ಮಧುಮೇಹಕ್ಕೂ ರಾಗಿ ಎಂಬ ಸಿಂಪಲ್ ಮದ್ದು..

Published : Apr 12, 2019, 02:10 PM IST
ಮಧುಮೇಹಕ್ಕೂ ರಾಗಿ ಎಂಬ ಸಿಂಪಲ್ ಮದ್ದು..

ಸಾರಾಂಶ

ರಾಗಿ ತಿಂದವನಿಗೆ ರೋಗವಿಲ್ಲ. ಅದರಲ್ಲಿಯೂ ಆಧುನಿಕ ಯುಗದ ಕಾಯಿಲೆಗಳಿಗೆ ರಾಗಿ ಅತ್ಯುತ್ತಮ ಮದ್ದು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಇದರಲ್ಲಿ ಮಧುಮೇಹವನ್ನೂ ನಿಯಂತ್ರಿಸುವ ಗುಣವಿದೆ.

ರಾಗಿಯಿಂದ ನಾವು ಏನೆಲ್ಲಾ ಮಾಡಿ ಸೇವಿಸುತ್ತೇವೆ ಅಲ್ವಾ? ರಾಗಿ ಮುದ್ದೆ, ಮಣ್ಣಿ, ಅಂಬಲಿ, ದೋಸೆ.. ಇತ್ಯಾದಿ. ಈ ಪುಟಾಣಿ ಧಾನ್ಯದಲ್ಲಿ ದೇಹದ ಆರೋಗ್ಯವನ್ನು ಕಾಪಾಡುವ ಎಲ್ಲಾ ಶಕ್ತಿಯೂ ಇದೆ. ಪ್ರತಿ ದಿನ ಇದನ್ನು ಆಹಾರದಲ್ಲಿ ಬಳಸಿದರೆ ಹತ್ತು ಹಲವು ಅನಾರೋಗ್ಯಕ್ಕೆ ಮದ್ದಾಗಬಲ್ಲದು....

  • ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರಿಗೆ ರಾಗಿ ಉತ್ತಮ ಆಹಾರ. ಇದು ಅರೋಗ್ಯ ವೃದ್ಧಿಸಿ ಅಸ್ತಮಾ ಬರದಂತೆ ತಡೆಗಟ್ಟುತ್ತದೆ. 
  • ದೇಹದ ಮೂಳೆಗಳು ಸ್ಟ್ರಾಂಗ್ ಆಗಿಸುತ್ತದೆ. ಇದರಲ್ಲಿರುವ  ಕ್ಯಾಲ್ಷಿಯಂ ಮತ್ತು ಮಿಟಮಿನ್ ಡಿ ಮಕ್ಕಳಿಗೆ ಹಾಗೂ ವೃದ್ಧರಿಗೆ ಅಗತ್ಯ ಪೋಷಕಾಂಶಗಳನ್ನು ನೀಡಿ  ದೇಹವನ್ನು ಗಟ್ಟಿಮುಟ್ಟಾಗಿಸುತ್ತದೆ. 
  • ರಾಗಿಯಲ್ಲಿ ಕ್ವೆರ್ಸೆಟಿನ್, ಸೆಲೆನಿಯಮ್ ಮತ್ತು ಪ್ಯಾಂಟೋಥೆನಿಕ್ ಆಮ್ಲದ ಅಂಶಗಳಿವೆ. ಇವು ದೇಹದಲ್ಲಿ ಕ್ಯಾನ್ಸರ್ ಕೋಶಗಳ ನಿವಾರಿಸುತ್ತದೆ. 
  • ಮಹಿಳೆಯರನ್ನು ಹೆಚ್ಚಾಗಿ ಕಾಡುವ ರಕ್ತಹೀನತೆ ಬಹಳ ಅಪಾಯಕಾರಿ ಹಾಗೂ ಮಾರಣಾಂತಿಕ ಸಮಸ್ಯೆ. ರಾಗಿಯಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಬೇಕಾದ ಹಿಮೋಗ್ಲೋಬಿನ್ ಅಂಶ ಹೆಚ್ಚಾಗಿದೆ. ಇದರಿಂದ ರಕ್ತಹೀನತೆಯನ್ನು ತಡೆಯಬಹುದು. 
  • ಪ್ರತಿ ದಿನ ರಾಗಿ ತಿಂದರೆ ಅದರಲ್ಲಿರುವ ಅಮೀನೊ ಏಸಿಡ್ ಟ್ರೈಪ್ಟೋಫನ್ ಹಸಿವನ್ನು ಕಡಿಮೆ ಮಾಡುತ್ತದೆ.

ಈ ಹಣ್ಣು ಮಧುಮೇಹಕ್ಕೂ ಮದ್ದು..

  • ಇದರಲ್ಲಿರುವ ಮೆಗ್ನೀಷಿಯಂ ಅಂಶ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಿ,  ಹೃದಯಾಘಾತ ಸಮಸ್ಯೆ ನಿವಾರಿಸುತ್ತದೆ. 
  • ರಾಗಿ ಆಹಾರ ಸೇವಿಸಿದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ ಹಾಗೂ ನೆಮ್ಮದಿ ಸಿಗುತ್ತದೆ. 
  • ರಾಗಿಯನ್ನು ಸೇವಿಸುವ ಜನರಲ್ಲಿ ಶೇ.30ರಷ್ಟು ಮಧುಮೇಹ  ಇಳಿಕೆ ಕಂಡುಬರುತ್ತದೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

25 ವರ್ಷಗಳಿಂದ ಹೊರಗಡೆ ಊಟವನ್ನೇ ಮಾಡಿಲ್ಲ... ಸಲ್ಮಾನ್ ಮಾತು ಕೇಳಿ ಬೆಚ್ಚಿಬಿದ್ದ ಬಾಲಿವುಡ್!
ಹೆಂಡತಿಯನ್ನ ಪ್ರೀತಿಸುವ ಗಂಡಂದಿರೂ ಅನೈತಿಕ ಸಂಬಂಧ ಇಟ್ಟುಕೊಳ್ಳಲು ಕಾರಣಗಳು ಇವೇ ನೋಡಿ!