ಕ್ಯಾನ್ಸರ್ ಪೀಡಿತರಿಗೆ ಸಿಹಿ ಸುದ್ದಿ: ಈ 9 ಔಷಧಿಗಳ ದರ ಶೇ. 87ರಷ್ಟು ಇಳಿಕೆ!

By Web DeskFirst Published May 19, 2019, 4:38 PM IST
Highlights

ಕ್ಯಾನ್ಸರ್ ಪೀಡಿತರಿಗೆ ಕೊಂಚ ನಿರಾಳ| ಬರೋಬ್ಬರಿ 9 ಔಷಧಿಗಳ ದರ ಇಳಿಸಿದ NPPA| ಮಾರ್ಚ್ ಬಳಿಕ ಸತತ ಎರಡನೇ ಬಾರೀ ಕ್ಯಾನ್ಸರ್ ನಿವಾರಕ ಔಷಧಿಗಳ ಬೆಲೆ ಇಳಿಕೆ| ಯಾವೆಲ್ಲಾ ಮೆಡಿಸಿನ್ ಗಳ ದರ ಕಡಿತ? ಇಲ್ಲಿದೆ ಮಾಹಿತಿ

ನವದೆಹಲಿ[ಮೇ.19]: ಕ್ಯಾನ್ಸರ್ ರೋಗಿಗಳಿಗೆ ಕೊಂಚ ನೆಮ್ಮದಿ ನೀಡುವ ಸುದ್ದಿಯೊಂದು ಬಂದಿದೆ. NPPA ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ 9 ಔಷಧಿಗಳ ದರವನ್ನು ಸೇ. 87ರಷ್ಟು ಇಳಿಕೆ ಮಾಡಿರುವುದೇ ಇದಕ್ಕೆ ಕಾರಣ. ಈ ಒಂಭತ್ತು ಔಷಧಿಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸೆಯಲ್ಲಿ ನೀಡಲಾಗುವ ಕಿಮೋಥೆರಪಿ ಕೂಡಾ ಇದೆ ಎನ್ನಲಾಗಿದೆ.

ಸಂಶೋಧನಾ ಆದೇಶದನ್ವಯ ಪೆಮೆಕ್ಸೆಲ್ (Pemxcel) ಬ್ರಾಂಡ್ ನಡಿಯಲ್ಲಿ ತಯಾರಾಗುವ 500 ಮಿಲಿ ಗ್ರಾಂ ಪೆಮೆಟ್ರೆಕ್ಸೆಡ್ (pemetrexed) ಇಂಜೆಕ್ಷನ್ ದರ 22 ಸಾವಿರ ರೂಪಾಯಿಂದ 2800 ರೂಪಾಯಿ ನಿಗದಿಪಡಿಸಲಾಗಿದೆ. ಇದರೊಂದಿಗೆ 100 ಮಿಲಿ ಗ್ರಾಂ ಡೋಸೇಜ್ ಇಂಜೆಕ್ಷನ್ ದರ 7700 ರೂಪಾಯಿಂದ ಇಳಿಸಿ, 800 ರೂಪಾಯಿ ನಿಗದಿಪಡಿಸಲಾಗಿದೆ.

ಕೊನೆಗೂ ಕ್ಯಾನ್ಸರ್ ಔಷಧಿ ಕಂಡು ಹಿಡಿದ ವಿಜ್ಞಾನಿಗಳು: ಯಾವಾಗಿಂದ ಲಭ್ಯ? ಇಲ್ಲಿದೆ ವಿವರ

ಎಪಿಕ್ಲೋರ್(Epichlor) ಬ್ರಾಂಡ್ ನಡಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ 10 ಮಿಲಿ ಗ್ರಾಂ ಎಪಿರೂಬಿಸಿನ್(epirubicin) ದರ 561 ರೂಪಾಯಿಂದ ಇಳಿಸಿ  276.8 ರೂಪಾಯಿ ನಿಗದಿಪಡಿಸಲಾಗಿದೆ. ಇದೇ ಇಂಜೆಕ್ಷನ್ ನ 50 ಮಿಲಿ ಗ್ರಾಂ ಡೋಸೇಜ್ ದರವನ್ನು 2,662 ರೂಪಾಯಿಂದ ಇಳಿಸಿ 960 ರೂಪಾಯಿ ನಿಗದಿಗೊಳಿಸಲಾಗಿದೆ.

ಎರ್ಲೊಟಾಜ್(Erlotaz) ಬ್ರಾಂಡ್ ನಡಿಯಲ್ಲಿ ತಯಾರಾಗುವ  ಮಾತ್ರೆಗಳುಳ್ಳ, 100 ಮಿಲಿ ಗ್ರಾಂ ಎರ್ಲೋಟಿಬಿನ್(erlotinib) ಬೆಲೆಯನ್ನು 6600 ರೂಪಾಯಿಂದ ಇಳಿಸಿ, 1840 ರೂಪಾಯಿ ನಿಗದಿಗೊಳಿಸಲಾಗಿದೆ. ಇತ್ತ 150ಮಿಲಿ ಗ್ರಾಂನ 10 ಮಾತ್ರೆಗಳ ಪ್ಯಾಕ್ ಮೌಲ್ಯವನ್ನು 8800 ರೂಪಾಯಿಂದ 2400 ರೂಪಾಯಿ ಮಾಡಲಾಗಿದೆ.

ಇದೇ ರೀತಿ ಜೋ ಲಾನೋಲಿಮಸ್(Lanolimus) ಬ್ರಾಂಡ್ ನಡಿ ತಯಾರಾಗುವ ಎವ್ರೋಲಿಮಸ್(everolimus) ಔಷಧಿಯ ದರದಲ್ಲೂ ಭಾರೀ ಇಳಿಕೆಯಾಗಿದೆ. 0.25ಮಿಲಿ ಗ್ರಾಂ ಡೋಸೇಜ್ನ ಔಷಧಿಯ ದರ 726ರಿಂದ 406ರೂಪಾಯಿಗೆ ಇಳಿಸಲಾಗಿದೆ. ಅಂತೆಯೇ 0.5 ಮಿಲಿ ಗ್ರಾಂ ಡೋಸೇಜ್ ಮೌಲ್ಯವನ್ನು 1,452ರಿಂದ ಇಳಿಸಿ 739ರೂಪಯಿ ನಿಗದಿಪಡಿಸಲಾಗಿದೆ. 

ಮಾರ್ಚ್ ಬಳಿಕ ಸತತ ಎರಡನೇ ಬಾರಿ NPPA ಕ್ಯಾನ್ಸರ್ ನಿವಾರಕ ಔಷಧಿಗಳ ಬೆಲೆಯನ್ನು ಇಳಿಕೆ ಮಾಡಿದೆ. ಪ್ರಮುಖ ಔಷಧಿ ಮಾರಾಟಗಾರರು ಬೆಲೆ ಇಳಿಕೆ ವಿಚಾರವಾಗಿ ಈವರೆಗೂ ಯಾವುದೇ ತಕರಾರು ಎತ್ತಿಲ್ಲ. ಆರೋಗ್ಯ ಉದ್ಯಮದ ವಕ್ತಾರರು ಈಗಾಗಲೇ ಔಷಧಿ ಉತ್ಪಾದಿಸುವ ಕಂಪೆನಿಗಳಿಗೆ ಉತ್ಪಾದನಾ ಮಟ್ಟ ಕಡಿಮೆಗೊಳಿಸದಂತೆ ಮನವಿ ಮಾಡಿಕೊಂಡಿದ್ದಾರೆ. 

ಕ್ಯಾನ್ಸರ್ ಪತ್ತೆಗೆ ಹೊಸ ವಿಧಾನ ಪತ್ತೆ: ವೈಜ್ಞಾನಿಕ ಪರೀಕ್ಷೆಗಿಂತ ಇದು ಅಗ್ಗ, ಸುಲಭ!

click me!