
ಈ ಶಿವ ದೇವಾಲಯದ ಬಗ್ಗೆ ಅಷ್ಟಾಗಿ ಜನರಿಗೆ ಗೊತ್ತಿಲ್ಲ. ಆದರೆ, ಇಲ್ಲಿನ ವಿಶೇಷತೆ ಬಗ್ಗೆ ತಿಳಿದರೆ ಶಾಕ್ ಆಗೋದು ಖಂಡಿತಾ. ಈ ಶಿವದೇವಾಲಯ ಇರೋದು ಗುಜರಾತಿನ ಭಾವನಗರದಲ್ಲಿರುವ ಅರಬ್ಬೀ ಸಮುದ್ರದಲ್ಲಿ. ಅಲ್ಲಿ ಶಿವನನ್ನು ನಿಷ್ಕಲಂಗೇಶ್ವರ ಎಂದು ಕರೆಯುತ್ತಾರೆ.
ಈ ಶಿವನ ದರ್ಶನ ಪಡೆಯಲು ಸಮುದ್ರದಲ್ಲಿ ಸುಮಾರು 1.5 ಕಿ.ಮೀನಷ್ಟು ನಡೆಯಬೇಕು. ಈ ಐತಿಹಾಸಿಕ ತಾಣದಲ್ಲಿ ಪಾಂಡವರು ಶಿವನನ್ನು ಪೂಜಿಸಿದ್ದರೆನ್ನಲಾಗಿದೆ. ಮಹಾಭಾರತ ಯುದ್ಧದಲ್ಲಿ ಕೌರವರನ್ನು ಸದೆ ಬಡಿದ ನಂತರ ಪಾಂಡವರು ಇಲ್ಲಿ ಬಂದು ಶಿವನನ್ನು ಆರಾಧಿಸಿದ್ದರಂತೆ. ಇಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ ಅವರು ತಮ್ಮ ಪಾಪಗಳನ್ನು ಪರಿಹಾರ ಮಾಡೆಂದು ಶಿವನಲ್ಲಿ ಬೇಡಿಕೊಂಡ ದೈವಿಕ ತಾಣವಿದು.
ಮಾನವನಾಗಿ ಹುಟ್ಟಿದ್ಮೇಲೆ ಇವನ್ನು ನೋಡಿದಿದ್ದರೆ ಹೇಗೆ?
ದೇವಸ್ಥಾನಗಳನ್ನು ಬೆಟ್ಟ, ಗುಡ್ಡ, ನದಿ, ಜಲಪಾತದ ಬಳಿ ನಿರ್ಮಿಸುವುದೇ ಹೆಚ್ಚು. ಆದರೆ ಇಲ್ಲಿ ಸಮುದ್ರದ ಮಧ್ಯೆದಲ್ಲಿ ನಿರ್ಮಿಸಲಾಗಿದೆ. ನೀರಿನ ಅಬ್ಬರ ಜೋರಾಗಿದ್ದಾಗ ಇಲ್ಲಿನ ನಿಷ್ಕಳಂಕ ಮಹಾದೇವನ ದೇವಾಲಯ ಕಣ್ಣಿಗೇ ಕಾಣಿಸುವುದಿಲ್ಲ. ಅಲೆಗಳ ಏರಿಳಿತ ಕಡಿಮೆಯಾದಾಗ ಮಾತ್ರ ಶಿವ ದರ್ಶನ ನೀಡುತ್ತಾನೆ.
ಸಾಮಾನ್ಯ ದಿನಗಳಲ್ಲಿ ಶಿವ ಮಂದಿರ ನೀರಿನಲ್ಲಿ ಮುಳುಗಿರುತ್ತದೆ. ಅವಾಗ ಕೇವಲ ದೇವಾಲಯದ ಮೇಲಿರುವ ಬಾವುಟ ಮಾತ್ರ ಕಾಣಿಸುತ್ತದೆ. ದೇವಾಲಯದ ಕಂಬ 20 ಅಡಿ ಎತ್ತರವಿದೆ. ದಿನ ಪೂರ್ತಿ ನೀರು ಅಷ್ಟು ಎತ್ತರದಲ್ಲಿರುತ್ತದೆ. ಆದರೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಮುದ್ರ ದೇವ ಶಾಂತನಾಗಿ ಶಿವನನ್ನು ಕಾಣಲು ಬರುವ ಭಕ್ತರಿಗೆ ದಾರಿ ಮಾಡಿ ಕೊಡುತ್ತಾನೆ. ಈ ಸಂದರ್ಭದಲ್ಲಿ ನೀರು ಪೂರ್ತಿಯಾಗಿ ಹಿಂದೆ ಸರಿದಿರುತ್ತದೆ. ಇಂಥ ಕಾರಣಿಕ ಸ್ಥಳ ಮತ್ತೆಲ್ಲಿ ನೋಡಲು ಸಾಧ್ಯ?
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.