ಸೆಕ್ಸ್ ಡೌಟ್ಸ್‌‌ಗೆ ಡಿಜಿಟಲ್ ಮೊರೆ: ಭಾರತೀಯರು ಬಿದ್ದಿಲ್ಲ ಹಿಂದೆ

By Suvarna NewsFirst Published Jun 4, 2019, 3:16 PM IST
Highlights

ಭಾರತೀಯರಲ್ಲಿ ದಿನೇ ದಿನೆ ಆರೋಗ್ಯ ಸಂಬಂಧಿ ಕಾಳಜಿ ಹೆಚ್ಚುತ್ತಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ಅವರು ಅಂತರ್ಜಾಲದ ಮೊರೆ ಹೋಗುತ್ತಿದ್ದಾರೆ. ಲೈಂಗಿಕ ಆರೋಗ್ಯದ ವಿಷಯ ತಿಳಿದುಕೊಳ್ಳುವಲ್ಲೂ ಜನ ಹಿಂದೆ ಬಿದ್ದಿಲ್ಲ. 
 

ಆರೋಗ್ಯದ ಕಡೆ ಜನ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಗಮನ ವಹಿಸುತ್ತಿದ್ದಾರೆ. ಶಿಕ್ಷಣ, ಆರೋಗ್ಯ ವ್ಯವಸ್ಥೆಯಷ್ಟೇ ಅಲ್ಲದೆ, ಆನ್‌ಲೈನ್‌ನಲ್ಲಿ ಸಿಗುವ ಅಸಂಖ್ಯಾತ ಆರೋಗ್ಯ ಸಂಬಂಧಿ ಲೇಖನಗಳು, ಚಾಟ್‌ಲೈನ್‌ನಲ್ಲಿ ಪ್ರಶ್ನಿಸುವ ಅವಕಾಶ ಪ್ರತಿಯೊಬ್ಬರಿಗೂ ಆರೋಗ್ಯದ ವಿಷಯದಲ್ಲಿ ತಿಳಿವಳಿಕೆ ನೀಡುತ್ತಿವೆ. ಅದರಲ್ಲೂ ಲೈಂಗಿಕ ಆರೋಗ್ಯದ ವಿಷಯಕ್ಕೆ ಬಂದರೆ ವೈದ್ಯರ ಬಳಿ ತೆರಳಲು ಮುಜುಗರ ಪಡುವ ಹೆಚ್ಚಿನ ಭಾರತೀಯರಿಗೆ ಡಿಜಿಟಲ್ ಮಾಧ್ಯಮ ಉತ್ತಮ ವೇದಿಕೆ ಒದಗಿಸಿದೆ.  

ಈ ಸಂಬಂಧ ಎದುರಾಗುವ ನೂರಾರು ಪ್ರಶ್ನೆಗಳಿಗೆ ಆನ್‌ಲೈನ್‌ನಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದಾರಂತೆ ಭಾರತೀಯ ಹೊಸ ತಲೆಮಾರು. ಹೀಗೆ ಲೈಂಗಿಕ ಆರೋಗ್ಯ ಕುರಿತ ಡೌಟ್ಸ್‌ಗೆ ಡಿಜಿಟಲ್ ಪರಿಹಾರ ಕಂಡುಕೊಳ್ಳುವ ಭಾರತೀಯರಲ್ಲಿ ಕಳೆದೆರಡು ವರ್ಷಗಳಲ್ಲಿ ಶೇ.250ರಷ್ಟು ಹೆಚ್ಚಳವಾಗಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ. 

- ಆರೋಗ್ಯ ಸಂಬಂಧಿ ವೆಬ್‌ಸೈಟ್ ಪ್ರಾಕ್ಟೋ ಈ ಸಮೀಕ್ಷೆ ನಡೆಸಿದ್ದು, ಹೀಗೆ ಸೆಕ್ಷುಯಲ್ ಹೆಲ್ತ್ ಬಗ್ಗೆ ಆನ್‌ಲೈನ್‌ನಲ್ಲಿ ಹುಡುಕುವವರಲ್ಲಿ ಬಹುತೇಕರು 30 ವರ್ಷ ವಯಸ್ಸಿನೊಳಗಿನವರು ಎಂದು ಅದು ತಿಳಿಸಿದೆ.

- ಮಹಾನಗರಗಳಾದ ದೆಹಲಿ, ಬೆಂಗಳೂರು, ಮುಂಬಯಿ ಸೇರಿದಂತೆ ದೇಶಾದ್ಯಂತ ಲೈಂಗಿಕ ಆರೋಗ್ಯ ಕುರಿತು ಅರಿತುಕೊಳ್ಳಲು ಆನ್‌ಲೈನ್ ಬಳಸುವವರಲ್ಲಿ 2017ರಿಂದೀಚೆಗೆ ಒಟ್ಟು ಶೇ.268ರಷ್ಟು ಹೆಚ್ಚಳವಾಗಿದೆ.

- ಅದರಲ್ಲೂ ಡೌಟ್ಸ್ ಕ್ಲಿಯರ್ ಮಾಡಿಕೊಳ್ಳಲು ಡಿಜಿಟಲ್ ವೇದಿಕೆ ಬಳಸುವವರಲ್ಲಿ ಜೈಪುರ, ಅಹಮದಾಬಾದ್ ಹಾಗೂ ಲಕ್ನೋ ನಗರಗಳಲ್ಲಿ ಶೇ.500ಕ್ಕಿಂತಾ ಹೆಚ್ಚಳ ಕಂಡುಬಂದಿದೆ. 

ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ...

- ದೇಶಾದ್ಯಂತ ಸೆಕ್ಷುಯಲ್ ಹೆಲ್ತ್ ಬಗ್ಗೆ ಹುಡುಕಾಟ ನಡೆಸಿದವರಲ್ಲಿ ಶೇ. 43ರಷ್ಟು ಮಹಿಳೆಯರಾದರೆ, ಶೇ.57ರಷ್ಟು ಪುರುಷರಿದ್ದಾರೆ. ಮಹಿಳೆಯರು ಹೆಚ್ಚಾಗಿ ಪೀರಿಯಡ್ಸ್, ಬ್ರೆಸ್ಟ್ ಕ್ಯಾನ್ಸರ್ ಹಾಗೂ ಪ್ರಗ್ನೆನ್ಸಿ ಬಗ್ಗೆ ಪರಿಹಾರ ಹುಡುಕಿದ್ದರೆ, ಪುರುಷರು ಹಸ್ತಮೈಥುನ ಹಾಗೂ ಎರೆಕ್ಟೈಲ್ ಡಿಸ್ಫಂಕ್ಷನ್ ಬಗ್ಗೆ ಹೆಚ್ಚಾಗಿ ಸರ್ಚ್ ಮಾಡಿದ್ದಾರೆ. ಒಟ್ಟಾರೆ ಅರೋಗ್ಯ ಸಂಬಂಧಿ ಸರ್ಚ್‌ಗಳಲ್ಲಿ ಲೈಂಗಿಕ ಆರೋಗ್ಯ ವಿಷಯಗಳ ಹುಡುಕಾಟ ಶೇ.31.6ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ. 

- 50ಕ್ಕೂ ಹೆಚ್ಚು ನಗರಗಳ 13 ಕೋಟಿಗೂ ಹೆಚ್ಚು ರೋಗಿಗಳನ್ನು ಸರ್ವೆ ಒಳಗೊಂಡಿತ್ತು. 

ಈ ತರದ ಸೆಕ್ಸ್ ಡ್ರೀಮ್ಸ್ ಬೀಳುವುದು ಏಕೆ?

click me!