ಇಶಾ ಅಂಬಾನಿ ಅವಳಿ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಓರಿ ಹಾಕ್ಕೊಂಡು ಬಂದ ಡ್ರೆಸ್ ಬೆಲೆ ಇಷ್ಟೊಂದಾ?

By Vinutha Perla  |  First Published Nov 20, 2023, 12:05 PM IST

ಯಾವಾಗಲೂ ಬಾಲಿವುಡ್ ಸೆಲೆಬ್ರಿಟಿಗಳ ಜೊತೆಯೇ ಕಾಣಿಸಿಕೊಳ್ಳೋ ಓರಿ ಇತ್ತೀಚಿಗೆ ಇಶಾ ಅಂಬಾನಿ ಅವರ ಅವಳಿಗಳ ಹುಟ್ಟುಹಬ್ಬದ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದನು. ಅದರಲ್ಲೂ ಆತ ಧರಿಸಿದ್ದ ಪ್ರಿಂಟೆಂಡ್‌ ಕೋ-ಆರ್ಡ್ ಸೆಟ್ ಹೆಚ್ಚು ಸುದ್ದಿಯಾಗಿದೆ. ಇಷ್ಟಕ್ಕೂ ಅದರ ಬೆಲೆ ಎಷ್ಟು ಗೊತ್ತಾ?


ಬಾಲಿವುಡ್ ನಟಿಯರ ಜೊತೆ ಬಾಲಿವುಡ್‌ನ ಇತ್ತೀಚಿನ ಎಲ್ಲಾ ಸಮಾರಂಭಗಳಲ್ಲಿ ಮಿಂಚುತ್ತಿದ್ದ ಓರಿ ಆಲಿಯಾಸ್ ಒರ್ಹನ್ ಅವತ್ರಾಮಣಿ ಯಾರೆಂಬ ಕುತೂಹಲ ಬಹುತೇಕರ ಎಲ್ಲರಿಗಿತ್ತು. ಬಾಲಿವುಡ್‌ ಮಂದಿಯ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಈ ಓರಿ ಇದ್ದೇ ಇರ್ತಾನೆ. ಬಾಲಿವುಡ್‌ನ ಬಹುತೇಕ ವಿಶೇಷವಾಗಿ ಹೆಣ್ಣು ಮಕ್ಕಳ ಜೊತೆ ಸದಾ ಫೋಟೋಗೆ ಫೋಸ್ ಕೊಡುವ ಓರಿ ಬಗ್ಗೆ ಬಾಲಿವುಡ್‌ನ ಹೆಂಗೆಳೆಯರಿಗೂ ಅಷ್ಟೇ ಪ್ರೀತಿ ಇದೆ. ಯಾರಿಗೂ ಅಷ್ಟು ಸುಲಭವಾಗಿ ಸಿಗದ ನಟಿಯರೆಲ್ಲಾ ಹೇಗೆ ಈತನಿಗೆ ಸುಲಭವಾಗಿ ಸಿಗುತ್ತಿದ್ದಾರೆ. ಜೊತೆಗೆ ಮೈಗೆ ಮೈ ಅಂಟಿಸಿ ಹೇಗೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ.

ಪಾಪರಾಜಿಗಳು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಈತ ಕರೀನಾ, ದೀಪಿಕಾರಿಂದ ಹಿಡಿದು ಬಾಲಿವುಡ್‌ನ ಝೆಡ್ ಜನರೇಷನ್‌ ಜೊತೆಯೂ ಮಿಂಚುತ್ತಿರುವುದು ನೋಡಿ ಸಹಜ ಕುತೂಹಲದಿಂದ ಜನ ಪ್ರಶ್ನೆ ಮಾಡಿದ್ದು, ಇದಕ್ಕೆ ಈಗ ನೆಟ್ಟಿಗರೊಬ್ಬರು ಸಾಕ್ಷ್ಯ ಸಮೇತ ಉತ್ತರಿಸಿದ್ದರು. ವಿಜಯ್ ಪಟೇಲ್ ಎಂಬುವವರು ಟ್ವಿಟ್ಟರ್‌ನಲ್ಲಿ ಸರಣಿ ಟ್ವಿಟ್ ಮಾಡಿ, ಓರಿ ಅವತ್ರಮಣಿದು ತುಂಬಾ ಶ್ರೀಮಂತ ಹಿನ್ನೆಲೆ ಇರುವ ಕುಟುಂಬ. ರಿಯಲ್ ಎಸ್ಟೇಟ್, ಹೊಟೇಲ್ ಉದ್ಯಮ, ಮದ್ಯ ಉದ್ಯಮದಲ್ಲಿ ಹೆಸರು ಮಾಡಿದ್ದು, ಶ್ರೀಮಂತಿಕೆಗೇನು ಕೊರತೆ ಇಲ್ಲ. ಭಾರತದ ಬಹುತೇಕ ಶ್ರೀಮಂತರ ಮಕ್ಕಳಂತೆ ಈತನೂ ಅಮೆರಿಕದಲ್ಲಿ ಶಿಕ್ಷಣ ಮುಗಿಸಿದ್ದಾನೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದ್ದರು.

Tap to resize

Latest Videos

ನೋಡಲು ವಿಚಿತ್ರ ಅನಿಸೋ ಈ ಓರಿ ನೋಡಿದ್ರೆ ಬಾಲಿವುಡ್ ಮಂದಿ ಹಿಂಗ್ಯಾಕೆ ಆಡ್ತಾರೆ? ಡ್ರಗ್ ಪೆಡ್ಲರ್ ಅಂತನಾ?

ಇಶಾ ಅಂಬಾನಿ ಮಕ್ಕಳ ಬರ್ತ್‌ಡೇ ಪಾರ್ಟಿಗೆ ಕಾಸ್ಟ್ಲೀ ಬಟ್ಟೆ ಧರಿಸಿ ಬಂದ ಓರಿ
ಯಾವಾಗಲೂ ಬಾಲಿವುಡ್ ಸೆಲೆಬ್ರಿಟಿಗಳ ಜೊತೆಯೇ ಕಾಣಿಸಿಕೊಳ್ಳೋ ಓರಿ ಇತ್ತೀಚಿಗೆ ಶಾರೂಕ್‌ ಖಾನ್‌ ಬರ್ತ್‌ಡೇ ಪಾರ್ಟಿಯಲ್ಲಿ ಎಲ್ಲರ ಗಮನ ಸೆಳೆದಿದ್ದನು. ಆ ನಂತರ ಸದ್ಯ ಇಶಾ ಅಂಬಾನಿ ಅವರ ಅವಳಿಗಳ ಹುಟ್ಟುಹಬ್ಬದ (Twins Birthday) ಸಮಾರಂಭದಲ್ಲಿ ಓರಿ ಕಾಣಿಸಿಕೊಂಡಿದ್ದನು. ಅದರಲ್ಲೂ ಆತ ಧರಿಸಿದ್ದ ಪ್ರಿಂಟೆಂಡ್‌ ಕೋ-ಆರ್ಡ್ ಸೆಟ್ ಹೆಚ್ಚು ಸುದ್ದಿಯಾಗಿದೆ.

ಮುಖೇಶ್ ಅಂಬಾನಿ, ನೀತಾ ಅಂಬಾನಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜಿಯೋ ವರ್ಲ್ಡ್ ಗಾರ್ಡನ್‌ನಲ್ಲಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ಅವರ ಅವಳಿ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂಭ್ರಮಾಚರಣೆಯಲ್ಲಿ ಎಸ್‌ಆರ್‌ಕೆ, ಕತ್ರಿನಾ ಕೈಫ್, ಆದಿತ್ಯ ರಾಯ್ ಕಪೂರ್, ಅನನ್ಯಾ ಪಾಂಡೆ, ಮತ್ತು ಓರಿ ಮುಂತಾದ ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.

ಬಿಟೌನ್ ನಟಿಯರ ಜೊತೆ ಮತ್ತೆ ಮಿಂಚಿದ ಓರಿ: ಈತ ತೊಡೆ ಎದೆ ಮೇಲೆ ಕೈ ಇಟ್ರೂ ಇವರು ತಣ್ಣಗಿರೋದೇಕೆ?

ಸೆಲೆಬ್ರಿಟಿಗಳು ಕ್ಯಾಶುಯಲ್ ಮತ್ತು ಚಿಕ್ ಥೀಮಿನ ಬಟ್ಟೆಗಳನ್ನು ಧರಿಸಿದ್ದರು. ಜಿಪ್ಸಿ ಪ್ರಿಂಟ್‌ನೊಂದಿಗೆ ಕೋ-ಆರ್ಡ್ ಸೆಟ್ ಧರಿಸಿದ ಓರಿ ಎಲ್ಲರ ಗಮನ ಸೆಳೆದನು. ಇದರ ಬೆಲೆ ಮಾತ್ರ ಅಬ್ಬಬ್ಬಾ ಅನ್ನುವಂತಿದೆ. ಓರ್ಹಾನ್ ಅವರು ಮಜೋಲಿಕಾ ಪ್ರಿಂಟ್ ಕಾಟನ್ ಚಿನೋಸ್ ಶಾರ್ಟ್ಸ್‌ನೊಂದಿಗೆ ನೀಲಿ ಮತ್ತು ಬಿಳಿ ಡೋಲ್ಸ್ ಗಬ್ಬಾನಾ ಅವರ ಮಜೋಲಿಕಾ ಬೇಸಿಗೆ ಕಾಟನ್ ಪ್ರಿಂಟ್ ಶರ್ಟ್ ಧರಿಸಿದ್ದರು. ವೆಬ್‌ಸೈಟ್‌ನಲ್ಲಿ ಶರ್ಟ್‌ನ ಮೂಲ ಬೆಲೆ ಅಂದಾಜು 71,746 ರೂ. ಮತ್ತು ಶಾರ್ಟ್ಸ್  26,400 ರೂ. ಆಗಿದೆ. 

ಓರಿ ಛಾಯಾಗ್ರಾಹಕರನ್ನು ನೋಡಿ ನಕ್ಕು ಕಲ್ಲಂಗಡಿ ಆಕಾರದಲ್ಲಿರುವ ತನ್ನ ವಿಚಿತ್ರವಾದ ಫೋನ್ ಕವರ್ ಅನ್ನು ಅವರಿಗೆ ತೋರಿಸಿದನು. ಹಳದಿ ಬಣ್ಣದ ಸನ್‌ಗ್ಲಾಸ್‌ಗಳನ್ನು ಸಹ ಹಿಡಿದಿದ್ದನು. ಒಟ್ನಲ್ಲಿ ಓರಿ ಹವಾ ಸೆಲೆಬ್ರಿಟಿಗಳ ಮಧ್ಯೆ ಚರ್ಚೆಯಾಗ್ತಿರೋದಂತೂ ನಿಜ.

click me!