ಲೈಂಗಿಕ ಕ್ರಿಯೆ ನಡೆಸಲು ಮುಹೂರ್ತ, ಕಾಲ ಎಲ್ಲ ನೋಡಬೇಕಾ?

By Suvarna NewsFirst Published Dec 9, 2018, 2:50 PM IST
Highlights

ಸೆಕ್ಸ್ ಬಗ್ಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ಪರಿಕಲ್ಪನೆ, ಕನಸುಗಳಿರುತ್ತವೆ. ಆದರೆ, ಅಂದುಕೊಂಡಂತೆ ಏನೂ ನಡೆಯದೇ ಹೋದರೆ ಜೋಡಿಗಳು ಅಪ್‌ಸೆಟ್ ಆಗೋದು ಸಹಜ. ಅಷ್ಟಕ್ಕೂ ಲೈಂಗಿಕ ಕ್ರಿಯೆಗೂ ಹೊತ್ತು, ಗೊತ್ತು ಬೇಕಾ?

ಸಿನಿಮಾ ನೋಡಿ, ಬುಕ್‌ ಓದಿ ರೊಮ್ಯಾಂಟಿಕ್ ಸೆಕ್ಸ್  ಲೈಫ್  ಬಗ್ಗೆ ಎಲ್ಲರೂ ತಮ್ಮದೇ ಆದ ಕಲ್ಪನಾಲೋಕದಲ್ಲಿ ವಿಹರಿಸುತ್ತಿರುತ್ತಾರೆ.  ಆದರೆ, ವಾಸ್ತವವೇ ಬೇರೆ. ಇದರಿಂದ ಕೆಲವರು ಅಪ್‌ಸೆಟ್ ಆಗುವುದೂ ಇದೆ. ಇನ್ನು ಕೆಲವರು ಥ್ರಿಲ್ ಅನುಭವಿಸುತ್ತಾರೆ. ಆದರೆ, ಲೈಂಕಿಗತೆ ವಿಷಯದಲ್ಲಿ ಪ್ಲ್ಯಾನ್‌ನಂತೆ ಆಗುವುದಿಲ್ಲ. ಆ ಕ್ಷಣದ ಭಾವನೆ, ಮೂಡ್ ಹಾಗೂ ಗಂಡು ಹೆಣ್ಣಿನ ಮಾನಸಿಕ ಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ.

ರೋಮ್ಯಾಂಟಿಕ್ ಮೂಡಿದ್ದರೆ ಮುಂದುವರಿಸುವುದೂ ಒಂದು ಕಲೆ. ಕೆಲವೊಮ್ಮೆ ಮನಸ್ಸಿನ ಒತ್ತಡ ಹೆಚ್ಚಿದ್ದರೆ, ಲೈಂಗಿಕ ಚಟುವಟಿಕೆ ಮೇಲೂ ಪರಿಣಾಮ ಬೀರುವುದಿದೆ. ತಮ್ಮ ಕಾರ್ಯವನ್ನು ಮುಂದೂಡಲಾಗುತ್ತದೆ. ಆದರೆ ಯಾವುದು ಸರಿ? ಯಾವುದು ತಪ್ಪು? 

ಜಿಪ್ ತೆಗೆದು ಸಲ್ವಾರ್ ಒಳಗೆ ಬಂದಿದ್ದ ಅನುರಾಗ್

ಸಹಜ ಲೈಂಗಿಕತೆ
ಬ್ಯೂಟಿಫುಲ್ ಆಗಿ ಕಾಣಿಸುವ ಸಂಗಾತಿ ಎದುರು ಬಂದಾಕ್ಷಣವೇ ಇಬ್ಬರಲ್ಲಿ, ಒಬ್ಬರು ಲೈಂಗಿಕವಾಗಿ ಪ್ರಚೋದನೆಗೆ ಒಳಗಾಗುತ್ತಾರೆ. ಮತ್ತೊಬ್ಬರನ್ನು ಮೂಡಿಗೆ ಬರಿಸಿ, ರೊಮ್ಯಾನ್ಸ್ ಮಾಡುವುದು ಸ್ಪಾಂಟೇನಿಯಸ್ ಲೈಂಗಿಕ ಕ್ರಿಯೆ. ದನ್ನು ಸ್ಪಾನ್‌ಟೇನಿಯ್ಸ್ ಸೆಕ್ಸ್ ಎನ್ನುತ್ತಾರೆ. ಇದು ಸಾಮಾನ್ಯವಾಗಿ ಎಲ್ಲ ಜೋಡಿಯ ವಿಷಯದಲ್ಲಿಯೂ ಆಗುವಂಥ ಪ್ರಕ್ರಿಯೆ. ಇಬ್ಬರೂ ಖುಷ್ ಖುಷಿಯಾಗಿರುವುದರಿಂದ ಸಹಜವಾಗಿಯೇ ಭಾವನೆಗಳು ಪೂರಕವಾಗಿದ್ದು, ಲೈಂಗಿಕತೆಗೆ ಪ್ರಚೋದಿಸುತ್ತದೆ. ಇದಕ್ಕೆ ಆ ಸಮಯ, ಈ ಸಮಯವೆಂಬುವುದು ಇರುವುದಿಲ್ಲ. ಯಾವಾಗಲೂ ಬೇಕಾದರೂ ಲೈಂಗಿಕ ಕ್ರಿಯೆ ನಡೋಯ ಸಾಧ್ಯತೆ ಇರುತ್ತದೆ. 

ನಿಗದಿತ ಲೈಂಗಿಕತೆ
ಒತ್ತಡ ಹೆಚ್ಚಾದ ಜೋಡಿಗಳಿಗೂ ಸೆಕ್ಸ್‌ಗೂ ಸಮಯ ನಿಗದಿ ಮಾಡಿಕೊಳ್ಳುವುದು ಸಹಜ. ಇಂಥ ಪ್ರಕ್ರಿಯೆಯಲ್ಲಿ ಮನಸ್ಸಿದೆಯೋ, ಇಲ್ಲವೋ, ಇಬ್ಬರೂ ಯಾಂತ್ರಿಕವಾಗಿ ಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಮನಸ್ಸನ್ನು ಒತ್ತಡದಿಂದ ಮುಕ್ತರಾಗಿಸಿಕೊಂಡು, ಈ ಕ್ರಿಯೆಯಲ್ಲಿ ತೊಡಗಿದರೆ ನಿಜವಾಗಲೂ ಮುದ ನೀಡುವುದು ಸುಳ್ಳಲ್ಲ. ಆದರೆ, ಟೆನ್ಷನ್‌ನಲ್ಲಿಯೇ ಮುಂದುವರಿದರೆ ಇಬ್ಬರಿಗೂ ಸುಖ ಸಿಗೋಲ್ಲ. ಆದರೆ, ಸಂಗಾತಿಯನ್ನು ಸಂತೋಷ ಪಡಿಸಬೇಕೆಂದು ಪೂರ್ವ ನಿರ್ಧರಿತವಾಗಿರುವುದರಿಂದ ಅದಕ್ಕೆ ಏನು ಬೇಕೋ, ಅದಕ್ಕೆ ಪೂರ್ವ ತಯಾರಿಯೂ ನಡೆದಿರುತ್ತದೆ. ಇದರಿಂದ ಸುಖ ಇಬ್ಬರದ್ದೂ ಆಗುವ ಸಾಧ್ಯತೆಯೂ ಇರುತ್ತದೆ. 

ಅವನಿಗೆ ಸಾರ್ವಜನಿಕ ಸ್ಥಳದಲ್ಲಿ ಸೆಕ್ಸ್ ಮಾಡೋ ಚಟ

ಒಟ್ಟಿನಲ್ಲಿ ಗಂಡು-ಹೆಣ್ಣು ಮಾನಸಿಕವಾಗಿ ಒಂದಾದರೆ ಮಾತ್ರ, ದೈಹಿಕವಾಗಿಯೂ ಸುಖ ಪಡೆಯಲು ಸಾಧ್ಯ. ಇಬ್ಬರೂ ಒಬ್ಬರಿಗೊಬ್ಬರು ಅರಿತುಕೊಂಡು, ಮುನ್ನಡೆದರೆ ಮಾತ್ರ ಬಾಳು ಹಸನಾಗುವುದೇ ಹೊರತು, ನೀವು ಯಾವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತೀರಿ, ಅದರಿಂದ ನಿರೀಕ್ಷಿಸಿದ ಸುಖ ಸಿಗುತ್ತದಾ ಎಂಬ ವಿಷಯದ ಮೇಲಲ್ಲ ಎಂಬುವುದು ನೆನಪಿನಲ್ಲಿ ಇರಲಿ.

ಒಟ್ಟಿನಲ್ಲಿ ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಮುಚ್ಚಿಡದೇ, ಸೂಕ್ತ ತಜ್ಞರ ಸಲಹೆ, ಸಹಕಾರ ಪಡೆಯುವುದ ಅಗತ್ಯ. ಸುಖಾ ಸುಮ್ಮನೆ ಮನಸ್ಸಿನಲ್ಲಿಯೇ ನೊಂದು, ಹಾದಿ-ಬೀದಿ ಬದಿ ಇರೋ ನಕಲಿ ಲೈಂಗಿಕ ತಜ್ಞರ ಬಳಿ ಹೋಗಬೇಡಿ. ಎಲ್ಲವಕ್ಕೂ ಮುಂಚೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು, ದೈಹಿಕ ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಅಗತ್ಯ.

ಮೊದಲ ಬಾರಿ ತುಂಬಾ ನೋವಾಗುತ್ತಾ?

click me!