ಎದೆಯಾಳದಲ್ಲಿ ಬಚ್ಚಿಕೊಂಡಿರೋ ಅಚ್ಚಳಿಯದ ನೂರೊಂದು ನೆನಪು...

Suvarna News   | Asianet News
Published : Oct 03, 2020, 07:23 PM IST
ಎದೆಯಾಳದಲ್ಲಿ ಬಚ್ಚಿಕೊಂಡಿರೋ ಅಚ್ಚಳಿಯದ ನೂರೊಂದು ನೆನಪು...

ಸಾರಾಂಶ

ಸವಿ ಸವಿ ನೆನಪು, ಸಾವಿರ ನೆನಪುಗಳನ್ನು ಮೆಲಕು ಹಾಕುವುದೇ ಜೀವನದಲ್ಲಿ ಸಾಕಷ್ಟು ಖುಷಿ ಕೊಡುತ್ತದೆ. ಆ ಮೊದಲು ಮಾಡಿದ ಕಾರ್ಯಗಳು ಸದಾ ನೆನಪಿನಲ್ಲಿ ಉಳಿಯುವಂಥದ್ದು. ಅಂತ ಕೆಲವು ನೆನಪುಗಳ ತೋರಣವಿದು. ಓದಿ, ಎಂಜಾಯ್ ಮಾಡಿ.

ಜೀವನ ಸಂತೋಷದಿಂದ ಕೂಡಿರಬೇಕಾದರೆ ದೊಡ್ಡ ದೊಡ್ಡ ಸಂತೋಷಕ್ಕೆ ಕಾದು ಕುಳಿತುಕೊಳ್ಳಬೇಕಾಗಿಲ್ಲ. ಸಣ್ಣ ಸಣ್ಣ ಖುಷಿಯನ್ನೂ ಎಂಜಾಯ್ ಮಾಡಬಹುದು. ಅದನ್ನು ಕಲಿಯಬೇಕಷ್ಟೆ. ಹೀಗೆ ಮಾಡಿದರೆ ಜೀವನ ಪೂರ್ತಿ ಸಂತೋಷವಾಗಿಯೇ ಇರಬಹುದು. ಅಂಥ ಕೆಲವು ಮಧುರ ನೆನಪುಗಳ ಗುಚ್ಛವಿದು. 

#Relationshipಗೆ ಸಂಬಂಧಿಸಿದ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ

- ಪ್ರಥಮ ಬಾರಿ ಲವ್ ಆಗಿದ್ದು, ಆ ನೋಟ, ಹೊಟ್ಟೆಯಲ್ಲಿ ಚಿಟ್ಟೆ ಹಾರಿದಂತಾಗಿದ್ದು. ಇಂಥ ಮಧುರ ಅನುಭವದ ನೆನಪಿದ್ಯಾ?
- ಕ್ಲಾಸ್‌ನಲ್ಲಿ ಫಸ್ಟ್ ಬಂದು ಟೀಚರ್‌ ಭೇಷ್ ಎಂದಿದ್ದು. 
- ನಮ್ಮಲ್ಲಿರೋ ವಿಶೇಷ ಟ್ಯಾಲೆಂಟ್‌‌ವೊಂದನ್ನು ಮೊದಲು ಪ್ರದರ್ಶಿಸಿದಾಗ, ಸಿಕ್ಕ ಪ್ರಶಂಸೆ.
- ನಾಲಿಗೆಯನ್ನು ಟ್ವಿಸ್ಟ್ ಮಾಡಿದ್ದು, ಪಿಯಾನೋ ನುಡಿಸಿದ್ದು, ಮ್ಯಾಜಿಕ್ ಮಾಡಿದ್ದು...
- ಬೆಸ್ಟ್ ಫ್ರೆಂಡ್ ನೀಡಿದ ಪ್ರೀತಿಯ ಅಪ್ಪುಗೆ. 


- ನಿಮ್ಮನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ವ್ಯಕ್ತಿಯೊಬ್ಬರು ಇದ್ದಾರೆ ಎನ್ನುವ  ಸತ್ಯ ಕಷ್ಟ ಕಾಲದಲ್ಲಿ ಅರಿವಿಗೆ ಬಂದಾಗ. 
- ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡಾಗ, ಹೊಸ ವಿದ್ಯೆ ಕಲಿತಾಗ. 
- ಜೀವಕ್ಕಿಂತ ಹೆಚ್ಚು ಇಷ್ಟ ಪಟ್ಟ ಗೆಳತಿಗೆ ಮೊದಲ ಬಾರಿಗೆ ಕಿಸ್ ಮಾಡಿದ ಆ ಕ್ಷಣ. 
- ಊರಿನ ಟೆಂಟ್‌ನಲ್ಲಿ ನೆಲದ ಮೇಲೆ ಕೂತು ಫಿಲ್ಮ್ ನೋಡಿದ್ದು. 
- ಮರಕ್ಕೆ ಹತ್ತಿ ಎತ್ತರದ ಕೊಂಬೆಯಲ್ಲಿ ಕುಳಿತು, ಆಕಾಶವನ್ನು ಮುಟ್ಟಿದಷ್ಟು ಖುಷಿ ಪಟ್ಟಿದ್ದು. 
- ಜೀವನಶೈಲಿಯಲ್ಲಿ ಮಾಡಿಕೊಂಡ ಸಣ್ಣದೊಂದು ಬದಲಾವಣೆ. ಅದರಿಂದ ಸಿಕ್ಕ ಖುಷಿ, ಯಶಸ್ಸು...ಅದನ್ನು ಮತ್ತೊಬ್ಬರು ಫಾಲೋ ಮಾಡುವಂತೆ ಮಾಡಿದ್ದು. 
- ಒಳ್ಳೆ ಹಾಡೊಂದನ್ನು ಮೈ ಮರತು ಕೇಳಿದಾಗಿನ ಕ್ಷಣ....

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!
Karna Serial: ಆ ಒಂದು ಸತ್ಯ ತೇಜಸ್​ಗೆ ಹೇಳಲು ಬಾಯಿ ಬಿದ್ದೋಗಿತ್ತಾ? ಕರ್ಣನ ಮೇಲೆ ಕಿಡಿಕಾರ್ತಿರೋ ವೀಕ್ಷಕರು