
ಎಲ್ಲರಿಗೂ ತಮ್ಮ ತುಟಿಯ ಬಣ್ಣಕೆಂಪಾಗಿರಬೇಕು ಎನಿಸುವುದು ಸಹಜ. ಇದಕ್ಕಾಗಿ ಹಲವರು ಕಾಸ್ಮೆಟಿಕ್ ಮೊರೆ ಹೋಗುತ್ತಾರೆ. ಆದರೆ ನೈಸರ್ಗಿಕವಾದ ಕೆಲ ಆಹಾರದಿಂದ ನಿಮ್ಮ ತುಟಿಯನ್ನು ಕೆಂಪಾಗಿಸಬಹುದು
ಸ್ಟ್ರಾಬೆರಿ: ಟೇಸ್ಟಿ ಮತ್ತು ಆರೋಗ್ಯಕರವಾದ ಸ್ಟ್ರಾಬೆರಿಯನ್ನ ಪೇಸ್ಟ್ ಅಥವಾ ರಸ ಮಾಡಿಕೊಂಡು ತುಟಿಗೆ ಲೇಪಿಸಿದರೆ ನೈಸರ್ಗಿಕ ಕೆಂಪು ಬಣ್ಣ ಬರುತ್ತದೆ.
ಗುಲಾಬಿ ದಳಗಳು: ಗುಲಾಬಿ ದಳಗಳು ನಿಮ್ಮ ತುಟಿಗೆ ಉತ್ತಮ ಬಣ್ಣವನ್ನೂ ನೀಡುತ್ತವೆ. ನಾಲ್ಕೈದು ಗುಲಾಬಿಯ ದಳಗಳನ್ನ ರುಬ್ಬಿಕೊಂಡು ರಸ ಮಾಡಿಕೊಂಡು ತುಟಿಗೆ ಹಚ್ಚಿಕೊಂಡು 10-15 ನಿಮಿಷದ ಬಳಿಕ ತೊಳೆದುಬಿಡಿ ಗುಲಾಬಿಯ ಬಣ್ಣ ನಿಮ್ಮತುಟಿಯನ್ನ ಆವರಿಸುತ್ತದೆ.
ತೂಕ ಕಡಿಮೆ ಮಾಡುತ್ತೆ ಈ ಓಮಿನ ಕಾಳು
ಬೀಟ್ ರೂಟ್: ಬೀಟ್ ರೂಟ್ ನಿಮ್ಮ ತುಟಿಗೆ ಉಜ್ಜಿದರೆ ಒಳ್ಳೆಯ ಹೊಳಪನ್ನ ನೀಡುತ್ತದೆ. ಹಲವು ಗಂಟೆಗಳ ಕಾಲ ನಿಮ್ಮ ನೋಡುಗರಿಗೆ ಅಂದವಾಗಿ ಕಾಣುತ್ತದೆ.
ವೀಳ್ಯದೆಲೆ: ವೀಳ್ಯದೆಲೆಯ ರಸವನ್ನು ನಿಮ್ಮ ತುಟಿಗೆ ಲೇಪಿಸಿದರೆ ತುಟಿ ಕೆಂಪು ತುಟಿಯ ಅಂದ ನಿಮ್ಮನ್ನು ಆವರಿಸುತ್ತದೆ.
ಹೆಣ್ಣು ಮಕ್ಕಳಿಗೆ ಎಲ್ಲಿ ಹೋದರೂ ಟಾಯ್ಲೆಟ್ ಪ್ರಾಬ್ಲಂ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.