
ಮುಂಬೈ (ನ.08) ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಹಾಕುವ ಪ್ರತಿ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತದೆ. ಇದೀಗ ದೀಪಾವಳಿ ಹಬ್ಬಕ್ಕೆ ಸಾರಾ ತೆಂಡೂಲ್ಕರ್ ತಮ್ಮ ಕಚೇರಿಯಲ್ಲಿನ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಸಾರಾ ಹಾಕಿದ ಪೋಸ್ಟ್ನಲ್ಲಿ ನೆಟ್ಟಿಗರ ಗಮನಸೆಳೆದಿದ್ದು ಸಾರಾ ಬಳಸುವ ಐಫೋನ್. ಕೆಲ ಸೆಲ್ಫಿ ಫೋಟೋಗಳಲ್ಲಿ ಸಾರಾ ಬಳಸುವ ಐಫೋನ್ ಯಾವುದು ಅನ್ನೋದು ಬಯಲಾಗಿದೆ.
ಸಾರಾ ತೆಂಡೂಲ್ಕರ್ ಪ್ರತಿ ಪೋಸ್ಟ್ನಲ್ಲಿ ಸಾರಾ ಬಳಸಿದ ಡ್ರೆಸ್, ಆಭರಣ, ಆಕೆಯ ಸೌಂದರ್ಯ ಕುರಿತು ಭಾರಿ ಚರ್ಚೆಯಾಗುತ್ತದೆ. ಈ ಬಾರಿ ಸಾರಾ ಸಾಂಪ್ರದಾಯಿಕ ಲುಕ್ನಲ್ಲಿ ದೀಪಾವಳಿ ಆಚರಿಸಿದ್ದಾರೆ. ಈ ಬಾರಿ ಲುಕ್ ಬದಲು ಸಾರಾ ತಂಡೂಲ್ಕರ್ ಫೋನ್ ಎಲ್ಲರ ಕೇಂದ್ರಬಿಂದುವಾಗಿದೆ. ಕಚೇರಿ ಸಹೋದ್ಯೋಗಳು, ಸಚಿನ್ ತೆಂಡೂಲ್ಕರ್, ಸಹೋದರ ಅರ್ಜುನ್ ತೆಂಡೂಲ್ಕರ್ ಸೇರಿದಂತೆ ಆಪ್ತರ ಜೊತೆ ದೀಪಾವಳಿ ಆಚರಿಸಿದ್ದಾರೆ. ಸಾರಾ ಎತ್ನಿಕ್ ಡ್ರೆಸ್ ಜೊತೆ ಸಾರಾ ತೆಂಡೂಲ್ಕರ್ ಬಳಸುವ ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್ ಕೂಡ ಭಾರಿ ಸದ್ದು ಮಾಡುತ್ತಿದೆ.
ಸಾರಾ ತೆಂಡೂಲ್ಕರ್ ಬಳಸುತ್ತಿರುವುದು ಐಫೋನ್ 18 ಪ್ರೋ ಮ್ಯಾಕ್ಸ್. ಈ ಫೋನ್ ಆರಂಭಿಕ ಬೆಲೆ 1.79 ಲಕ್ಷ ರೂಪಾಯಿ. ಇದು 256 ಜಿಬಿ ಸ್ಟೋರೆಜ್ ಹೊಂದಿದೆ. ಆದರೆ ಸಾರಾ ತೆಂಡೂಲ್ಕರ್ ಅತೀ ಹೆಚ್ಚು ಫೋಟೋ, ವಿಡಿಯೋಗಳನ್ನು ತೆಗೆದು ಪೋಸ್ಟ್ ಮಾಡುತ್ತಾರೆ. ಹೀಗಾಗಿ ಸಾರಾ ತೆಂಡೂಲ್ಕರ್ ಬಳಸುತ್ತಿರುವು ಬರ್ಗಂಡಿ ಕಲರ್ನ 2ಟಿಬಿ ಸಾಮರ್ಥ್ಯದ 18 ಪ್ರೋ ಮ್ಯಾಕ್ಸ್. ಇದರ ಬೆಲೆ 3,29,900 ರೂಪಾಯಿ (3.3 ಲಕ್ಷ ರೂಪಾಯಿ).
ಸಾರಾ ತೆಂಡೂಲ್ಕರ್ ಕಚೇರಿಯ ದೀಪಾವಳಿ ಹಬ್ಬದಲ್ಲಿ ತಂದೆ ಸಚಿನ್ ತೆಂಡೂಲ್ಕರ್, ತಾಯಿ ಅಂಜಲಿ ತೆಂಡೂಲ್ಕರ್ ಪಾಲ್ಗೊಂಡಿದ್ದರು. ಇನ್ನು ಸಹೋದರ ಅರ್ಜುನ್ ತೆಂಡೂಲ್ಕರ್ ಹಾಗೂ ಅರ್ಜುನ್ ಪತ್ನಿ ಸಾನಿಯಾ ಚಂದೋಕ್ ಪಾಲ್ಗೊಂಡಿದ್ದಾರೆ. ಅರ್ಜನ್ ಮದುವೆಗೂ ಮೊದಲೇ ಸಾನಿಯಾ ಚಂದೋಕ್ ಹಾಗೂ ಸಾರಾ ತೆಂಡೂಲ್ಕರ್ ಆತ್ಮೀಯರು. ಹೀಗಾಗಿ ದೀಪಾವಳಿ ಹಬ್ಬದಲ್ಲೂ ಸಾನಿಯಾ ಚಂದೋಕ್ ಜೊತೆ ಸಾರಾ ತೆಂಡೂಲ್ಕರ್ ಪ್ರತ್ಯೇಕವಾಗಿ ಫೋಟೋ ತೆಗೆದಿದ್ದಾರೆ.
ಸಾರಾ ತೆಂಡೂಲ್ಕರ್ ಬಳಸುವ ಐಫೋನ್ 18 ಪ್ರೋ ಮ್ಯಾಕ್ಸ್ ಫೋನ್ 6.9 ಇಂಚಿನ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೆ LTPO ಸೂಪರ್ ರೆಟಿನಾ XDR OLED ಡಿಸ್ಪ್ಲೆ ಹೊಂದಿದೆ. ಸೆರಾಮಿಕ್ ಶೀಲ್ಡ್ ಸೇರಿದಂತೆ ಉತ್ತಮ ಪ್ರೊಟೆಕ್ಷನ್ ನೀಡಲಾಗಿದೆ. ಆ್ಯಪಲ್ನ A20 Pro (2nm) ಪ್ರೊಸೆಸರ್ ಹೊಂದಿದೆ. 48MP ಪ್ರೈಮೆರಿ ಕ್ಯಾಮೆರಾ, 48MP ಸೆಕಂಡರಿ ಹಾಗೂ 48MP ಥರ್ಡ್ ಲೆನ್ಸ್ ತ್ರಿಪಲ್ ಕ್ಯಾಮೆರಾ ಹೊಂದಿದೆ. ಇನ್ನು ಫ್ರಂಟ್ ಫೇಸ್ ಐಡಿ ಸಪೋರ್ಟ್ 18MP ಕ್ಯಾಮೆರಾ ನೀಡಲಾಗಿದೆ.
ಸಾರಾ ತೆಂಡೂಲ್ಕರ್ ಸೆಲ್ಫಿ ಫೋಟೋಗಳಿಂದ ಇದೀಗ ಸಾರಾ ಬಳಸುವ ಐಫೋನ್ 19 ಪ್ರೋ ಮ್ಯಾಕ್ಸ್ ಬರ್ಗುಂಡಿ ಭಾರಿ ಚರ್ಚೆಯಾಗುತ್ತಿದೆ. ಐಫೋನ್ ಪ್ರಿಯರು ಥ್ರಿಲ್ ಆಗಿದ್ದಾರೆ. 3.3 ಲಕ್ಷ ಫೋನ್ ಮೂಲಕ ಸಾರಾ ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗಿದ್ದಾರೆ. ಸಾರಾ ತೆಂಡೂಲ್ಕರ್ ದೀಪಾವಳಿ ಹಬ್ಬದ ಸಂಭ್ರಮಕ್ಕೆ ಶುಭಾಶಯಗಳು ಹರಿದು ಬಂದಿದೆ. ಇದೇ ವೇಳೆ ಐಫೋನ್ ಕೂಡ ಚರ್ಚೆಯಾಗುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.