ಚರಂಡಿ ನೀರಿನ ಬಿಯರ್‌ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್!

By Suvarna News  |  First Published Jan 18, 2020, 12:07 PM IST

ಎಲ್ಲರಿಗೂ ಒಂದು ಕಾಲ ಬರುತ್ತೆ ಎಂಬುದನ್ನು ಕೇಳಿದ್ದೇವೆ. ಈಗ ಚರಂಡಿ ನೀರಿಗೂ ಒಳ್ಳೆ ಕಾಲ ಬಂದಿದೆ ನೋಡಿ.ಸ್ವೀಡನ್‍ನಲ್ಲಿ ಶುದ್ಧೀಕರಿಸಿದ ಚರಂಡಿ ನೀರಿನಿಂದ ಸಿದ್ಧಪಡಿಸಿದ ಬಿಯರ್‍ಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿರುವ ಜೊತೆಗೆ ಸಖತ್ ಆಗಿ ಸೇಲ್ ಕೂಡ ಆಗುತ್ತಿದೆಯಂತೆ.


ಇಂದು ಹಣ ಕೊಟ್ಟು ನೀರು ಖರೀದಿಸುವ ಹಂತಕ್ಕೆ ನಾವು ಬಂದು ತಲುಪಿದ್ದೇವೆ. ಪರಿಣಾಮ ನಗರ ಪ್ರದೇಶಗಳಲ್ಲಿ ನೀರಿನ ಮರುಬಳಕೆಯತ್ತ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಅಪಾರ್ಟ್‍ಮೆಂಟ್‍ಗಳು, ಬೃಹತ್ ಕಟ್ಟಡಗಳು, ಕಂಪನಿಗಳಲ್ಲಿ ಸೀವೇಜ್ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್‍ಗಳನ್ನು ನಿರ್ಮಿಸಲಾಗುತ್ತಿದೆ. ಅಂದರೆ ಬಳಸಿದ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡುವುದು. ಆದರೆ, ಭಾರತ ಬಿಡಿ ಮುಂದುವರಿದ ರಾಷ್ಟ್ರಗಳಲ್ಲಿ ಕೂಡ ಈ ನೀರನ್ನು ನೇರವಾಗಿ ಕುಡಿಯಲು ಯಾರೂ ಒಪ್ಪುತ್ತಿಲ್ಲ.ಈ ನೀರು ಕುಡಿಯಲು ಯೋಗ್ಯ ಎಂದು ವೈಜ್ಞಾನಿಕವಾಗಿ ದೃಢಪಡಿಸಿದರೂ ಜನರ ಮನಸ್ಸಿನಲ್ಲಿ ಹಿಂಜರಿಕೆಯಂತೂ ಇದ್ದೇಇದೆ. ಈ ಹಿಂಜರಿಕೆಯನ್ನು ದೂರ ಮಾಡಲು ಇದೀಗ ಸ್ವೀಡನ್‍ನಲ್ಲಿ ವಿನೂತನ ಯೋಜನೆಯೊಂದನ್ನು ರೂಪಿಸಲಾಗಿದೆ.ಈ ಪ್ಲ್ಯಾನ್ ಏನು ಎಂಬುದನ್ನು ಕೇಳಿದ್ರೆ ನೀವು ಕೂಡ ಅಚ್ಚರಿಪಡುತ್ತೀರಿ.ಅಂದ ಹಾಗೇ ಶುದ್ಧೀಕರಿಸಿದ ಚರಂಡಿ ನೀರಿನಿಂದ ಬಿಯರ್ ಸಿದ್ಧಪಡಿಸಿ ಮಾರುವ ಕಾರ್ಯಕ್ಕೆ ಸ್ವೀಡನ್ ಮದ್ಯ ಕಂಪನಿಯೊಂದು ಮುಂದಾಗಿದೆ.ಇದನ್ನು ಓದಿ ಎಂಥ ಕಾಲ ಬಂತಪ್ಪ ಎಂದು ತಲೆ ಚಚ್ಚಿಕೊಳ್ಳಬೇಡಿ. ಈ ಬಿಯರ್‍ಗೆ ಜನ ಎಷ್ಟು ಫಿದಾ ಆಗಿದ್ದಾರೆ ಎಂದರೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ಜೊತೆಗೆ ಹಾಟ್ ಸೆಲ್ಲಿಂಗ್ ಬ್ರ್ಯಾಂಡ್ ಆಗಿ ಗುರುತಿಸಲ್ಪಟ್ಟಿದೆ. 

ಟೇಸ್ಟಿ ಆ್ಯಂಡ್ ಸ್ಪೈಸಿ ಚಿಕನ್ ಗೀ ರೋಸ್ಟ್ ರೆಸಿಪಿ!

Tap to resize

Latest Videos

undefined

ಇಂಥ ಐಡಿಯಾ ಹುಟ್ಟಿದ್ದು ಹೇಗೆ?: ಔಟ್ ಆಫ್ ದಿ ಬಾಕ್ಸ್ ಥಿಂಕಿಂಗ್ ಅಂದ್ರೆ ಏನು ಎನ್ನುವುದಕ್ಕೆ ಚರಂಡಿ ನೀರಿನಿಂದ ಬಿಯರ್ ಸಿದ್ಧಪಡಿಸಿರುವುದೇ ಸಾಕ್ಷಿ. ಅಂದ ಹಾಗೇ ಇಂಥ ವಿಚಿತ್ರ ಐಡಿಯಾ ಹೊಳೆದಾದರೂ ಯಾರಿಗೆ? ಇದಕ್ಕೆ ಉತ್ತರ ಐವಿಎಲ್ ಸ್ವೀಡಿಸ್ ಎನ್ವಾರನ್‍ಮೆಂಟಲ್ ರಿಸರ್ಚ್ ಇನ್ಸ್‍ಟಿಟ್ಯೂಟ್‍ನ ತಜ್ಞರಿಗೆ. ಹಾಗಂತ ಇವರೇ ಬಿಯರ್ ಸಿದ್ಧಪಡಿಸಿ ಮಾರ್ಕೆಟ್‍ಗೆ ಬಿಟ್ಟರು ಎಂದು ಭಾವಿಸಬೇಡಿ. ಈ ತಜ್ಞರು ಸ್ವೀಡನ್‍ನ ಜನಪ್ರಿಯ ಬಿಯರ್ ಕಂಪೆನಿ ಕಾಲ್ರ್ಸಬರ್ಗ್  ಹಾಗೂ ನ್ಯೂ ಕಾರ್ನೆಜಿ ಬ್ರಿವರಿ ಜೊತೆಗೆ ಕೈಜೋಡಿಸಿ ಇಂಥ ಸಾಹಸಕ್ಕೆ ಮುಂದಾಗಿದ್ದಾರೆ.

ಉದ್ದೇಶ ಸಿಂಪಲ್: ಸ್ವೀಡನ್‍ನ ನಗರವೊಂದರ ಚರಂಡಿ ನೀರನ್ನು ಶುದ್ಧೀಕರಿಸಿ ಅದರಿಂದ ಬಿಯರ್ ಸಿದ್ಧಪಡಿಸಿ ಮಾರ್ಕೆಟ್‍ಗೆ ಬಿಡುವ ಮೂಲಕ ಜನರ ತಲೆಯಲ್ಲಿ ಶುದ್ಧೀಕರಿಸಿದ ಚರಂಡಿ ನೀರನ್ನು ಕುಡಿಯುವ ಕುರಿತು ಇರುವ ಹಿಂಜರಿಕೆಯನ್ನು ದೂರ ಮಾಡಬೇಕು ಎಂಬುದು ಈ ಯೋಚನೆ ಹಿಂದಿನ ಉದ್ದೇಶ.ಇಂಥ ಒಂದು ವಿನೂತನ ಐಡಿಯಾ ಐವಿಎಲ್ ಸಂಶೋಧಕರಿಗೆ ಒಂದೂವರೆ ವರ್ಷದ ಹಿಂದೆಯೇ ಬಂದಿತ್ತಂತೆ. ‘ಶುದ್ಧೀಕರಿಸಿದ ಚರಂಡಿ ನೀರನ್ನು ಕುಡಿಯುವುದರಿಂದ ಯಾವುದೇ ತೊಂದರೆಯಿಲ್ಲ ಎನ್ನುವುದು ವೈಜ್ಞಾನಿಕವಾಗಿ ದೃಢಪಟ್ಟಿದ್ದರೂ ಜನರ ತಲೆಯಲ್ಲಿ ಆ ಕುರಿತು ಇರುವ ನಕಾರಾತ್ಮಕ ಭಾವನೆಯನ್ನು ಹೊಡೆದೋಡಿಸುವುದೇ ದೊಡ್ಡ ಸವಾಲಾಗಿತ್ತು’ ಎನ್ನುವುದು ಸಂಶೋಧಕರೊಬ್ಬರ ಅಭಿಪ್ರಾಯ.ಈ ಯೋಚನೆ ಹೊಳೆದ ಬಳಿಕ ಐವಿಎಲ್‍ನ ತಂಡವೊಂದು ನ್ಯೂ ಕಾರ್ನೆಜಿ ಬ್ರಿವರಿ ಕಂಪೆನಿಯ ಅಧಿಕಾರಿಗಳನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿತ್ತು.ಇದಾದ ಒಂದು ವಾರದಲ್ಲೇ ಕಾರ್ನೆರಿ ಬ್ರಿವರಿ ಕಂಪೆನಿ ಕಡೆಯಿಂದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿತು. ಐವಿಎಲ್ ತಂತ್ರಜ್ಞರು ಶುದ್ಧೀಕರಿಸಿದ ಚರಂಡಿ ನೀರನ್ನು ಪ್ರಯೋಗಾಲಯದಲ್ಲಿ ಅನೇಕ ಪರೀಕ್ಷೆಗೊಳಪಡಿಸಿ ಅದು ಕುಡಿಯಲು ಸುರಕ್ಷಿತ ಎಂಬುದನ್ನು ದೃಢಪಡಿಸಿದ ಬಳಿಕ ಕಾರ್ನೆರಿ ಬ್ರಿವರಿ ಕಂಪೆನಿ ಅದರಿಂದ ಬಿಯರ್ ಸಿದ್ಧಪಡಿಸಿತು.

ಕರ್ರಿ ಆ್ಯಂಡ್ ಕಬಾಬ್ ಹುಡುಗ ಕುನಾಲ್ ಅಡುಗೆ ಕತೆ

ಹಾಟ್ ಸೇಲ್: ಸ್ವೀಡನ್‍ನಲ್ಲಿ ಮೊಟ್ಟ ಮೊದಲ ಬಾರಿಗೆ ಶುದ್ಧೀಕರಿಸಿದ ಚರಂಡಿ ನೀರಿನಿಂದ ಸಿದ್ಧಗೊಂಡ ಬಿಯರ್ ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದೆ ತಡ ಜನರು ಮುಗಿಬಿದ್ದು ಅದನ್ನು ಖರೀದಿಸಿದರು.ಶಾಪ್‍ಗಳಲ್ಲಿ ಸ್ಟಾಕ್ ಖಾಲಿಯಾದ ಪರಿಣಾಮ ಎರಡು ವಾರಗಳಲ್ಲಿ ಮತ್ತೆ ಇದನ್ನು ಮಾರುಕಟ್ಟೆಗೆ ಬಿಡಲಾಯಿತು.ಆಗಲೂ ಕೂಡ ಜನ ಮುಗಿಬಿದ್ದು ಖರೀದಿಸಿರುವುದು ಬಿಯರ್ ಟೆಸ್ಟ್ ಮದ್ಯಪ್ರಿಯರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ ಎಂಬುದಕ್ಕೆ ಸಾಕ್ಷಿ.

ಇಂದು ಎಲ್ಲ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚುತ್ತಿದೆ.ಇಂಥ ಸಂದರ್ಭದಲ್ಲಿ ನಾವೀನ್ಯ ಹಾಗೂ ವಿಶಿಷ್ಟ ಯೋಚನೆಗಳಿದ್ದರೆ ಮಾತ್ರ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂಬುದಕ್ಕೆ ಚರಂಡಿ ನೀರಿನಿಂದ ಸಿದ್ಧಪಡಿಸಿದ ಬಿಯರ್ ಹಾಗೂ ಅದಕ್ಕೆ ಸಿಕ್ಕ ಬೇಡಿಕೆಯೇ ನಿದರ್ಶನ.ಇಂದಿನ ಜನರು ಹೊಸತನ ಬಯಸುತ್ತಾರೆ,ಹಾಗಾಗಿ ವಿನೂತನ ಯೋಚನೆ ಹಾಗೂ ಪ್ರಯತ್ನಗಳಿಗೆ ಫಲ ಸಿಕ್ಕುವುದಂತೂ ಖಚಿತ ಬಿಡಿ. 

click me!