ಫ್ಯಾಮಿಲಿ ಪ್ಲಾನಿಂಗ್ ಇನ್ನು ಕಿವಿಯೋಲೆ ಧರಿಸಿದಷ್ಟೇ ಸುಲಭ!

By Web Desk  |  First Published Jun 4, 2019, 11:48 AM IST

ಫ್ಯಾಮಿಲಿ ಪ್ಲ್ಯಾನಿಂಗ್ ಎಂಬುದು ಕೇವಲ ಸರವೊಂದನ್ನು ಅಥವಾ ಕಿವಿಯೋಲೆ ಧರಿಸಿದಷ್ಟು ಸುಲಭವಾಗುವ ದಿನ ದೂರವಿಲ್ಲ. ಆಭರಣಗಳ ಮೂಲಕ ಗರ್ಭನಿರೋಧಕ ಹಾರ್ಮೋನ್‌ ದೇಹಕ್ಕೆ ಸೇರಿಸುವಂಥ  ತಂತ್ರಜ್ಞಾನವನ್ನು ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ.


ನಿರೋಧ್, ಟ್ಯಾಬ್ಲೆಟ್ ಇನ್ನಿತರೆ ಗರ್ಭ ನಿರೋಧಕ ಕಿರಿಕಿರಿಗಳಿಲ್ಲದೆ, ಸುಮ್ಮನೆ ಕಿವಿಯೋಲೆ ಧರಿಸಿದರೆ ಅಥವಾ ವಾಚ್ ಕಟ್ಟಿಕೊಂಡರೆ ಸಾಕು. ಕುಟುಂಬ ಕಲ್ಯಾಣ ಯೋಜನೆಯನ್ನು ಇಷ್ಟೊಂದು ಸರಾಗವಾಗಿಸುವತ್ತ ವಿಜ್ಞಾನಿಗಳು ಹೆಜ್ಜೆಯಿಟ್ಟಿದ್ದಾರೆ. ಗರ್ಭನಿರೋಧಕ ಹಾರ್ಮೋನ್‌ ಪ್ಯಾಚ್‌ಗಳನ್ನು ಆಭರಣಗಳಲ್ಲಿ ಅಳವಡಿಸಿ, ಅದು ಚರ್ಮಕ್ಕೆ ತಾಕುತ್ತಲೇ, ದೇಹ ಅದನ್ನು ಹೀರಿಕೊಳ್ಳುವ ತಂತ್ರಜ್ಞಾನವಿದು. 

ಪ್ರತಿದಿನ ತೆಗೆದುಕೊಳ್ಳಬೇಕಾದ ಔಷಧಗಳನ್ನು ಬಳಕೆದಾರ ಫ್ರೆಂಡ್ಲಿಯಾಗಿ ಮಾಡುವುದು ಈ ಹೊಸ ಡ್ರಗ್ ಟೆಕ್ನಾಲಜಿ ಉದ್ದೇಶವಾಗಿದ್ದು, ಕಾಂಟ್ರಾಸೆಪ್ಟಿವ್ಸ್ ಅಲ್ಲದೆ ಇತರೆ ಡ್ರಗ್‌ಗಳನ್ನೂ ಹೀಗೆ ಚರ್ಮದ ಮೂಲಕ ಒಳಕಳಿಸುವ ತಂತ್ರಜ್ಞಾನ ಬೆಳೆಯುತ್ತಿದೆ. 



'ಹೆಚ್ಚಿನ ಗರ್ಭನಿರೋಧಕ ಆಯ್ಕೆಗಳು ಇದ್ದಷ್ಟೂ ಮಹಿಳೆಯರು ಅದರ ಲಾಭ ಪಡೆಯುವುದು ಸುಲಭವಾಗುತ್ತದೆ. ಆಭರಣ ಧರಿಸುವುದು ಮಹಿಳೆಯರ ದಿನಚರಿಯ ಭಾಗವಾಗಿದ್ದು, ಇದನ್ನು ಗರ್ಭನಿರೋಧಕ ಡ್ರಗ್ ಸೇವನೆಗೆ ಬಳಸುವುದು ಅವರಲ್ಲಿ ಮಾನಸಿಕ ಕಿರಿಕಿರಿ ತಪ್ಪಿಸುತ್ತದೆ. ಈ ತಂತ್ರಜ್ಞಾನವು ಬೇಡದ ಗರ್ಭವನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ,' ಎನ್ನುತ್ತಾರೆ ಜಾರ್ಜಿಯಾ ತಂತ್ರಜ್ಞಾನ ಸಂಸ್ಥೆಯ ಮಾರ್ಕ್ ಪ್ರಾಸ್ನಿಟ್ಜ್. 
ಮೋಶನ್ ಸಿಕ್‌ನೆಸ್, ಮೆನೋಪಾಸ್ ಸಮಸ್ಯೆಗಳ ನಿಯಂತ್ರಣಕ್ಕೆ ಹಾಗೂ ಸಿಗರೇಟ್ ಸೇವನೆ ಬಿಡಿಸಲು ಟ್ರಾನ್ಸ್‌ಡರ್ಮಲ್ ಪ್ಯಾಚ್ ಟೆಕ್ನಾಲಜಿ ಈಗಾಗಲೇ ಬಳಕೆಯಲ್ಲಿದೆ. ಆದರೆ, ಈ ತಂತ್ರಜ್ಞಾನವನ್ನು ಆಭರಣಗಳಲ್ಲಿ ಅಳವಡಿಸುತ್ತಿರುವುದು ಇದೇ ಮೊದಲು. ಈ ವಿಧಾನದಲ್ಲಿ ಇಡೀ ದಿನ ಆಭರಣ ಧರಿಸಿ ಮಲಗುವಾಗ 8 ಗಂಟೆಗಳ ಕಾಲ ತೆಗೆದಿಟ್ಟರೂ, ಪ್ಯಾಚ್‌ನಲ್ಲಿರುವ ಡ್ರಗ್ ಅಗತ್ಯ ಪ್ರಮಾಣದಲ್ಲಿ ರಕ್ತದಲ್ಲಿ ಹಾರ್ಮೋನ್ ಬಿಡುಗಡೆ ಮಾಡುವುದರಿಂದ  ಏನೂ ಸಮಸ್ಯೆಯಾಗುವುದಿಲ್ಲವಂತೆ. 

Tap to resize

Latest Videos

ಕೈ ಕೈ ಹಿಡಿದು ನಡೆಯುವವಳು ಬರೀ ಸ್ನೇಹಿತೆನಾ?

ಈ ಪ್ಯಾಚ್ ಅನ್ನು ಕಿವಿಯೋಲೆಯ ಹಿಂಭಾಗದಲ್ಲಿ ಅಳವಡಿಸಲು ಸುಲಭವಾಗಿದ್ದು, ವಾರಕ್ಕೊಮ್ಮೆ ಹೊಸ ಪ್ಯಾಚ್ ಅಂಟಿಸಬೇಕಾಗುತ್ತದೆ. ಇದರ ಇನ್ನೊಂದು ಪ್ರಯೋಜನವೆಂದರೆ ಇದನ್ನು ಬೇರೆ ಬೇರೆ ಕಿವಿಯೋಲೆಗೆ ಬದಲಿಸಬಹುದು ಎಂದು ವಿವರಿಸುತ್ತಾರೆ ಪ್ರಾಸ್ನಿಟ್ಜ್.

click me!