ರಾವಣ ಸಾಯುವ ವೇಳೆ ಹೇಳಿರೋ ಈ ಮೂರು ಮಾತನ್ನು ಬದುಕಲ್ಲಿ ಅಪ್ಲೈ ಮಾಡ್ಬಿಟ್ರೆ ಲೈಫ್ ಸೂಪರ್..!

ಈ ಮೂರು ನುಡಿ ಮುತ್ತುಗಳನ್ನು ರಾವಣ ತಾನು ಸಾಯುವುದಕ್ಕಿಂತ ಮುಂಚೆ ಹೇಳಿದ್ದಾನೆ ಎನ್ನಲಾಗಿದೆ. ಈ ಮೂರೂ ಮಾತುಗಳಿಗೆ ಸಾಕಷ್ಟು ಉತ್ತಮ ಅರ್ಥವಿದೆ. ಜೊತೆಗೆ, ಸಾಯುವ ಸಮಯದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ.. ಇಲ್ಲಿ.. 

Ravana told this 3 statements at his death bed: Meaningful and fantastic words

ರಾಮಾಯಣ, ರಾಯಾಯಣದಲ್ಲಿ ರಾಮ-ಸೀತೆ ಹಾಗೂ ರಾವಣ ಬಹುತೇಕ ಎಲ್ಲರಿಗೂ ಗೊತ್ತು. ಲಕ್ಷ್ಮಣ, ಹನುಮಂತ ಸೇರಿದಂತೆ ಬಹಳಷ್ಟು ಪಾತ್ರಗಳ ಪರಿಚಯ ಎಲ್ಲರಿಗೂ ಇದೆ. ಅವುಗಳಲ್ಲಿ ಇಲ್ಲಿ ಹೇಳಹೊರಟಿರುವುದು ರಾವಣನ (Ravana) ಬಗ್ಗೆ. ಹೌದು, ರಾವಣ ಸಾಯುವ ಮುಂಚೆ ಹೇಳಿದ್ದ ಈ ಮೂರು ಮಾತುಗಳನ್ನು ನೀವು ಕೇಳಲೇಬೇಕು.. ನಿಜವಾಗಿಯೂ ಇದು ಎಲ್ಲರ ಕಣ್ಣು ತೆರೆಸುವಂತಿದೆ. 

1. ನಿಮ್ಮ ಶತ್ರುಗಳನ್ನು ಮತ್ತು ಮೈಯಲ್ಲಿ ಆಗಿರುವ ರೋಗಗಳನ್ನು ಹಗುರವಾಗಿ ತೆಗೆದುಕೊಳ್ಳಬೇಡಿ..ಅಂದ್ರೆ ಯಾವುದೇ ಕಾರಣಕ್ಕೂ ಅವರೆಡನ್ನೂ ನೆಗ್ಲೆಕ್ಟ್ ಮಾಡಬೇಡಿ.. ಏಕೆಂದರೆ, ಮುಂದೆ ಅವೇ ನಿಮ್ಮ ಅಂತ್ಯಕ್ಕೆ ಕಾರಣ ಆಗಬಹುದು. 

Latest Videos

2. ನಿಮ್ಮ ವೀಕ್‌ನೆಸ್ ಹಾಗೂ ಗುರಿಯನ್ನು ಯಾರಿಗೂ ಹೇಳಬೇಡಿ.. ಅವರು ನಿಮ್ಮ ಆತ್ಮೀಯರು ಅಥವಾ ಕುಟುಂಬದ ಸದಸ್ಯರೇ ಆಗಿರಬಹುದು, ಆದರೂ ಕೂಡ ಅವುಗಳನ್ನು ಹೇಳಬೇಡಿ.. ಈ ಕಾರಣದಿಂದಲೇ ರಾವಣ ರಾಮನ ಎದುರು ಸೋತು ಕೊನೆ ಉಸಿರು ಎಳೆಯುವಂತಾಯ್ತು.

3. ನೀವು ಯಾವುದಾದರೂ ಶುಭ ಕೆಲಸ ಮಾಡುವುದಾದರೆ ಮೊದಲು ಆ ಕೆಲಸವನ್ನು ಮಾಡಿ ಮುಗಿಸಿ.. ಅಥವಾ, ಶುರುವಾಗಿರುವ ಕೆಲಸದಲ್ಲಿ ಬಾಕಿ ಇರುವ ಕೆಲಸವನ್ನು ಮಾಡಿ ಮುಗಿಸಿ.. ಏಕೆಂದರೆ, ಮುಂದೆ ಆ ಕೆಲಸವನ್ನು ಮಾಡಲು ಅವಕಾಶ ಸಿಗದೇ ಇರಬಹುದು.

Ramayana Story: ರಾಮಾಯಣದಿಂದ ನಾವು ಕಲಿಯಬೇಕಾದ 10 ಪಾಠಗಳು ಇಲ್ಲಿವೆ!  

ಈ ಮೂರು ನುಡಿ ಮುತ್ತುಗಳನ್ನು ರಾವಣ ತಾನು ಸಾಯುವುದಕ್ಕಿಂತ ಮುಂಚೆ ಹೇಳಿದ್ದಾನೆ ಎನ್ನಲಾಗಿದೆ. ಈ ಮೂರೂ ಮಾತುಗಳಿಗೆ ಸಾಕಷ್ಟು ಉತ್ತಮ ಅರ್ಥವಿದೆ. ಮೇಲ್ನೋಟಕ್ಕೂ ಅದು ಕಾಣಿಸುತ್ತದೆ. ಜೊತೆಗೆ, ಸಾಯುವ ಸಮಯದಲ್ಲಿ ಯಾರೂ ಸುಳ್ಳು ಹೇಳುವುದಿಲ್ಲ ಎನ್ನುತ್ತಾರೆ. ಹೀಗಾಗಿ ರಾವಣ ಆ ಸಂದರ್ಭದಲ್ಲಿ ತನ್ನ ಅನಿಸಿಕೆಯನ್ನು ಯಾವುದೇ ನಾಟಕೀಯತೆ ಇಲ್ಲದೇ, ಡಬಲ್ ಗೇಮ್ ಆಡದೇ ಹೇಳೀರುತ್ತಾನೆ. ಆತ ತನ್ನ ಇಡೀ ಜೀವಮಾನದಲ್ಲಿ ಕಂಡುಕೊಂಡ ಸತ್ಯವನ್ನು ತನ್ನ ಮರಣದ ಕಾಲದಲ್ಲಿ ಹೇಳಿದ್ದಾನೆ ಎನ್ನಬಹುದು. 

ರಾವಣ ತಮ್ಮಕೊನೆಗಾಲದಲ್ಲಿ ಶ್ರೀರಾಮನಿಂದ ಯುದ್ಧದಲ್ಲಿ ಹತನಾಗಿದ್ದಾನೆ. ರಾಮಾಯಣ ತಿಳಿದಿರುವ ಎಲ್ಲರಿಗೂ ಅದು ತಿಳಿದಿದೆ. ರಾಮನ ಪತ್ನಿ ಸೀತೆಯ ಮೇಲೆ ಮೋಹಗೊಂಡ ರಾವಣ ಅವಳನ್ನುಮೋಸದಿಂದ ಅಪಹರಿಸಿ ತನ್ನ ರಾಜ್ಯದಲ್ಲಿ ದಿಗ್ಭಂಧನದಲ್ಲಿ ಇಟ್ಟುಕೊಂಡ. ಆದರೆ, ಸೀತೆ ಆತನಿಗೆ ಒಲಿಯಲಿಲ್ಲ. ಅಷ್ಟೇ ಅಲ್ಲ, ಅದೇ ಕಾರಣಕ್ಕೆ ರಾಮ ತನ್ನ ಪತ್ನಿಯನ್ನು ಮರಳಿ ರಾವಣನ ಕೈಯಿಂದ ಪಡೆಯುವುದಕ್ಕಾಗಿ ಯುದ್ಧ ಮಾಡಬೇಕಾಯ್ತು. ಆಗ ರಾವಣನ ಹತ್ಯೆ ಆಯ್ತು. 

ಮಕರ ರಾಶಿಯವರನ್ನು ಬಿಟ್ಟು ಹೋಗುವ ಸಾಡೇಸಾತಿ: ಯಾವ ರಾಶಿಗೆ ಕಾದಿದೆ ಗ್ರಹಚಾರ? ಯಾರು ನಿರಾಳ?

ರಾವಣ ದುಷ್ಟ ಕೃತ್ಯ ಮಾಡಿದ್ದು ನಿಜ. ಆತ ರಾಕ್ಷಸ ಎಂಬುವುದೂ ಸತ್ಯ. ಆದರೂ ಆತ ಮಹಾನ್ ಶಿವಭಕ್ತನಾಗಿದ್ದ. ಜೊತೆಗೆ, ಘೋರ ತಪಸ್ಸು ಮಾಡಿ ಆತ ಬಹಳಷ್ಟು ವರ ಹಾಗು ಶಕ್ತಿ ಪಡೆದುಕೊಂಡಿದ್ದ. ಆದರೆ, ಆತನ ಪರರ ಪತ್ನಿಯ ಮೇಲಿನ ವ್ಯಾಮೋಹ ಸಾವನ್ನು ತಂತು. ಜೊತೆಗೆ, ಆತನ ಬುದ್ಧಿ ಕೆಲಸ ಮಾಡುವ ಬದಲು ಅಹಂಕಾರವೇ ಕೆಲಸ ಮಾಡಿತ್ತು. ಹೀಗಾಗಿ ಚರಿತ್ರೆಯಲ್ಲಿಆತ ಕೆಟ್ಟವರ ಲಿಸ್ಟ್‌ನಲ್ಲಿ ಸೇರಿಕೊಂಡ. ಆದರೆ, ಸಾಯುವ ವೇಳೆಯಲ್ಲಿ ಆತನಿಗೆ ಸ್ವಲ್ಪ ಜ್ಞಾನೋದಯ ಆದಂತಿತ್ತು. ಹೀಗಾಗಿ ಆಗ ಆತನ ಬಾಯಿಂದ ಇಂಥ ಪ್ರಬುದ್ಧ ಮಾತುಗಳು ಬಂದಿವೆ. 

vuukle one pixel image
click me!