ಗಿನ್ನೀಸ್ ದಾಖಲೆಗಾಗಿ ಕೇರಳದಲ್ಲಿ 6.5 ಕಿ.ಮೀ ಉದ್ದದ ಕೇಕ್!

By Suvarna News  |  First Published Jan 16, 2020, 4:27 PM IST

ಕೇರಳದ ತ್ರಿಸ್ಸೂರಿನಲ್ಲಿ ಬರೋಬ್ಬರಿ 6.5 ಕಿ.ಮೀ ಉದ್ದದ ಕೇಕ್| ಒಟ್ಟು 1,500 ಬಾಣಸಿಗರು ಹಾಗೂ ಕೇಕ್ ಪರಿಣಿತರಿಂದ ವಿಶಿಷ್ಟ ದಾಖಲೆ| 12 ಸಾವಿರ ಕಿಲೋ ಸಕ್ಕರೆ ಹಾಗೂ ಹಿಟ್ಟನ್ನು ಬಳಿಸಿ ಕೇಕ್ ತಯಾರಿಸಿದ ಬಾಣಿಸಗರು| ಬೃಹತ್ ಕೇಕ್ ನಿರ್ಮಿಸಿದ ಕೇರಳದ ಬೇಕರ್ಸ್ ಅಸೋಸಿಯೇಶನ್| 27 ಸಾವಿರ ಕಿಲೋ ತೂಕ ಹಾಗೂ 6.5 ಕಿ.ಮೀ ಉದ್ದದ ಕೇಕ್| ಗಿನ್ನೀಸ್ ದಾಖಲೆ ಸೇರಲು ಸಜ್ಜಾದ ಬೃಹತ್ ವೆನಿಲಾ ಕೇಕ್|


ತ್ರಿಶೂರು(ಜ.16): ಕೇರಳದ ತ್ರಿಸ್ಸೂರಿನಲ್ಲಿ ನೂರಾರು ಬಾಣಸಿಗರು ಹಾಗೂ ಕೇಕ್ ಪರಿಣಿತರು ಸೇರಿ ಬರೋಬ್ಬರಿ 6.5 ಕಿ.ಮೀ ಉದ್ದದ ಕೇಕ್ ನಿರ್ಮಾಣ ಮಾಡಿದ್ದಾರೆ.

ಒಟ್ಟು 10 ಸೆ.ಮೀ ಅಗಲ ಹಾಗೂ ದಪ್ಪ ಇರುವ ಕೇಕ್ ಬರೋಬ್ಬರಿ 27 ಸಾವಿರ ಕಿಲೋ ತೂಕವಿದ್ದು, 6.5 ಕಿ.ಮೀ ಉದ್ದವಿದೆ ಎನ್ನಲಾಗಿದೆ.

Latest Videos

undefined

ಒಟ್ಟು 1,500 ಬಾಣಸಿಗರು ಸೇರಿ 12 ಸಾವಿರ ಕಿಲೋ ಸಕ್ಕರೆ ಹಾಗೂ ಹಿಟ್ಟನ್ನು ಬಳಿಸಿ ಕೇವಲ ನಾಲ್ಕು ತಾಸಿನಲ್ಲಿ ಈ ಕೇಕ್’ನ್ನು ತಯಾರಿಸಿದ್ದಾರೆ.

@ Thrissur Ramanilayam for Guinness book Record attempt for worlds longest cake as part of Thrissur Night Shopping festival Happy Days Organised by All Kerala Bakers Association All the best All support and Prayers .God bless all pic.twitter.com/4L21tNWAy3

— Manoj kammath (@Manojkammath1)

ಕೇರಳದ ಬೇಕರ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಈ ಬೃಹತ್ ಕೇಕ್’ನ್ನು ತಯಾರಿಸಲಾಗಿದ್ದು, ಗಿನ್ನೀಸ್ ದಾಖಲೆ ಸೇರುವ ವಿಶ್ವಾಸವಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನೌಶಾದ್ ಭರವಸೆ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ಬರ್ತಡೇ ಕೇಕ್ ಬೆಲೆ ಏನ್ ದುಬಾರಿ ರೀ!

ಈ ಹಿಂದೆ 2018ರಲ್ಲಿ ಚೀನಾದ ಜಿಕ್ಸಿ ಕೌಂಟಿಯಲ್ಲಿ 3.2 ಕಿ.ಮೀ ಉದ್ದದ ಕೇಕ್’ನ್ನು ತಯಾರಿಸಲಾಗಿತ್ತು. ಇದು ಗಿನ್ನೀಸ್ ದಾಖಲೆ ಸೇರಿದ್ದನ್ನು ಇಲ್ಲಿ ಸ್ಮರಿಸಬಹುದು.

click me!