
ದಿನದಿಂದ ದಿನಕ್ಕೆ ಬೋರ್ವೆಲ್'ಗಳ ಸಂಖ್ಯೆ ಹೆಚ್ಚುತ್ತಿದ್ದು, ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಮೊದ ಮೊದಲು 100 ಅಡಿಯಲ್ಲಿ ಸಿಗುತ್ತಿದ್ದ ನೀರಿನ ಆಳ ಈಗ 500, 600 ಟಿ ತಲುಪಿದೆ. ಹೀಗಾಗಿ ಕೆಲವೊಂದು ಬೋರ್'ವೆಲ್'ಗಳಲ್ಲಿ ನೀರು ಸಿಕ್ಕರೆ, ಮತ್ತೆ ಕೆಲವಲ್ಲಿ ನೀರೇ ಸಿಗುವುದಿಲ್ಲ. ಹೀಗಾಗಿ ನೀರಿಗಾಗಿ ಜನರು ಪರದಾಡುವಂತಾಗಿದೆ.
ಅದೇನಿದ್ದರೂ 500, 600 ಅಡಿಯ ಬೋರ್'ವೆಲ್'ನಲ್ಲಿ ನೀರು ಹೇಗೆ ಸಿಗುತ್ತದೆ. ಅಲ್ಲಿ ನೀರು ಹೇಗೆ ಸೇರಿಕೊಳ್ಳುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಇರುತ್ತದೆ. ಅಲ್ಲಿನ ದೃಶ್ಯ ನೋಡುವುದು ಪ್ರತಿಯೊಬ್ಬರ ಕುತೂಹಲವಾಗಿದೆ. ಸದ್ಯ ನಿಮ್ಮ ಈ ಕುತೂಹಲವನ್ನು ದೂರ ಮಾಡಬಲ್ಲ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ 562 ಅಡಿಯಲ್ಲಿ ನೀರು ಹೇಗೆ ಸಿಗುತ್ತದೆ ಎಂಬ ದೃಶ್ಯವನ್ನು ತೋರಿಸಲಾಗಿದೆ. ಇದಕ್ಕಾಗಿ 562ಕ್ಕೂ ಹೆಚ್ಚು ಅಡಿಯ ಬೋರ್'ವೆಲ್'ನೊಳಗೆ ಕ್ಯಮಾರಾವೊಂದನ್ನು ಇಳಿಸಿದ್ದು, ಇದರಲ್ಲಿ ಈ ಅಪೂರ್ವ ದೃಶ್ಯ ಸೆರೆಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.