ಗೋತಮಿಗೆ ಬುದ್ಧ 'ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳುತ್ತಾನೆ...' ಎಲ್ಲರ ಮನೇಲೂ ಸಿಗೋ ಸಾಸಿವೆ ತರಲೇನು ಕಷ್ಟವೆಂದೇ ಹುಡುಕಾಟಕ್ಕಿಳಿಯುತ್ತಾಳೆ. ಎಲ್ಲರೂ ಮನೆಯಲ್ಲಿಯೂ ಸಾಸಿವೆ ಇತ್ತು, ಜತೆಗೆ ಸಾವೂ ಇತ್ತು. ಒಗ್ಗರಣ ಡಬ್ಬದಲ್ಲಿರೋ ಈ ಸಾಸಿವೆ ಆರೋಗ್ಯಕ್ಕೂ ಒಳ್ಳೆಯದು. ಹೇಗೆ?
ಭಾರತೀಯ ಅಡುಗೆ ಸಾಮಾನುಗಳಲ್ಲಿ ಸಾಸಿವೆ ಮುಖ್ಯ ಪಾತ್ರ ವಹಿಸುತ್ತದೆ. ಯಾವುದೇ ಅಡುಗೆ ಮಾಡಿದರೂ ಒಗ್ಗರಣೆಗೆ ಸಾಸಿವೆ ಬೇಕು. ಒಗ್ಗರಣೆ ಇಲ್ಲದೆ ಭಾರತೀಯರಿಗೆ ಅಡುಗೆ ರುಚಿಸದು. ಇದೆ ಸಾಸಿವೆಯಿಂದ ಹಲವಾರು ಆರೋಗ್ಯಕಕ್ಕೆ ಅನುಕೂಲವಾಗೋ ಪ್ರಯಜನಗಳಿವೆ.
ಸಾಸಿವೆಯನ್ನು ಪ್ರಪಂಚದಾದ್ಯಂತ ಎಲ್ಲರೂ ಬಳಸುತ್ತಾರೆ. ಇದು ಬೇರೆ ಬೇರೆ ಬಣ್ಣಗಳಲ್ಲಿ ದೊರೆಯುತ್ತದೆ. ಸಾಸಿವೆಯಲಿ ಕ್ಯಾಲ್ಸಿಯಂ, ಮಿನರಲ್ಸ್, ಮೆಗ್ನೇಷಿಯಂ, ಫಾಸ್ಪರಸ್, ಪೊಟ್ಯಾಶಿಯಂ ಮತ್ತು ಡಯಟರಿ ಫೈಬರ್ ಇರುತ್ತದೆ. ಅಷ್ಟೇ ಅಲ್ಲ ವಿಟಾಮಿನ್ ಈ, ವಿಟಾಮಿನ್ ಕೆ ಜೊತೆಗೆ ವಿಟಾಮಿನ್ ಸಿ ಕೂಡ ಇದೆ.
ಕ್ಯಾನ್ಸರ್ ನಿವಾರಕ: ಸಾಸಿವೆಯಲ್ಲಿ ಗ್ಲುಕೊಸೈನೋಲೇಟ್ಸ್ ಮತ್ತು ಮಿರೊಸಿನೇಸ್ ಅಂಶವಿದೆ. ಇವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಜತೆಗೆ ಸಾಸಿವೆಯಲ್ಲಿರುವ ಸೆಲೆನಿಯಮ್ ಅಂಶ ದೇಹದಲ್ಲಿ ಕ್ಯಾನ್ಸರ್ ಬೆಳೆಯದೆ ಇರುವಂತೆ ಮಾಡುತ್ತದೆ.
undefined
ಜೀರ್ಣಕ್ರಿಯೆಗೆ ಸಹಕಾರಿ : ಇದರಲ್ಲಿರುವ ಫೈಬರ್ ಅಂಶ ಜೀರ್ಣ ಕ್ರಿಯೆ ಉತ್ತಮವಾಗಲು ಹಾಗು ಮೆಟಬಾಲಿಸಂ ಉತ್ತಮವಾಗಿ ಆಗಲು ಸಹಾಯ ಮಾಡುತ್ತದೆ.
ಗಂಟುಗಳ ನೋವು: ಸಾಸಿವೆಯಲ್ಲಿ ಸೆಲೆನಿಯಮ್ ಮತ್ತು ಮೆಗ್ನೇಷಿಯಂ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಗಂಟುಗಳ ನೋವು ನಿವಾರಿಸಲು ಸಹಕರಿಸುತ್ತದೆ.
ಹೃದಯದ ಅರೋಗ್ಯ: ದುರ್ಬಲ ಹೃದಯದವರಿಗೆ ಇದು ಉತ್ತಮ ಔಷಧಿ. ಇದರಲ್ಲಿರುವ ಒಮೇಗಾ 3 ಅಂಶ ಹೃದಯ ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ.
ಮೈಗ್ರೇನ್: ಯಾರಿಗೆ ಮೈಗ್ರೇನ್ ಸಮಸ್ಯೆ ಕಾಡುತ್ತದೆಯೋ ಅವರಿಗೆ ಸಾಸಿವೆ ಉತ್ತಮ ಆಹಾರ. ಯಾಕೆಂದರೆ ಇದರಲ್ಲಿರುವ ಮೆಗ್ನೇಷಿಯಂ ಮೈಗ್ರೇನ್ ನಿವಾರಿಸುತ್ತದೆ.
ಡಿಟಾಕ್ಸಿಫಿಕೇಷನ್: ಸಾಸಿವೆ ಸೇವನೆಯಿಂದ ದೇಹದಲ್ಲಿನ ಹಾನಿಕಾರಕ ಟಾಕ್ಸಿನ್ ಅಂಶ ದೇಹದಿಂದ ದೂರವಾಗುತ್ತದೆ.
ಕೂದಲಿನ ಆರೈಕೆ; ಮದರಂಗಿ ಎಲೆಗಳನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ ಅದನ್ನು ಕೂದಲಿನ ಬುಡಕ್ಕೆ ಹಚ್ಚಿದರೆ ಕೂದಲು ದಟ್ಟವಾಗಿ ಬೆಳೆಯುತ್ತದೆ.
ಈ ಸುದ್ದಿಗಳನ್ನೂ ಓದಿ
ಕೆಮ್ಮು ಶೀತಕ್ಕೆ ಶುಂಠಿ ಮನೆ ಮದ್ದು
ಸ್ಕಿನ್ ಗ್ಲೋ ಆಗಲು ಇಲ್ಲಿವೆ ಸಿಂಪಲ್ ಮದ್ದು
ಕೊತ್ತಂಬರಿ, ಮೆಂತೆ ಗ್ಯಾಸ್ಟ್ರಿಕ್‌ಗೆ ಮದ್ದು