿಗಳನ್ನೂ ಉಪ್ಪು ಹಾಕಿ ಹಬೆಯಲ್ಲಿ ಚೆನ್ನಾಗಿ ಬೇಯಿಸಿ. (ನಾಲ್ಕೈದು ವಿಶಲ್ ಕೂಗಿಸಿ)

- ತರಕಾರಿಗಳನ್ನು ಚೆನ್ನಾಗಿ ಕಿವುಚಿ (ಮ್ಯಾಶ್ ಮಾಡಿ) ಮಿಕ್ಸ್ ಮಾಡಿ.

- ನೀರಲ್ಲದ್ದಿದ ಬ್ರೆಡ್ ಅಥವಾ ಬ್ರೆಡ್ ಪೌಡರ್ಅನ್ನು ಇದಕ್ಕೆ ಸೇರಿಸಿ.

- ಇದಕ್ಕೆ ಖಾರದ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ, ಅಮ್ಷೂರ್, ಜಿಂಜರ್ ಗಾರ್ಲಿಕ್ ಪೇಸ್ಟ್, ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ.

- ಚೆನ್ನಾಗಿ ಕೈಯಲ್ಲಿ ಕಲಸಿ.

- ಚಪಾತಿ ಹಿಟ್ಟಿನ ಹದಕ್ಕೆ ನಾದಿ.

- ಇನ್ನೊಂದು ಬೌಲ್ ಗೆ ಕಾರ್ನ್ ಫ್ಲೋರ್, ಮೈದಾ, ಪೆಪ್ಪರ್, ಉಪ್ಪು, ನೀರು ಸೇರಿಸಿ ಚೆನ್ನಾಗಿ ಕಲಸಿ. ತೆಳುವಾಗಿರಲಿ.

- ಈ ಹಿಟ್ಟಿನಲ್ಲಿ ಗಂಟುಗಳಾಗಬಾರದು.

- ಪುಡಿ ಮಾಡಿದ ಕಾರ್ನ್ ಫ್ಲೇಕ್ಅನ್ನು ಪ್ರತ್ಯೇಕ ಬೌಲ್ ಗೆ ಹಾಕಿ ಸೈಡ್ ನಲ್ಲಿಟ್ಟಿರಿ.

- ತರಕಾರಿ ಮಿಕ್ಸ್ ಅನ್ನು ನಿಮಗೆ ಬೇಕಾದ ಶೇಪ್ ಗೆ ಉಂಡೆ ಮಾಡಿ.

- ಇದನ್ನು ತೆಳುವಾದ ಮೈದಾ ಹಿಟ್ಟಿನ ಮಿಶ್ರಣದಲ್ಲಿ ಅದ್ದಿ ಕಾರ್ನ್ ಫ್ಲೇಕ್ ನಲ್ಲಿ ಮುಳುಗಿಸಿ ತೆಗೆಯಿರಿ.

- ಬಾಣಲೆಯನ್ನು ಸ್ಟೌ ಮೇಲಿಟ್ಟು ಎಣ್ಣೆ ಹಾಕಿ ಬಿಸಿ ಮಾಡಿ. ಬೆಂಕಿ ಮೀಡಿಯಂ ಫ್ಲೇಮ್ ನಲ್ಲಿರಲಿ.

- ಈ ಉಂಡೆಗಳನ್ನು ಕುದಿಯುವ ಎಣ್ಣೆಯಲ್ಲಿ ಹದವಾಗಿ ಹುರಿಯಿರಿ.

- ಬಂಗಾರದ ಬಣ್ಣ ಅಥವಾ ಕಂದು ಬಣ್ಣಕ್ಕೆ ಬರುವಾಗ ಎಣ್ಣೆಯಿಂದ ತೆಗೆಯಿರಿ.

- ಟಿಶ್ಯೂ ಪೇಪರ್ ಮೇಲೆ ಹಾಕಿ ಎಣ್ಣೆ ಹೀರಿಕೊಳ್ಳುವಂತೆ ಮಾಡಿ.

- ಈಗ ವೆಜ್ ಕಟ್ಲೇಟ್ ರೆಡಿ, ಇದನ್ನು ಟೆಮ್ಯಾಟೋ ಸಾಸ್ ಜೊತೆಗೆ ತಿನ್ನಬಹುದು.

click me!