ಸೆನ್ಸಿಟಿವ್ ಹಲ್ಲಿನ ಸಮಸ್ಯೆಯೇ? ಇಲ್ಲಿದೆ ಮನೆ ಮದ್ದು

By Web Desk  |  First Published May 19, 2019, 3:24 PM IST

ಬಿಸಿ ಬಿಸಿ ಕಾಫಿಯಾಗಲಿ, ಅಥವಾ ತಂಪು ಪಾನೀಯವೇ ಅಗಲಿ, ಬಾಯಿಗೆ ಬೀಳುತ್ತಿದ್ದಂತೆ ಬಡಬಡಾಯಿಸುತ್ತಾ ಕಚ್ಚಿಕೊಳ್ಳುವ ಹಲ್ಲುಗಳು, ಮುಚ್ಚಿಕೊಳ್ಳುವ ಕಣ್ಣುಗಳು- ಹೌದು, ಖಂಡಿತಾ ಇಲ್ಲೊಂದು ಸಮಸ್ಯೆಯಿದೆ, ಅದೇ ಸೆನ್ಸಿಟಿವ್ ಹಲ್ಲುಗಳದ್ದು. 


ಮೊದಲೇ ಬಾಯಿರುಚಿ ಜಾಸ್ತಿ. ಹಾಗಂತ ಏನಾದರೂ ತಿನ್ನಲು ಹೋದರೆ ಹಲ್ಲುಗಳು ಚುರ್ ಎನ್ನುತ್ತವೆ. ಈ ಸೆನ್ಸಿಟಿವ್ ಹಲ್ಲುಗಳ ಸಮಸ್ಯೆಯಿಂದ ಇಷ್ಟದ ಆಹಾರವನ್ನು ಸುಮ್ಮನೆ ಮಿಕಮಿಕ ನೋಡುತ್ತಾ ಕೂರಬೇಕಾಗಿದೆ.

Latest Videos

undefined

ಎಂದು ನೋಯುತ್ತಾರೆ ಎದುರು ಮನೆ ಶೀಲಾ ಆಂಟಿ. ಅವರಿಗೆ ಗೊತ್ತಿಲ್ಲ ಇದಕ್ಕೆ ಹಲವು ಪರಿಣಾಮಕಾರಿ ಮನೆಮದ್ದುಗಳಿವೆ ಎಂದು. ನೀವೂ ಈ ಸಮಸ್ಯೆ ಎದುರಿಸುತ್ತಿದ್ದು, ನಿಮಗೂ ಇದಕ್ಕೆ ಮನೆಯಲ್ಲೇ ಪರಿಹಾರವಿದೆ ಎಂದು ಗೊತ್ತಿಲ್ಲವಾದರೆ ಮುಂದೆ ಓದಿ.

ಹಲ್ಲು ತಿಕ್ಕದ ಮಕ್ಕಳಿಗೆ ಬರಬಹುದು ಹಾರ್ಟ್ ಪ್ರಾಬ್ಲಂ!

ಹಲ್ಲುಗಳ ನಿಧಾನವಾದ ಸವೆತ ಅಥವಾ ವಸಡುಗಳು ಸವೆದು ಹಲ್ಲುಗಳ ಬುಡ ಹೊರಬರುವುದರಿಂದ ಸೂಕ್ಷ್ಮ ಸಂವೇದಿ ದಂತಸಮಸ್ಯೆ ಎದುರಾಗುತ್ತದೆ. ಇದಕ್ಕೆ ವೈದ್ಯರಲ್ಲಿ ಚಿಕಿತ್ಸೆ ಇದ್ದೇ ಇದೆ. ಆದರೆ, ಹಲ್ಲಿನ ಸಮಸ್ಯೆಗಳಿಗೆ ವೈದ್ಯರ ಬಳಿ ಹೋಗುವವರು ವಿರಳ. ಅಂಥವರು ಮನೆಯಲ್ಲೇ ಹೀಗೆ ಮಾಡಬಹುದು.

ಉಪ್ಪುನೀರು ಮುಕ್ಕಳಿಸುವುದು

ಉಪ್ಪು ನೀರು ಅತ್ಯುತ್ತಮ ಕ್ರಿಮಿನಾಶಕವಾಗಿದ್ದು, ನೋವನ್ನೂ ನಿವಾರಿಸುವುದಲ್ಲದೆ, ಬಾಯಿಯನ್ನು ಸ್ವಚ್ಛಗೊಳಿಸುತ್ತದೆ. ಸ್ವಲ್ಪ ಬಿಸಿನೀರಿಗೆ ಉಪ್ಪನ್ನು ಸೇರಿಸಿ ಮುಕ್ಕಳಿಸಿ. 

ಎಣ್ಣೆ ಮುಕ್ಕಳಿಸುವುದು

ಎಳ್ಳೆಣ್ಣೆ ಅಥವಾ ಕೊಬ್ಬರಿಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಒಂದಿಷ್ಟು ಹೊತ್ತು ಮುಕ್ಕಳಿಸಿ, ಬಳಿಕ ಉಗಿಯಬೇಕು. ಇದರಿಂದ ಸೆನ್ಸಿಟಿವ್ ಹಲ್ಲುಗಳ ಸಮಸ್ಯೆ ತಕ್ಷಣಕ್ಕೆ ಹತೋಟಿಗೆ ಬರುತ್ತದೆ. 

ಹಲ್ಲು ಬ್ರಷ್ ಮಾಡಲೇಬಾರದು...ಯಾವಾಗ?

ಅರಿಶಿನದ ಪೇಸ್ಟ್

ಸ್ವಲ್ಪ ನೀರಿಗೆ ಅರಿಶಿನ ಪುಡಿ ಹಾಕಿ ಪೇಸ್ಟ್ ಮಾಡಿಕೊಂಡು ಇದರಿಂದ ಬ್ರಶ್ ಮಾಡಿ.  

ಪೇರಳೆ ಎಲೆ

ಪೇರಳೆ ಎಲೆಗಳಲ್ಲಿ ನೋವು ನಿವಾರಕ ಹಾಗೂ ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳಿವೆ. ಹೀಗಾಗಿ, ಮೂರ್ನಾಲ್ಕು ಪೇರಳೆ ಎಲೆಗಳನ್ನು ಜಗಿದು ಉಗಿಯುವುದರಿಂದ ಹಲ್ಲುನೋವು ಕಡಿಮೆಯಾಗುತ್ತದೆ. 

ಹಳದಿ ಹಲ್ಲಿನ ಹಿಂದಿನ ಇಂಟರೆಸ್ಟಿಂಗ್ ಫ್ಯಾಕ್ಟ್

ಬೆಳ್ಳುಳ್ಳಿ

ಮೂರರಿಂದ ನಾಲ್ಕು ಬೆಳ್ಳುಳ್ಳಿ ಎಸಳುಗಳನ್ನು ಜಗಿಯಿರಿ. ಆಗ ಬಾಯಿಯಲ್ಲಿ ಅಲಿಸಿನ್ ಎಂಬ ಆ್ಯಂಟಿ ಬ್ಯಾಕ್ಟೀರಿಯಲ್ ರಾಸಾಯನಿಕ ಉತ್ಪತ್ತಿಯಾಗುತ್ತದೆ. ಇದು ಹಲ್ಲುನೋವನ್ನು ನಿವಾರಿಸುತ್ತದೆ.

click me!