ಬೆಂಡೆಕಾಯಿ ಮಾಸ್ಕ್ ಹಾಕಿ ಸೌಂದರ್ಯದ ಎಲ್ಲಾ ಸಮಸ್ಯೆ ನಿವಾರಿಸಿ !

By Web DeskFirst Published May 19, 2019, 3:48 PM IST
Highlights

ಬೆಂಡೆಕಾಯಿಯಿಂದ ಟೇಸ್ಟಿಯಾಗಿ ಅಡುಗೆ ಮಾಡಬಹುದು ಅನ್ನೋದು ಗೊತ್ತು... ಆದ್ರೆ ಇದರಿಂದ ಸೌಂದರ್ಯಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳೂ ನಿವಾರಣೆ ಆಗುತ್ತೆ ಅನ್ನೋ ಬಗ್ಗೆ ನಿಮಗೆ ಮಾಹಿತಿ ಇದ್ಯಾ? 

ಬೆಂಡೆಕಾಯಿ ತಿನ್ನೋದು ಇಷ್ಟ ಇಲ್ಲ, ಅದನ್ನ ಇನ್ನು ಮುಂದೆ ಮಾಡೋದೇ ಬೇಡ ಎನ್ನದಿರಿ. ಯಾಕಂದ್ರೆ ಇದೇ ಬೆಂಡೆ ಕಾಯಿಯಿಂದ ಪಿಂಪಲ್, ನೆರಿಗೆ ಮೊದಲಾದ ಮುಖದ ಎಲ್ಲಾ ಸಮಸ್ಯೆಗಳನ್ನೂನಿವಾರಿಸಬಹುದು. 

ಅದಕ್ಕಾಗಿ ಬೆಂಡೆಕಾಯಿಯನ್ನು ಯಾವ ರೀತಿ ಬಳಸಬೇಕು, ಇಲ್ಲಿವೆ ಟಿಪ್ಸ್... 

ಪಿಂಪಲ್‌ ನಿವಾರಣೆ:  ಪಿಂಪಲ್‌ ಸಮಸ್ಯೆ, ತ್ವಚೆಗೆ ಸಂಬಂಧಿಸಿದ ಸಮಸ್ಯೆ, ಏಜಿಂಗ್‌ ಸಮಸ್ಯೆಗಳು ಕಂಡುಬರುತ್ತವೆ. ಈ ಸಮಸ್ಯೆಯಿಂದ ಮುಕ್ತಿ ಹೊಂದಲು ಬೆಂಡೆಕಾಯಿ ಮಾಸ್ಕ್‌ ಮಾಡಿ ಮುಖಕ್ಕೆ ಹಚ್ಚಿ. 

ಬೆಂಡೆಕಾಯಿ ಮಾಸ್ಕ್‌ : ಮುಖದಲ್ಲಿನ ನೆರಿಗೆ ನಿವಾರಿಸಿ, ಮುಖದಲ್ಲಿ ಮಾಯಿಶ್ಚರೈಸ್‌ ಉಳಿಸುತ್ತದೆ ಬೆಂಡೆಕಾಯಿ ಮಾಸ್ಕ್‌. ಇದಕ್ಕಾಗಿ ಬೆಂಡೆಕಾಯಿಯನ್ನು ಮಿಕ್ಸಿಗೆ ಹಾಕಿ ಪೇಸ್ಟ್‌ ಮಾಡಿಕೊಳ್ಳಿ. ನಂತರ ಮುಖಕ್ಕೆ ಹಚ್ಚಿ 15 -20 ನಿಮಿಷದ ನಂತರ ತಂಪಾದ ನೀರಿನಿಂದ ತೊಳೆಯಿರಿ. ಹೀಗೆ ಮಾಡಿದರೆ ಸ್ವಲ್ಪ ದಿನದಲ್ಲೆ ನಿಮಗೆ ಫಲಿತಾಂಶ ತಿಳಿಯುತ್ತದೆ.

ಸ್ಕಿನ್ ರಶಾಸ್  :ಇದರ ಆ್ಯಂಟಿಬ್ಯಾಕ್ಟೀರಿಯಲ್‌ ಸ್ಕಿನ್‌ ರ‍್ಯಾಶಸ್ ಮತ್ತು ಇನ್‌ಫೆಕ್ಷನ್‌‌ನಂಥ ಸಮಸ್ಯೆಗಳನ್ನೂ ನಿವಾರಿಸುತ್ತದೆ. ಇದಕ್ಕಾಗಿ ಬೆಂಡೆಕಾಯಿಯನ್ನು ಕತ್ತರಿಸಿ ಅರ್ಧಗಂಟೆ ನೀರಿನಲ್ಲಿ ಹಾಕಿಡಿ. ನಂತರ ಅದರ ನೀರನ್ನು ಕಾಟನ್‌ ಸಹಾಯದಿಂದ ಮುಖಕ್ಕೆ ಹಚ್ಚಿ. ಒಣಗಿದ ನಂತರ ತೊಳೆಯಿರಿ.

ನಿಂಬೂ ಪಾನಿ ಸೇವನೆಯಿಂದ ಏನೆಲ್ಲಾ ಲಾಭ?

ಹೊಳೆಯುವ ಕೂದಲು: ಮುಖದ ಜೊತೆಗೆ ಬೆಂಡೆಯಿಂದ ಕೂದಲೂ ಸುಂದರವಾಗುತ್ತದೆ. ಸ್ಕಾಲ್ಪ್‌ ಮೇಲೆ ಬೆಂಡೆಕಾಯಿ ಜೆಲ್‌ ಹಚ್ಚಿ ಮಸಾಜ್‌ ಮಾಡುವುದರಿಂದ ಬ್ಲಡ್‌‌ ಸರ್ಕ್ಯುಲೇಶನ್‌ ಹೆಚ್ಚುತ್ತದೆ. ಇದಕ್ಕಾಗಿ ಬೆಂಡೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಕುದಿಸಿ. ತಣ್ಣಗಾದ ನಂತರ ಅದಕ್ಕೆ ನಿಂಬೆರಸ ಮಿಕ್ಸ್‌ ಮಾಡಿ ಶ್ಯಾಂಪೂವಿನ ನಂತರ ಇದರಿಂದ ಕೂದಲು ತೊಳೆಯಿರಿ. ವಾರದಲ್ಲಿ 3-4 ಬಾರಿ ಇದನ್ನು ಮಾಡುವುದರಿಂದ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ. 

click me!