ಡೇಟಿಂಗ್‌ಗೆ ಫಿಟ್ನೆಸ್ ಏಕೆ ಮುಖ್ಯ ಗೊತ್ತಾ?

By Web DeskFirst Published Jul 23, 2019, 3:26 PM IST
Highlights

ಜಗತ್ತಿನ ಕೆಲವೆಡೆ ಫಿಟ್ನೆಸ್ ಡೇಟಿಂಗ್ ಎಂಬುದು ಬಹಳ ಜನಪ್ರಿಯ ವಿಷಯವಾಗಿದೆ. ಕೆಲವೊಂದು ಆ್ಯಪ್‌ಗಳು ಕೂಡಾ ಇಬ್ಬರನ್ನು ಫಿಟ್ನೆಸ್ ಪ್ಯಾಶನ್ ಆಧಾರದ ಮೇಲೆ ರೊಮ್ಯಾಂಟಿಕ್ ಕನೆಕ್ಷನ್ ನೀಡುತ್ತವೆ. 

ಇಂದು ಬಹುತೇಕ ಯುವಕ ಯುವತಿಯರು ಫಿಟ್ನೆಸ್ ಕಡೆ ಹೆಚ್ಚು ಗಮನ ವಹಿಸುತ್ತಿರುವ ಸಂದರ್ಭದಲ್ಲಿ ಜೊತೆಗೆ ವರ್ಕೌಟ್ ಮಾಡುವ ಕಪಲ್ ಜೊತೆಗಿರುತ್ತಾರೆ ಎಂಬ ಹೊಸ ಮಾತೊಂದು ಹುಟ್ಟಿಕೊಂಡಿದೆ.  ದಾಂಪತ್ಯಕ್ಕೆ ದೈಹಿಕ ಫಿಟ್ನೆಸ್‌ಗೆ ಎಲ್ಲಕ್ಕಿಂತ ಮಹತ್ವ ಕೊಡುವ ಈ ಐಡಿಯಾವನ್ನು ನೀವು ದೂರಬಹುದು, ಆದರೆ, ಇದೀಗ ಹೊಸ ಟ್ರೆಂಡ್. ಹೀಗಾಗಿ, ಫಿಟ್ನೆಸ್ ಆಧಾರದ ಮೇಲೆ ಸಂಗಾತಿ ಹುಡುಕುವ ಡೇಟಿಂಗ್ ಆ್ಯಪ್‌ಗಳು ಕೂಡಾ ಈಗ ಹುಟ್ಟಿಕೊಂಡಿವೆ. ಮುಂಚೆಯೆಲ್ಲ ಮದುವೆಮನೆಗಳು ಸಂಗಾತಿ ಹುಡುಕುವ ಅಡ್ಡಾ ಅಗಿರುತ್ತಿದ್ದರೆ, ಈಗ ಹುಡುಗಿ ಹುಡುಕಲು ಜಿಮ್ ಸೇರುವ ಜಮಾನಾ ರೆಡಿಯಾಗುತ್ತಿದೆ. ವರ್ಕೌಟ್ ಮಾಡುತ್ತಾ ಡೇಟ್ ಹುಡುಕಿಕೊಳ್ಳುವ ಬಗ್ಗೆ ನೀವಷ್ಟು ಆಸಕ್ತಿ ಹೊಂದಿಲ್ಲವಾದರೂ, ಡೇಟಿಂಗ್‌ಗೆ ಫಿಟ್ನೆಸ್ ಏಕೆ ಮುಖ್ಯವೆಂದು ತಿಳಿದುಕೊಳ್ಳಲು ಅಡ್ಡಿಯಿಲ್ಲವಲ್ಲ...

ಮಾತು ಆರಂಭಿಸಲು ವಿಷಯ

ಇಬ್ಬರಿಗೂ ಸಮಾನ ಆಸಕ್ತಿ ಇದ್ದರೆ ಕನೆಕ್ಟ್ ಆಗುವುದು ಸುಲಭ ಎಂದು ಎಲ್ಲರಿಗೂ ಗೊತ್ತಿರುವುದೇ. ನೀವು ಫಿಟ್ನೆಸ್ ಫ್ರೀಕ್ ಆಗಿದ್ದರೆ, ಫಿಟ್ನೆಸ್‌ನಲ್ಲಿ ಆಸಕ್ತಿ ಹೊಂದಿರುವವರನ್ನೇ ಹುಡುಕಿಕೊಂಡರೆ ಡೇಟ್‌ಗೆ ಹೋದಾಗ ಮಾತು ಆರಂಭಿಸಲು ತಡವರಿಸುವ ಅಗತ್ಯವಿಲ್ಲ. ಮಾತನಾಡಲು ವಿಷಯವಿದ್ದಾಗ ಇಬ್ಬರೂ ಮೊದಲ ಭೇಟಿಯ ನಾಚಿಕೆ, ಸಂಕೋಚ, ಮುಜುಗರಗಳಿಂದ ಸುಲಭವಾಗಿ ತಪ್ಪಿಸಿಕೊಳ್ಳಬಹುದು.

ಬಾಂಡಿಂಗ್ ಹೆಚ್ಚಿಸುತ್ತದೆ

ಇಬ್ಬರೂ ಒಟ್ಟಿಗೇ ವರ್ಕೌಟ್ ಮಾಡಲು ನಿರ್ಧರಿಸಿದಿರಾದರೆ, ಯಾವ ದಿನವೂ ಜಿಮ್‌ಗೆ ಹೋಗುವುದಕ್ಕೆ ಉದಾಸೀನವಾಗುವುದು ಸಾಧ್ಯವಿಲ್ಲ. ಜೊತೆಗೆ, ಇಬ್ಬರೂ ಒಟ್ಟಿಗೆ ವರ್ಕೌಟ್ ಮಾಡುವುದರಿಂದ ಬಾಂಡಿಂಗ್ ಕೂಡಾ ಹೆಚ್ಚು ಗಟ್ಟಿಯಾಗುತ್ತಾ ಸಾಗುತ್ತದೆ. ದೈಹಿಕ ವ್ಯಾಯಾಮವು ಹ್ಯಾಪಿ ಹಾರ್ಮೋನ್ ಬಿಡುಗಡೆ ಮಾಡುತ್ತದೆಂಬುದು ನಿಮಗೂ ಗೊತ್ತು. ವರ್ಕೌಟ್‌ನಿಂದ ಇಬ್ಬರ ಮೂಡ್ ಕೂಡಾ ಚೆನ್ನಾಗಿ ಆಗುತ್ತದಾದ್ದರಿಂದ ಹೆಚ್ಚು ಎನರ್ಜಿ ಹಾಗೂ ಸಂತೋಷದೊಂದಿಗೆ ಇರಬಹುದು.

ಸಂಗಾತಿಗೆ ಸಾರಿ ಕೇಳಿದ್ರೆ ಎಲ್ಲ ಸರಿ ಹೋಗತ್ತಾ?

ಆಕರ್ಷಣೆ

ವರ್ಕೌಟ್ ನಿಮ್ಮನ್ನು ನೋಡಲು ಕೂಡಾ ಫಿಟ್ ಆ್ಯಂಡ್ ಬ್ಯೂಟಿಫುಲ್/ಹ್ಯಾಂಡ್‌ಸಮ್ ಮಾಡುತ್ತದೆಂಬುದರಲ್ಲಿ ಅನುಮಾನವಿಲ್ಲ. ಯಂಗ್ ಕೂಡಾ ಕಾಣಿಸುತ್ತೀರಿ. ಇಬ್ಬರ ನಡುವಿನ ಆಕರ್ಷಣೆ ಬೆಳೆಯಲು, ಉಳಿಯಲು ಇದೂ ಕೂಡಾ ಮುಖ್ಯವೇ ಅಲ್ಲವೇ? 

ಆತ್ಮವಿಶ್ವಾಸ

ವರ್ಕೌಟ್‌ ಒಂದೇ ಅಲ್ಲ, ನೀವು ವರ್ಕೌಟ್‌ನತ್ತ ಗಮನ ಹರಿಸುತ್ತಲೇ ಆಹಾರ ಕೂಡಾ ಮುಖ್ಯವಾಗತೊಡಗುತ್ತದೆ. ಆರೋಗ್ಯಕರ ಆಹಾರದತ್ತ ಮುಖ ಮಾಡುತ್ತೀರಿ. ಹ್ಯಾಬಿಟ್ಸ್ ದೂರವಾಗುತ್ತವೆ. ವರ್ಕೌಟ್‌ಗಾಗಿ ಬೆಳಗ್ಗೆ ಬೇಗ ಏಳಲಾರಂಭಿಸುತ್ತೀರಿ. ಇವೆಲ್ಲವೂ ಫಿಟ್‌ನೆಸ್ ಜೊತೆಗೆ ಶಿಸ್ತು, ಆರೋಗ್ಯ, ಸೌಂದರ್ಯ ಎಲ್ಲವನ್ನೂ ಹೆಚ್ಚಿಸುತ್ತವೆ. ಇದರಿಂದ  ಆತ್ಮವಿಶ್ವಾಸ ಹೆಚ್ಚುತ್ತದೆ. ವರ್ಕೌಟ್‌ನಿಂದ ಮೂಡ್ ಕೂಡಾ ಸದಾ ಚೆನ್ನಾಗಿರುತ್ತದೆ. ಆತ್ಮವಿಶ್ವಾಸ ಹಾಗೂ ನಗು ಮುಖದಲ್ಲಿರುವವರಿಗೆ ಎಲ್ಲರೂ ಬೇಗ ಆಕರ್ಷಿತರಾಗುತ್ತಾರೆ. 

ವಿಷಯಗಳನ್ನು ತಾಜಾ ಇರಿಸುತ್ತದೆ

ಒಂದು ಸಂಬಂಧದಲ್ಲಿ ಇಬ್ಬರೂ ಆ್ಯಕ್ಟಿವ್ ಇದ್ದು, ಫಿಟ್ ಇರುವತ್ತ ಗಮನ ನೀಡಿದರೆ, ಜಿಮ್ ಬೋರಾಗಲು, ವಾಕಥಾನ್, ಮ್ಯಾರಥಾನ್, ಜುಂಬಾ, ಹೈಕಿಂಗ್ ಹೀಗೆ ಹೊಸ ಹೊಸ ಚಟುವಟಿಕೆಗಳನ್ನು ಇಬ್ಬರೂ ಕಂಡುಕೊಳ್ಳಬಹುದು. ಇದರಿಂದ ಲೈಫ್ ಬೋರಿಂಗ್ ಹಾದಿ ಹಿಡಿಯದೆ ಸದಾ ಹೊಸತನ್ನು ಎಂಜಾಯ್ ಮಾಡುತ್ತಾ ಕಳೆಯುತ್ತದೆ. 

ಫ್ಲರ್ಟ್ ಮಾಡುವಾಗ ಲೈಂಗಿಕ ಆಸಕ್ತಿ ಅಭಿವ್ಯಕ್ತಿಗಿರಲಿ ಬ್ರೇಕ್

ಹೆಚ್ಚು ಸಮಾಜಮುಖಿಯಾಗುತ್ತೀರಿ

ಡೇಟಿಂಗ್‌ನಲ್ಲಿ ತಡಬಡಾಯಿಸುವ ಬಹುತೇಕ ಹುಡುಗ ಹುಡುಗಿಯರು ಹೆಚ್ಚು ಸೋಷ್ಯಲ್ ಆಗಿರುವುದಿಲ್ಲ. ಸೋಷ್ಯಲ್ ಆ್ಯಂಕ್ಸೈಟಿಯಿಂದ ಬಳಲುತ್ತಿರುತ್ತಾರೆ. ನಾಲ್ಕು ಜನರ ಮಧ್ಯೆ ಮಾತನಾಡಲು ಹೆದರುತ್ತಿರುತ್ತಾರೆ. ಆದರೆ, ಜಿಮ್‌ಗೆ ಹೋಗುವುದರಿಂದ ಅಲ್ಲಿ ಹುಡುಗ ಹುಡುಗಿಯರ ಮಧ್ಯೆ ಬಿಡುಬೀಸಾಗಿ ವರ್ಕೌಟ್ ಮಾಡುತ್ತಾ ನಿಧಾನವಾಗಿ ಅವರೊಂದಿಗೆ ಬೆರೆಯಲಾರಂಭಿಸುತ್ತೀರಿ. ನಿಮ್ಮ ಸೋಷ್ಯಲ್ ಆ್ಯಂಕ್ಸೈಟಿ ದೂರವಾಗುತ್ತದೆ. ಇದರಿಂದ ಸೋಷ್ಯಲ್ ಸ್ಕಿಲ್ಸ್ ಉತ್ತಮಗೊಳ್ಳುತ್ತದೆ. ಮೊದಲ ಬಾರಿ ಡೇಟಿಂಗ್ ಹೋಗಬೇಕೆದರೂ ಭಯ ಬೀಳಲಾರಿರಿ. 

ಉತ್ತಮವಾಗುವ ಸೆಕ್ಸ್ ಲೈಫ್ 

ವರ್ಕೌಟ್ ಮಾಡುವುದರಿಂದ ಇಡೀ ದಿನ ದುಡಿದರೂ ದಣಿವೆ ಎನಿಸದೆ ಎನರ್ಜಿ ಚೆನ್ನಾಗಿರುತ್ತದೆ. ಜೊತೆಗೆ, ವರ್ಕೌಟ್ ಮಾಡಿದಾಗ ಪುರುಷರಲ್ಲಿ ಟೆಸ್ಟೆಸ್ಟೊರೋನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದು ಮಸಲ್ ಬೆಳೆಸಲು ಸಹಕಾರಿಯಷ್ಟೇ ಅಲ್ಲ, ಸೆಕ್ಸ್ ಡ್ರೈವ್ ಕೂಡಾ ಹೆಚ್ಚಿಸುತ್ತದೆ. 

click me!